ETV Bharat / state

ಕೊರೊನಾ ಲಕ್ಷಣಗಳಿದ್ದವರಿಗೆ ಸಲಹೆ ನೀಡಲು ಬಂತು ಆಪ್ತಮಿತ್ರ ಆ್ಯಪ್...!

ಕೊರೊನಾ ರೋಗ ಲಕ್ಷಣಗಳಿರುವ ವ್ಯಕ್ತಿಗಳು ಆತಂಕಕ್ಕೆ ಸಿಲುಕದೇ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಪೂರಕವಾಗಿ ರಾಜ್ಯ ಸರ್ಕಾರ ಸಹಾಯವಾಣಿಯನ್ನು ಪರಿಚಯಿಸಿ ಆಪ್ತಮಿತ್ರ ಆ್ಯಪ್ ಅನ್ನು ಬಿಡುಗಡೆ ಮಾಡಿದೆ.

ಆಪ್ತಮಿತ್ರ ಆ್ಯಪ್
ಆಪ್ತಮಿತ್ರ ಆ್ಯಪ್
author img

By

Published : Apr 22, 2020, 2:44 PM IST

ಬೆಂಗಳೂರು: ಕೊರೊನಾ ಶಂಕಿತರು ನೇರವಾಗಿ ಆಸ್ಪತ್ರೆಗೆ ಹೋಗದೆ ಸಹಾಯವಾಣಿಯ ಸಹಾಯ ಪಡೆದು ಅಗತ್ಯವಿದ್ದರಷ್ಟೇ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡುವ ಆಪ್ತಮಿತ್ರ ಎನ್ನುವ ಹೊಸ ಆ್ಯಪ್ ಅನ್ನು ಇಂದು‌ ಉದ್ಘಾಟಿಸಲಾಯಿತು. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆ್ಯಪ್​ಗೆ ಚಾಲನೆ ನೀಡಿದರು.

ಆ್ಯಪ್ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಆಪ್ತಮಿತ್ರ ಸಹಾಯವಾಣಿ ಹಾಗೂ ಅಪ್ಲಿಕೇಷನ್ ಅನ್ನು ಸಿಎಂ ಅನಾವರಣ ಮಾಡಿದ್ದಾರೆ. 14,410 ಸಂಖ್ಯೆಯ ಈ ಸಹಾಯವಾಣಿಗೆ ಯಾರಾದರೂ ಫೋನ್ ಮಾಡಿದರೆ ಕೊರೊನಾ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ದೇಶದಲ್ಲೇ ಇದು ಪ್ರಥಮ, ಕೊರೊನಾ ಲಕ್ಷಣ ಕಂಡು ಬಂದರೆ ಈ ಸಹಾಯವಾಣಿಗೆ ಕರೆ ಮಾಡಿ ಸಂಶಯಗಳನ್ನು ಬಗೆಹರಿಸಿಕೊಳ್ಳಬಹುದು, ಈ ಸಹಾಯ ವಾಣಿಯಲ್ಲಿ ಹಲವು ನುರಿತ ವೈದ್ಯರು, ತಜ್ಞರು ಕೆಲಸ ಮಾಡಲಿದ್ದಾರೆ. 4 ಬೆಂಗಳೂರು , 1 ಬೆಳಗಾವಿ, 1 ಮಂಗಳೂರಲ್ಲಿ ಒಟ್ಟು 6 ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದೇವೆ. ಒಟ್ಟಾರೆ ಐದು ಸಾವಿರ ಜನರು ಇದರಲ್ಲಿ ಕೆಲಸ ಮಾಡಲಿದ್ದಾರೆ. ಪ್ರತಿ ಕೇಂದ್ರದಲ್ಲಿ 300 ಜನ ಇರಲಿದ್ದಾರೆ, ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರಗೆ ಈ ಸಹಾಯವಾಣಿ ಇರಲಿದೆ ಎಂದು ತಿಳಿಸಿದರು.

ಆಪ್ತಮಿತ್ರ ಆ್ಯಪ್ ಬಿಡುಗಡೆ ಮಾಡಿದ ಸಿಎಂ

ರೋಗ ಲಕ್ಷಣ ಇರುವವರು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವ ಸಂದರ್ಭಗಳಲ್ಲಿ ವ್ಯದ್ಯರಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಸಹಾಯವಾಣಿಗೆ ಕರೆ ಮಾಡಿ ಸಂಶಯ ಬಗೆಹರಿಸಿಕೊಳ್ಳಬಹುದು. ನೆಗಡಿ, ಕೆಮ್ಮು ಏನೇ ಇದ್ರೂ ಕರೆ ಮಾಡಬಹುದು. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರು, ಸಿಬ್ಬಂದಿಗಳನ್ನು ಸೋಂಕಿನಿಂದ ಉಳಿಸಬೇಕು ಎಂಬ ಉದ್ದೇಶದಿಂದ ಈ ಸಹಾಯವಾಣಿ ಪ್ರಾರಂಭಿಸಿದ್ದೇವೆ ಎಂದರು.

ಈಗಾಗಲೇ ಆ್ಯಪ್ ಮುಖಾಂತರ ಐವತ್ತು ಸಾವಿರ ಮೆಸೇಜ್ ಕಳುಹಿಸಲಾಗಿದೆ ಇನ್ಪೋಸಿಸ್, ನ್ಯಾಸ್ಕಾಸ್ ಸಂಯುಕ್ತಾಶ್ರಯದಲ್ಲಿ ಸರ್ಕಾರ ಈ ಆ್ಯಪ್ ಜಾರಿಗೆ ತಂದಿದೆ. ಒಮ್ಮೆಲೆ ಆಸ್ಪತ್ರೆಗೆ ಹೋಗುವ ಮೊದಲು ಈ ಸಹಾಯವಾಣಿಯ ಲಾಭವನ್ನು ಪಡೆದುಕೊಳ್ಳಿ, ಯಾವ ರೀತಿ ನಡೆದುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಲಾಗುತ್ತದೆ. ವೈದ್ಯರಿಗೆ ಕೊರನಾ ಹರಡಿಸಬಾರದು ಎಂದು ಈ ಆ್ಯಪ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.