ETV Bharat / state

ಮಗನ ಕಳ್ಳತನಕ್ಕೆ ಪೋಷಕರೇ ಸಾಥ್​: ಗುಂಡು ಹಾರಿಸಿ ಆರೋಪಿ ಬಂಧನ

author img

By

Published : Nov 26, 2019, 8:29 AM IST

ಆರೋಪಿ ಆರ್​ಎಂಸಿ ಯಾರ್ಡ್ ಬಳಿ ದರೋಡೆಗೆ ಸ್ಕೆಚ್ ಹಾಕಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾದಾಗ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ, ಇನ್ಸ್​ಫೆಕ್ಟರ್ ಮಹೇಂದ್ರ ಕುಮಾರ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

Arrest of accused who was trying robbery
ಆರೋಪಿ ಬಂಧನ

ಬೆಂಗಳೂರು: ದರೋಡೆಗೆ ಸ್ಕೆಚ್ ಹಾಕಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಹಿಡಿಯುವಲ್ಲಿ ಆರ್​ಎಂಸಿ ಯಾರ್ಡ್ ಇನ್ಸ್​ಫೆಕ್ಟರ್ ಮಹೇಂದ್ರ ಕುಮಾರ್ ಯಶಸ್ವಿಯಾಗಿದ್ದಾರೆ.

ದರ್ಶನ್ ಬಂಧಿತ ಆರೋಪಿ. ಈತ ಆರ್​ಎಂಸಿ ಯಾರ್ಡ್ ಬಳಿ ರಾಬರಿಗೆ ಸ್ಕೆಚ್ ಹಾಕಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾದಾಗ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಇನ್ಸ್​ಫೆಕ್ಟರ್ ಮಹೇಂದ್ರ ಕುಮಾರ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಆರೋಪಿ ಹಿನ್ನೆಲೆ:
ಆರೋಪಿ‌ ಎರಡು ದಿನಗಳ ಹಿಂದೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೊಬೈಲ್ ಕಸಿದು ಮಾರಣಾಂತಿಕ ಹಲ್ಲೆ ಮಾಡಿದ್ದ. ಹಾಗೆಯೇ ಆರೋಪಿಯ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ವಿಚಿತ್ರ ಅಂದ್ರೆ ಮಗ ಕೈ ತುಂಬಾ ಹಣ ತರುತ್ತಿದ್ದಾನೆ ಎಂದು ಮಗನ ಕಳ್ಳತನಕ್ಕೆ ಪೋಷಕರೇ ಸಹಾಯ ಮಾಡುತ್ತಿದ್ದರು ಎಂಬ ವಿಷಯ ತಿಳಿದು ಬಂದಿದೆ. ಪೋಷಕರು ತಪ್ಪಿಸಿಕೊಂಡಿದ್ದು, ಅವರ ಹುಡುಕಾಟವೂ ನಡೆಯುತ್ತಿದೆ.

Intro:ನಾನಾ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ;-
ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಖಾಕಿ

ರಾಬರಿಗೆ ಸ್ಕೆಚ್ ಹಾಕಿದ್ದ ಆರೋಪಿ ಕಾಲಿಗೆ ಶೂಟೌಟ್ ಮಾಡಿ ಆರೋಪಿಯನ್ನು ಹಿಡಿಯುವಲ್ಲಿ ಆರ್ ಎಂ ಸಿ ಯಾರ್ಡ್ ಇನ್ಸ್ ಪೆಕ್ಟರ್ ಮಹೇಂದ್ರ ಕುಮಾರ್ ಯಶಸ್ವಿಯಾಗಿದ್ದಾರೆ.
ದರ್ಶನ್ ಅಲಿಯಾಸ್ ದರ್ಶು ಬಂಧಿತ ಆರೋಪಿ.

ಆರೋಪಿ‌ ಆರ್ ಎಂಸಿ ಯಾರ್ಡ್ ಬಳಿ ರಾಬರಿಗೆ ಸ್ಕೆಚ್ ಹಾಕಿದ್ದ. ಈ ಮಾಹಿತಿ ಆರ್ ಎಂಸಿ ಯಾರ್ಡ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳಿಗೆ ಮಾಹಿತಿ ತಿಳಿದು ಹಿಡಿಯಲು ಮುಂದಾದಾಗ ಆರೋಪಿ ಪೇದೆ ಮುನಿಕೃಷ್ಣ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣ ಇನ್ಸ್ಪೆಕ್ಟರ್ ಶರಣಾಗುವಂತೆ ಆರೋಪಿಗೆ ಸೂಚನೆ ನೀಡಿದರು ಮಾತು ಕೇಳದೆ ಇದ್ದಾಗ ಆರ್ ಎಂ ಸಿ ಯಾರ್ಡ್ ಇನ್ಸ್ ಪೆಕ್ಟರ್ ಮಹೇಂದ್ರ ಕುಮಾರ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಆರೋಪಿ ಹಿನ್ನೆಲೆ

ಆರೋಪಿ‌ ಎರಡು ದಿನಗಳ ಹಿಂದೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೊಬೈಲ್ ಕಸಿದು ಮಾರಣಾಂತಿಕ ಹಲ್ಲೆ ಮಾಡಿದ್ದ. ಹಾಗೆ ಆರೋಪಿಯ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಾದಬಾಗಲಗುಂಟೆ,ಕೆಂಗೇರಿ,ಸೋಲದೇವನಹಳ್ಳಿ ಠಾಣೆಯಲ್ಲಿ 11ರಾಬರಿ, 6-7 ಪೋಕ್ಸೋ ಪ್ರಕರಣ ಡಕಾಯಿತಿ, ಕಳ್ಳತನ ಹೀಗೆ ಹಲವಾರು ಪ್ರಕರಣದಲ್ಲಿ ಬೇಕಾಗಿ ನ್ಯಾಯಾಲಯ 6-7 ಬಾರಿ ವಾರೆಂಟ್ ಜಾರಿ ಮಾಡಿತ್ತು. ಆದರು ಪೊಲೀಸರ ಕೈಗೆ ಸಿಗದೆ ಎಸ್ಕೇಪ್ ಆಗುತ್ತಿದ್ದ.
ಮತ್ತೊಂದೆಡೆ ವಿಚಿತ್ರ ಅಂದ್ರೆ ಮಗ ಕೈ ತುಂಬಾ ಹಣ ತರುತ್ತಿದ್ದ ಹಿನ್ನೆಲೆ ಮಗನ ಕಳ್ಳತನಕ್ಕೆ ಪೋಷಕರು ಸಹಾಯ ಮಾಡ್ತಿದ್ದು ಈ ವಿಚಾರ ಪೊಲೀಸರಿಗೆ ತಿಳಿದು ಸದ್ಯ ಆರ್ ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆBody:KN_BNG_01_SHOUTOUT_7204498Conclusion:KN_BNG_01_SHOUTOUT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.