ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿರುವುದಕ್ಕೆ ವೈರಲ್ ಆಗಿರುವ ವಿಡಿಯೋ ನಿದರ್ಶನವಾಗಿದ್ದು, ಕೂಡಲೇ ಯತೀಂದ್ರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತ್ತೊಮ್ಮೆ ವೈ ಎಸ್ ಟಿ ಅನ್ನೋದು ಸುದ್ದಿಯಲ್ಲಿದೆ. ಚುನಾಯಿತ ಪ್ರತಿನಿಧಿ ಅಲ್ಲದವರ ಎಟಿಎಂ ಸರ್ಕಾರ ಆಗಿದೆ. ತಂದೆಯ ಹೆಸರಲ್ಲಿ ಅಧಿಕಾರ ದುರ್ಬಳಕೆ ಆಗುತ್ತಿದೆ. ಈ ರೀತಿಯ ವ್ಯವಸ್ಥೆಗೆ ಕಣ್ಣ ಮುಂದೆಯೇ ಸಾಕ್ಷಿ ಇದೆ. ಈ ಸಂಬಂಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕಾನೂನಿನ ಬಗ್ಗೆ ಮಾತನಾಡೋ ಸಿದ್ದರಾಮಯ್ಯ ಈಗ ಏನು ಹೇಳ್ತಾರೆ ಎಂದು ಪ್ರಶ್ನಿಸಿದ್ದಾರೆ.
ಆಡಳಿತದಲ್ಲಿ ಯತೀಂದ್ರ ಹಸ್ತಕ್ಷೇಪ ಇಲ್ಲ ಅನ್ನೋದೆಲ್ಲ ಸುಳ್ಳು, ಎಲ್ಲದರಲ್ಲೂ ಹಸ್ತಕ್ಷೇಪ ನಡೆಯುತ್ತಿದೆ. ಎಲ್ಲದರಲ್ಲೂ ಕ್ಯಾಂಪೇನ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಬರ ನಿರ್ವಹಣೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಲೂಟಿ ಹೊಡೆದಿರೋದಕ್ಕೆ ಐಟಿ ದಾಳಿ ಮಾಡಿದಾಗ ಸಾಕ್ಷಿ ಸಿಕ್ಕಿದೆ. ಆರ್ ಡಿ ಪಾಟೀಲ್ ಕಾಲ್ ಚೆಕ್ ಮಾಡಿದಾಗ 30 ಬಾರಿ ಕರೆ ಮಾಡಿರುವ ಲಿಸ್ಟ್ ಸಿಕ್ಕಿದೆ ಎಂದು ಅಶ್ವತ್ಥ ನಾರಾಯಣ ಆರೋಪಿಸಿದ್ದಾರೆ.
ಪೊಲೀಸ್ ಬೋರ್ಡ್ ಅಂತಿದೆ. ಅದರಿಂದ ಪಟ್ಟಿ ಆದ ಮೇಲೆ ಸರ್ಕಾರ ತಡೆಯುವಂತಿಲ್ಲ. ಆದರೂ ಸರ್ಕಾರವೇ ತಡೆಯುತ್ತಿದೆ. ನೀವೇನಾದ್ರೂ ಮಾಡಿಕೊಳ್ಳಿ, ನಾವಿರೋದು ಲೂಟಿ ಮಾಡೋಕೆ, ನಮ್ಮದು ಎಟಿಎಂ ಸರ್ಕಾರ ಅಂತ ಇದ್ದಾರೆ ಎಂದು ಪೊಲೀಸ್ ಇಲಾಖೆಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಖಂಡಿಸಿದ್ದಾರೆ.
ಇದನ್ನೂ ಓದಿ : ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕವನ್ನ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ : ಅಶ್ವತ್ಥ ನಾರಾಯಣ್
ವರ್ಗಾವಣೆಗೆ ಟೈಮ್ ಲೈನ್ ಎಲ್ಲಿದೆ. 50% ಗಿಂತ ಹೆಚ್ಚು ವರ್ಗಾವಣೆ ಆಗಿರುವ ಉದಾಹರಣೆ ಇದೆ. ಕಾನೂನಿನ ಬಗ್ಗೆ ಎಳ್ಳಷ್ಟು ಗೌರವ ಇಲ್ಲ. ಟ್ರಾನ್ಸ್‌ಫರ್ ಲಾಬಿ, ಭ್ರಷ್ಟಾಚಾರ ಎಲ್ಲವೂ ನಡೆಯುತ್ತಿದೆ. ವರ್ಷವಿಡೀ ವರ್ಗಾವಣೆ ಹಬ್ಬಾನೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ : ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿರೋಧಿಸಿ ಹೆಚ್ಡಿಕೆ ನಡೆಸುವ ಸತ್ಯಾಗ್ರಹಕ್ಕೆ ಬಿಜೆಪಿ ಬೆಂಬಲ : ಅಶ್ವತ್ಥ ನಾರಾಯಣ್
ಕೆಇಎ ಪರೀಕ್ಷೆಗೆ ಹಿಜಾಬ್ ಧರಿಸಲು ಅನುಮತಿ ನೀಡಿದ್ದಕ್ಕೆ ಕಿಡಿಕಾರಿದ ಅಶ್ವತ್ಥ ನಾರಾಯಣ, ಮೊದಲು ತಾಳಿ, ಕಾಲುಂಗುರ ಬೇಡ ಅಂತ ಮಾಡಿದ್ದರು. ಈಗ ಎಲ್ಲವನ್ನೂ ಬಿಡ್ತೀವಿ ಅಂತಿದ್ದಾರೆ. ನೀಟ್ ಪರೀಕ್ಷೆಯಲ್ಲಿ ದುಪ್ಪಟಾ ಧರಿಸಲು ಸಹ ಬಿಡುತ್ತಿರಲಿಲ್ಲ. ನೀಟ್ ನಿಯಮ ಫಾಲೋ ಮಾಡಿ. ಅಧಿಕಾರದ ಅಮಲಿನಲ್ಲಿ ಮಲಗಿದ್ದೀರಿ. ಈಗಲಾದರೂ ಸಮರ್ಪಕವಾಗಿ ಕೆಲಸ ಮಾಡಿ ಅಂತ ಮಾಜಿ ಡಿಸಿಎಂ ಸಲಹೆ ನೀಡಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಪಕ್ಷದ ತುಂಬೆಲ್ಲಾ ಇರುವುದೇ ದಲ್ಲಾಳಿಗಳು : ಡಾ. ಸಿ ಅಶ್ವತ್ಥ ನಾರಾಯಣ ವಾಗ್ದಾಳಿ