ETV Bharat / state

ಬಿಬಿಎಂಪಿ ಚುನಾವಣೆಯತ್ತ ಚಿತ್ತ: ಬೆಂಗಳೂರು ಶಾಸಕರಿಂದ ಸಿಎಂಗೆ ವಿವಿಧ ಬೇಡಿಕೆಗಳ ಮನವಿ ಪತ್ರ

author img

By

Published : Feb 14, 2022, 6:54 PM IST

ಬೊಮ್ಮನಹಳ್ಳಿ ಶಾಸಕ ಹಾಗೂ ವಿಧಾನಸಭೆ ಆಡಳಿತ ಪಕ್ಷದ ಮುಖ್ಯಸಚೇತಕ ಸತೀಶ್ ರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಶಾಸಕರು 11 ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಿಎಂ ಬಸವರಾಜ ಬೊಮ್ಮಾಯಿಗೆ ನೀಡಿದರು..

Ruling party chief exicutive sathish reddy
ವಿಧಾನಸಭೆ ಆಡಳಿತ ಪಕ್ಷದ ಮುಖ್ಯಸಚೇತಕ ಸತೀಶ್ ರೆಡ್ಡಿ

ಬೆಂಗಳೂರು : ಬಿಬಿಎಂಪಿ ಚುನಾವಣೆಯತ್ತ ಬಿಜೆಪಿ ಚಿತ್ತ ಹರಿಸಿದೆ. ಬೆಂಗಳೂರು ಬಿಜೆಪಿ ಶಾಸಕರು ಸಿಎಂ ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು. ಬಜೆಟ್​ನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ಘೋಷಣೆಗಳಿಗೆ ಮನವಿ ಮಾಡಿದರು.

ದೆಹಲಿ ಮಾದರಿಯಲ್ಲಿ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆಯರಿಗೆ ಉಚಿತ ಬಿಎಂಟಿಸಿ ಬಸ್ ಪ್ರಯಾಣಕ್ಕೆ ಪಾಸ್ ವಿತರಿಸಲು ಮನವಿ ಮಾಡಿದರು. ಆಟೋ, ಕ್ಯಾಬ್ ಡ್ರೈವರ್ಸ್, ಸ್ವಿಗ್ಗಿ, ಜೊಮ್ಯಾಟೊ ಸಿಬ್ಬಂದಿಗೆ ಪ್ರತ್ಯೇಕ ಯೋಜನೆಗೆ ಮನವಿ ಸಲ್ಲಿಸಿದರು.

ಗಾರ್ಮೆಂಟ್ಸ್ ಮಾಲೀಕರು, ವರ್ತಕರು, ಸಣ್ಣ ಉದ್ದಿಮೆದಾರರಿಗೆ ಬಿಬಿಎಂಪಿಯಿಂದ ತೆರಿಗೆ ಕಡಿತಕ್ಕೆ ಮನವಿ ಮಾಡಿದರು. ಬೆಂಗಳೂರು ಕೊಳಚೆ ಪ್ರದೇಶದ ನಿವಾಸಿಗಳಿಗೆ ₹100 ಶುಲ್ಕ ನಿಗದಿಗೊಳಿಸಿ ಕಾವೇರಿ ನೀರು ಸರಬರಾಜು ಮಾಡಲು ನೆರವು ಕೊಡುವಂತೆ‌ ಮನವಿ ಮಾಡಿದರು. ಬಿಬಿಎಂಪಿ ವ್ಯಾಪ್ತಿಯ ಹೊರಗೂ ಕಾವೇರಿ ಪೂರೈಕೆಗೆ ಮನವಿ ಸಲ್ಲಿಸಿದರು.

ವಿಧಾನಸಭೆ ಆಡಳಿತ ಪಕ್ಷದ ಮುಖ್ಯಸಚೇತಕ ಸತೀಶ್ ರೆಡ್ಡಿ ಮಾತನಾಡಿರುವುದು..

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಜಾರಿಗೆ ತರಲು ಮನವಿ ಮಾಡಿದರು‌. ಟಿಡಿಆರ್ ಬ್ಯಾಂಕ್ ಸ್ಥಾಪನೆಗೆ ಕೋರಿದರು. ಬೊಮ್ಮನಹಳ್ಳಿ ಶಾಸಕ ಹಾಗೂ ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿ ಒಳಗೊಂಡು ಬಿಜೆಪಿಯ ಶಾಸಕರು 11 ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಿಎಂ ಬಸವರಾಜ ಬೊಮ್ಮಾಯಿಗೆ ನೀಡಿದರು.

