ಬೆಂಗಳೂರು: ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ವಾಹನ , ಕಾರು ಜಖಂ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ನೀತಿನ್ ,ಯಶವಂತ, ಆಶ್ರಯ್, ಬಾಲಾಜಿ, ಕಿರಣ್ ರೆಡ್ಡಿ , ಮುತ್ತು, ಚರಣ್ ರಾಜ್ ಬಂಧಿತರು. ಬಂಧಿತರ ಪೈಕಿ ಕಿರಣ್ ರೆಡ್ಡಿ ವಿಜಯನಗರ ರೌಡಿಶೀಟರ್ ಆಗಿದ್ದಾನೆ. ಹೀಗಾಗಿ ಏರಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಇವನು ತನ್ನ ಸಹಚರರ ಜೊತೆ ಗೂಡಿ ಕಾರಿನ ಗ್ಲಾಸ್ ಪುಡಿ ಮಾಡಿದ್ದಾನೆ ಎನ್ನಲಾಗಿದೆ.
ಇದಲ್ಲದೆ, ಒಮ್ಮೆ ಜೈಲಿಗೆ ಹೋಗಿ ಬಂದ್ರೆ ಹೆಸರು ಮಾಡಬಹುದು ಅನ್ನೋ ಭ್ರಮೆಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಮೂರರಿಂದ ನಾಲ್ಕು ಜನ ತಲೆಮರೆಸಿಕೊಂಡಿದ್ದು, ಅವರಿಗೆ ಹುಡುಕಾಟ ಪೊಲೀಸರು ಬಲೆ ಬೀಸಿದ್ದಾರೆ.
ವಿಜಯನಗರದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ 20ಕ್ಕೂ ಅಧಿಕ ಕಾರುಗಳ ಗ್ಲಾಸ್ಗಳನ್ನು ನಿನ್ನೆ ತಡರಾತ್ರಿ ಜಖಂ ಮಾಡಿದ್ದರು.