ETV Bharat / state

ಅಮೃತ್ ನಗರೋತ್ಥಾನ ಯೋಜನೆಯಡಿ ಪೂರ್ವ ವಲಯಕ್ಕೆ 450 ಕೋಟಿ ರೂ. ಬಿಡುಗಡೆ: ಸಚಿವ ಅಶ್ವತ್ಥನಾರಾಯಣ

ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಚಿವರ ವರ್ಚ್ಯುವಲ್​ ಸಭೆ- ನಗರೋತ್ಥಾನ ಯೋಜನೆಯಡಿ ಪೂರ್ವ ವಲಯಕ್ಕೆ 450 ಕೋಟಿ ರೂ. ಮಂಜೂರು- ಡಾ.ಸಿ.ಎನ್ ​ಅಶ್ವತ್ಥನಾರಾಯಣ್​ ಮಾಹಿತಿ

amruth nagarotthana scheme meeting
ಅಮೃತ್​ ನಗರೋತ್ಥಾನ ಯೋಜನೆ
author img

By

Published : Jul 6, 2022, 12:20 PM IST

ಬೆಂಗಳೂರು: ಅಮೃತ್ ನಗರೋತ್ಥಾನ ಯೋಜನೆಯಡಿ ನಗರದ ಪೂರ್ವ ವಲಯಕ್ಕೆ 450 ಕೋಟಿ ರೂಪಾಯಿ ಮಂಜೂರಾಗಿದ್ದು, ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್ ಕರೆಯಲಾಗಿದೆ ಎಂದು ಪೂರ್ವ ವಲಯದ ಉಸ್ತುವಾರಿ ಆಗಿರುವ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್​ ತಿಳಿಸಿದ್ದಾರೆ.

ಮಳೆಯಿಂದಾಗಬಹುದಾದ ತೊಂದರೆಗಳ ಕುರಿತು ಬಿಬಿಎಂಪಿ ಪೂರ್ವ ವಲಯದ ಅಧಿಕಾರಿಗಳ ಜೊತೆ ವರ್ಚ್ಯುವಲ್​ ಸಭೆ ನಡೆಸಿದ ಅವರು 450 ಕೋಟಿ ರೂ.ಗಳಲ್ಲಿ 180 ಕೋಟಿ ರೂಪಾಯಿಯನ್ನು ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಹೂಳೆತ್ತುವ ಕೆಲಸಕ್ಕೆ ವಿನಿಯೋಗಿಸಲಾಗುವುದು. ಇದಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ' ಎಂದರು.

ಪೂರ್ವ ವಲಯದ ವ್ಯಾಪ್ತಿಯ ರಸ್ತೆಗಳಲ್ಲಿ 100 ಕಡೆಗಳಲ್ಲಿ ಮಳೆ ನೀರು ನಿಂತು ತೊಂದರೆ ಆಗುತ್ತಿದೆ. ಇದನ್ನು ಸಂಬಂಧಿಸಿದ ಎಂಜಿನಿಯರುಗಳು ತ್ವರಿತವಾಗಿ ಸರಿಪಡಿಸಬೇಕು. ರಸ್ತೆ ಮಾಡುವಾಗಲೇ ಇಂತಹ ಅಂಶಗಳನ್ನು ಗಮನಿಸಬೇಕು. ಇಲ್ಲದಿದ್ದರೆ ತಪ್ಪಿತಸ್ಥ ಎಂಜಿನಿಯರ್​ಗಳನ್ನು ಸಸ್ಪೆಂಡ್ ಮಾಡಲಾಗುವುದು. ಜತೆಗೆ ಮಳೆನೀರು ನಿಂತು ಸಮಸ್ಯೆ ಆಗುತ್ತಿರುವ ಗೆದ್ದಲಹಳ್ಳಿ ಸೇತುವೆ ಬಳಿ ನಿಗಾ ಇಟ್ಟು, ಪರಿಸ್ಥಿತಿಯನ್ನು ಅವಲೋಕಿಸುತ್ತಿರಬೇಕು ಎಂದು ಎಚ್ಚರಿಸಿದ್ದಾರೆ.

ಇದರ ಜೊತೆಗೆ ಒತ್ತುವರಿಗಳನ್ನು ತೆರವು ಮಾಡಬೇಕು. ಇದರಿಂದ ಸಂತ್ರಸ್ತರಾಗುವವರಿಗೆ ಕೊಳೆಗೇರಿ ನಿರ್ಮೂಲನ ಮಂಡಳಿ ವತಿಯಿಂದ ಸೂಕ್ತ ವಸತಿ ಸೌಕರ್ಯ ಒದಗಿಸಿ ಕೊಡಲಾಗುವುದು ಎಂದು ಅವರು ಭರವಸೆ ನೀಡಿದರು. ಕಳೆದ ಬಾರಿ ಮಳೆಯಿಂದ ಪೂರ್ವ ವಲಯದಲ್ಲಿ ಸಂತ್ರಸ್ತರಾಗಿದ್ದವರ ಪೈಕಿ 874 ಮಂದಿಗೆ ತಲಾ 25 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ.

200 ಮಂದಿಗೆ ಪರಿಹಾರ ವಿತರಿಸಲು ತಾಂತ್ರಿಕ ಅಡಚಣೆ ಎದುರಾಗಿದೆ. ಇದನ್ನು ಕೂಡ ಸದ್ಯವೇ ಪರಿಹರಿಸಿ, ಅವರಿಗೂ ಪರಿಹಾರ ಧನ ಸಿಗುವಂತೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಸಭೆಯಲ್ಲಿ ಬಿಬಿಎಂಪಿ ಪೂರ್ವ ವಲಯದ ಆಯುಕ್ತ ಪಿ.ಎನ್. ರವೀಂದ್ರ ಸೇರಿದಂತೆ ಆ ಭಾಗದ ಮುಖ್ಯ ಎಂಜಿನಿಯರ್​ಗಳು ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ: ಮಳೆ ಹಾನಿ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ಸಿಎಂ ಬೊಮ್ಮಾಯಿ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.