ಬೆಂಗಳೂರು : ಬುದ್ಧಿವಾದ ಹೇಳಿದ್ದ ವೃದ್ಧನನ್ನು ಕೊಲೆಗೈದು ಪರಾರಿಯಾಗಿದ್ದ ತಂದೆ ಮಗನನ್ನು ರಾಜಗೋಪಾಲನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅನೀಸ್ ಹಾಗೂ ಆತನ ತಂದೆ ಸೈಯದ್ ಅಕ್ಮಲ್ ಬಂಧಿತ ಆರೋಪಿಗಳು. ಆಗಸ್ಟ್ 17 ರಂದು ಹೆಗ್ಗನಹಳ್ಳಿ ಬಳಿ ಗುಜುರಿ ಕೆಲಸ ಮಾಡಿಕೊಂಡಿದ್ದ ಅಜಿಮುಲ್ಲಾಖಾನ್ ಅವರ ಹತ್ಯೆ ನಡೆದಿತ್ತು.
ಒಂದು ವರ್ಷದ ಹಿಂದೆ ಜೆಜೆ ನಗರದಿಂದ ಹೆಗ್ಗನಹಳ್ಳಿಗೆ ಶಿಫ್ಟ್ ಆಗಿದ್ದ ಅನೀಸ್ ರೌಡಿಸಂ ಮಾಡಿಕೊಂಡು ಓಡಾಡಿಕೊಂಡಿದ್ದನು. ಅನೀಸ್ ಉಪಟಳ ನೋಡುತ್ತಿದ್ದ ಅಜೀಮುಲ್ಲಾಖಾನ್ 'ರೌಡಿಸಂ ಬಿಟ್ಟುಬಿಡು, ನಿನ್ನ ತಂದೆಯನ್ನು ಕರೆದುಕೊಂಡು ಬಾ ಮಾತನಾಡ್ತೀನಿ' ಅಂತ ಹೇಳಿದ್ದರು. ಅದರಂತೆ ತನ್ನ ತಂದೆ ಸೈಯದ್ ಅಕ್ಮಲ್ನನ್ನು ಅಜಿಮುಲ್ಲಾಖಾನ್ ಖಾನ್ ಬಳಿ ಕರೆತಂದಿದ್ದನು.
ಈ ವೇಳೆ ಅನೀಸ್ ಹಾಗೂ ಆತನ ತಂದೆ ಅಕ್ಮಲ್ ಅಜಿಮುಲ್ಲಾಖಾನ್ ಜೊತೆ ಗಲಾಟೆ ಮಾಡಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಸಿಟ್ಟಿಗೆದ್ದ ಅನೀಸ್ ಅಜಿಮುಲ್ಲಾಖಾನ್ಗೆ ಚಾಕುವಿನಿಂದ ಇರಿದಿದ್ದನು. ಪರಿಣಾಮ ತೀವ್ರ ರಕ್ತಸ್ರಾವದಿಂದ ಅಜೀಮುಲ್ಲಾಖಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸದ್ಯ ರಾಜಗೋಪಾಲನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ದೊಡ್ಡೋರ ಜಗಳದಲ್ಲಿ ಎಂಟ್ರಿ ಕೊಟ್ಟು ಕೊಲೆಗಡುಕನಾದ ಯುವಕ