ಮಹದೇವಪುರ( ಬೆಂಗಳೂರು): ಮಹಾಮಾರಿ ಕೊರೊನಾ 3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ತಜ್ಞರು ವರದಿ ನೀಡುತ್ತಿರುವ ಹಿನ್ನೆಲೆ ಪೋಷಕರು ಈಗಿಂದಲೇ ಮಕ್ಕಳ ಬಗ್ಗೆ ಜಾಗೃತರಾಗಿರಬೇಕೆಂದು ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರು ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ವರ್ತೂರು, ಹಗದೂರು, ಕಾಡುಗುಡಿ ವಾರ್ಡ್‍ಗಳಲ್ಲಿ ಮತ್ತು ಗ್ರಾಮಾಂತರ ಭಾಗದ ಕಾಟಂನಲ್ಲೂರು ಬಿಜೆಪಿ ಕಚೇರಿ ಬಳಿ ಆಟೋ, ಕಾರು, ಟೆಂಪೋ ಚಾಲಕರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ, ಕ್ಷೌರಿಕರು ಸೇರಿದಂತೆ 15 ಸಾವಿರ ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಿದರು.
ನಂತರ ಕ್ಷೇತ್ರದಲ್ಲಿ ಕೊರೊನಾದಿಂದ ಮೃತಪಟ್ಟ ಕುಟುಂಬದವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಮಕ್ಕಳ ವಿಧ್ಯಾಭ್ಯಾಸ ಮತ್ತು ಆರ್ಥಿಕ ಸಮಸ್ಯೆ ಇದ್ದರೆ ನೆರವು ಬೇಕಾದರೆ ಹಾಗೂ ಯಾವುದೇ ಸಹಾಯಬೇಕಾದಲ್ಲಿ ತಮ್ಮನ್ನ ಮತ್ತು ನಮ್ಮ ಮುಖಂಡರನ್ನ ಭೇಟಿ ಮಾಡುವಂತೆ ತಿಳಿಸಿದರು. ನಂತರ ಮಾತನಾಡಿದ ಅವರು. ಪೋಷಕರನ್ನು ಕಳೆದುಕೊಂಡ ಮಕ್ಕಳ ವಿದ್ಯಾಭ್ಯಾಸ ವೆಚ್ಚವನ್ನು ನಾನು ಹಾಗೂ ನಮ್ಮ ಮುಖಂಡರು ವಹಿಸಿಕೊಂಡಿದ್ದು, ಶಾಲೆ,ಕಾಲೇಜು ಓದುತ್ತಿರುವಂತಹ ಮಕ್ಕಳಿಗೆ ಸಂಪೂರ್ಣ ಶುಲ್ಕವನ್ನ ನೀಡುವುದಾಗಿ ತಿಳಿಸಿದರು.
ಆಕ್ಸಿಜನ್ ಕಾನ್ಸ್ನ್ಟ್ರೇಟರ್ ದಾನ: ಕೊರೊನಾ 3ನೇ ಅಲೆಯಿಂದ ಮಕ್ಕಳಿಗೆ ಹೆಚ್ಚು ತೊಂದರೆಯಾಗುವ ಆತಂಕವಿದೆ ಎಂದು ವರದಿಗಳು ಬರುತ್ತಿವೆ. ಹಾಗಾಗಿ ಪೋಷಕರು ಈಗನಿಂದಲೇ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ ಅವರು, ಕ್ಷೇತ್ರದಲ್ಲಿ ಕೋವಿಡ್ ಕೇರ್ ಹಾಗೂ ಟ್ರೈಯಾಜ್ ಸೆಂಟರ್ಗಳು ಕಾರ್ಯನಿರ್ವಹಿಸುತ್ತಿದ್ದು, ರೋಟರಿ ಕ್ಲಬ್ ವತಿಯಿಂದ ನಾಲ್ಕು ಆಕ್ಸಿಜನ್ ಕಾನ್ಸ್ನ್ಟ್ರೇಟರ್ ದಾನವಾಗಿ ನೀಡಲಾಗಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.
ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡುತ್ತಾ ಬಂದಿದೆ. ಹಾಗೆಯೇ ಜೂನ್ 21 ರಿಂದ 18 ವರ್ಷ ಮೆಲ್ಪಟ್ಟವರೆಲ್ಲರಿಗೂ ಲಸಿಕೆ ನೀಡಲು ಸಿದ್ದತೆ ಮಾಡಲಾಗುತ್ತಿದೆ. ಪ್ರತಿಯೊಬ್ಬರು ಕೋವಿಡ್ -19 ಹರಡದಂತೆ ತಡೆಯಲು ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ, ಮಾಸ್ಕ್, ಸ್ಯಾನಿಟೈಸರ್ ಹಾಕಿಕೊಳ್ಳಬೇಕು ಎಂದರು.
60 ಸಾವಿರ ಮೆಡಿಕಲ್ ಕಿಟ್: ಇದೇ ಸಂದರ್ಭದಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಕೊರೊನಾದಿಂದ ಮೃತಪಟ್ಟವರ ಕುಟುಂಬದಲ್ಲಿನ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ವೈಯಕ್ತಿಕವಾಗಿ ಭರಿಸುವುದಾಗಿ ತಿಳಿಸಿದರು. ಕೊರೊನಾ ಮೊದಲನೇ ಅಲೆಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ರೇಷನ್ ಕಿಟ್, 7 ಲಕ್ಷ ಜನಕ್ಕೆ ಊಟವನ್ನ ಕೊಟ್ಟಿದ್ದೀವಿ. 60 ಸಾವಿರ ಮೆಡಿಕಲ್ ಕಿಟ್, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಇತರ ವಸ್ತುಗಳನ್ನು ವಿತರಣೆ ಮಾಡಲಾಗಿತ್ತು. ಅದೇ ರೀತಿ 2ನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋ, ಕ್ಯಾಬ್, ಟೆಂಪೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಕೂಲಿ ಕಾರ್ಮಿಕರಿಗೆ ಸಾವಿರಾರು ದಿನಸಿ ಕಿಟ್ಗಳನ್ನು ನಾನು ಮತ್ತು ನಮ್ಮ ಮುಖಂಡರು ಸೇರಿ ವಿತರಣೆ ಮಾಡುತ್ತೇವೆ ಎಂದು ಹೇಳಿದರು.
ಓದಿ: ಸೋಂಕಿತರಿಂದ ಲಕ್ಷಾಂತರ ರೂಪಾಯಿ ವಸೂಲಿ ಆರೋಪ: ಬೆಂಗಳೂರಿನ ಖಾಸಗಿ ಆಸ್ಪತ್ರೆ ಎಂಡಿ ವಿರುದ್ಧ ಎಫ್ಐಆರ್