ಬೆಂಗಳೂರು: ಇಲ್ಲಿನ ಹಲಸೂರುಗೇಟ್ ಠಾಣಾ ವ್ಯಾಪ್ತಿಗೆ ಬರುವ ದಿ ಸನ್ ಸ್ಮರ್ ಎಂಟರ್ಪ್ರೈಸಸ್ ಅಂಗಡಿಯಿಂದ ಸುಮಾರು 1 ಕೆಜಿ ಚಿನ್ನದ ಗಟ್ಟಿಯನ್ನು ಪಡೆದು, ಹಣ ನೀಡುವುದಾಗಿ ನಂಬಿಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮಹಾರಾಷ್ಟ್ರ ಸತಾರಾ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಸೂರಜ್ ಸದಾಶಿವ (31) ಬಂಧಿತ ಆರೋಪಿ. ಈತನಿಂದ 900 ಗ್ರಾಂ ಗಟ್ಟಿ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 420, 406ರ ಅಡಿ ಈತನನ್ನು ಬಂಧಿಸಲಾಗಿದೆ.
ಹಲಸೂರು ಗೇಟ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಹರ್ಷವರ್ಧನ್ ಹಾಗೂ ಸಿಬ್ಬಂದಿಯ ಸೇರಿದಂತೆ ವಿಶೇಷ ತಂಡ ರಚಿಸಿ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿತ್ತು.