ETV Bharat / state

ಬೈಕ್ ಕಳ್ಳತನದ ಜೊತೆಗೆ ಮನೆಗಳಿಗೂ ಕನ್ನ: ಖದೀಮನ ಡಬಲ್ ಡ್ಯೂಟಿಗೆ ಖಾಕಿ ಬ್ರೇಕ್ - Thief Imran Khan

ಬೈಕ್​ ಕಳ್ಳತನ ಹಾಗೂ ಮನೆಗಳ್ಳತನ ಕೃತ್ಯದಲ್ಲಿ ತೊಡಗಿದ್ದ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಇಮ್ರಾನ್​ಖಾನ್​ನಿಂದ ಆರು ಲಕ್ಷ ರೂ.ಮೌಲ್ಯದ ಚಿನ್ನಾಭರಣ, ಐದು ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಖದೀಮನ ಡಬಲ್ ಡ್ಯೂಟಿಗೆ ಖಾಕಿ ಬ್ರೇಕ್
ಖದೀಮನ ಡಬಲ್ ಡ್ಯೂಟಿಗೆ ಖಾಕಿ ಬ್ರೇಕ್
author img

By

Published : Jul 13, 2021, 10:54 AM IST

ಬೆಂಗಳೂರು: ಬೈಕ್ ಕಳ್ಳತನದ ಜೊತೆಗೆ ಮನೆಗಳಿಗೂ ಕನ್ನ ಹಾಕುತ್ತಿದ್ದ ಖದೀಮನ ಡಬಲ್ ಡ್ಯೂಟಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಆರೋಪಿ ಇಮ್ರಾನ್​ಖಾನ್​ನನ್ನು ಬಂಧಿಸಿರುವ ಬ್ಯಾಟರಾಯನಪುರ ಪೊಲೀಸರು ಆರೋಪಿಯಿಂದ ಆರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಐದು ಬೈಕ್​​ಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯು ಬ್ಯಾಟರಾಯನಪುರ, ವಿಜಯನಗರ, ಅಮೃತಹಳ್ಳಿ, ನಂದಿನಿ ಲೇಔಟ್, ಹನುಮಂತನಗರ, ಕೆಂಗೇರಿ, ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣದ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಪ್ರತಿಕ್ರಿಯೆ

ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಸಂಜೀವ್ ಪಾಟೀಲ್ ಪ್ರಕರಣದ ಬಗೆಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿದ್ದು, ಮಾರ್ಚ್ 3 ರ ರಾತ್ರಿ ಸಮಯದಲ್ಲಿ ದೂರುದಾರರು ತಮ್ಮ ಹೊಂಡಾ ಡಿಯೋ ಕೆಎ-53- ಇಎ-8533 ವಾಹನವನ್ನು ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಮುಂದೆ ನಿಲ್ಲಿಸಿದ್ದರು. ಕಳವು ಮಾಡಿಕೊಂಡು ಹೋಗಿರುವ ಬ್ಯಾಟರಾಯನಪುರ ಪೊಲೀಸ್ ಠಾಣೆಯಯಲ್ಲಿ ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು ಎಂದರು.

ಬ್ಯಾಟರಾಯನಪುರ ಠಾಣೆಯ ಇನ್ಸ್​ಪೆಕ್ಟರ್​ ಎ.ಎನ್. ನಾಗರಾಜು ಹಾಗೂ ಸಿಬ್ಬಂದಿ ಪ್ರಕರಣ ಸಂಬಂಧ ಜುಲೈ 8 ರಂದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಆರೋಪಿಯು ಬ್ಯಾಟರಾಯನಪುರ, ಶಿವಾಜಿನಗರ, ನಂದಿನಿ ಲೇಔಟ್​, ಅಮೃತಹಳ್ಳಿ, ವಿಜಯನಗರದಲ್ಲಿ ಬೈಕ್​ ಕಳ್ಳತನ ಮಾಡಿದ್ದು, ಹನುಮಂತನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳ್ಳತನ ಮಾಡ್ತಿದ್ದ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.