ಬಿಜೆಪಿ ಶಾಸಕರುಗಳು ಮುಂದಿಟ್ಟು 11 ಬೇಡಿಕೆಗಳು ಹೀಗಿವೆ..

*ಅಕ್ರಮ ಸಕ್ರಮ ಕಾಯಿದೆ ಅನುಷ್ಠಾನಕ್ಕೆ ತರುವ ಮೂಲಕ ಬೆಂಗಳೂರಿನ ಜನರ ಸಮಸ್ಯೆಯನ್ನು ಬಗೆಹರಿಸಬೇಕು.

*ಟಿಟಿಆರ್ ಬ್ಯಾಂಕ್ ಸ್ಥಾಪನೆ ಮಾಡುವ ಮೂಲಕ ರಸ್ತೆ ಅಗಲೀಕರಣಕ್ಕೆ ಮತ್ತು ಸಾರ್ವಜನಿಕ ಸ್ವತ್ತುಗಳ ಮೌಲ್ಯಕ್ಕೆ ತಕ್ಕುದಾದ ಟಿಡಿಆರ್ ಕೊಡುವ ಮೂಲಕ ಅಭಿವೃದ್ಧಿಗೊಳಿಸಬೇಕು.

* ಅಕ್ರಮ-ಸಕ್ರಮಕ್ಕೆ ವಿಧಿಸುವ ದಂಡಕ್ಕೆ ಟಿಡಿಆರ್‌ ಅನ್ನು ಕೊಂಡುಕೊಳ್ಳುವ ಮೂಲಕ ಟಿಡಿಆರ್‌ಗೆ ಹೆಚ್ಚಿನ ಮೌಲ್ಯ ಬರುವ ರೀತಿ ಮಾಡಬೇಕು.

* ಈಗಾಗಲೇ ವೃದ್ಧರಿಗೆ ಮತ್ತು ಶಾಲೆ, ಕಾಲೇಜ್ ಮಕ್ಕಳಿಗೆ ಬಿಎಂಟಿಸಿ ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಾಕಾಶವಿದೆ. ಅದೇ ರೀತಿ ಮಹಿಳೆಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಪಾಸ್‌ಗಳನ್ನು ವಿತರಿಸಬೇಕು.

* ಬೆಂಗಳೂರಿನ ಹಲವಾರು ಕಟ್ಟಡಗಳಿಗೆ ಬಿಬಿಎಂಪಿಯಿಂದ ನೀಡುವ OCCUPASTION CERTIFICATE ಇಲ್ಲದ ಕಾರಣಗಳಿಂದ ಕಳೆದ 5 ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಹಲವಾರು ಕಟ್ಟಡ ಮಾಲೀಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರಿಂದ ಇಂಧನ ಇಲಾಖೆಗೂ ಹಾಗೂ ಸರ್ಕಾರಕ್ಕೂ ಕೋಟ್ಯಂತರ ರೂಪಾಯಿಗಳು ನಷ್ಟವಾಗುತ್ತಿರುತ್ತವೆ. ಆದ್ದರಿಂದ, ತುರ್ತಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕು.

* ಕಾವೇರಿ ನೀರು ಬೆಂಗಳೂರಿಗೆ ಈಗಾಗಲೇ 1.550 ಎಂಎಲ್‌ಡಿ ನೀರು ಬರುತ್ತಿದೆ. ಟಿಜಿಹಳ್ಳಿಯಿಂದ ಹೆಚ್ಚುವರಿ 250 ಎಂಎಲ್‌ಡಿ ನೀರನ್ನು ಹಾಲಿ ಇರುವ ಪಂಪಿಂಗ್​ ಸ್ಟೇಷನ್​ನಿಂದ ಪಂಪಿಂಗ್ ಮಾಡಲು ಕ್ರಮಕೈಗೊಳ್ಳುವುದು ಮತ್ತು ಜಿಎಲ್ಆರ್‌ಗಳಲ್ಲಿ ಹೆಚ್ಚಿನ ನೀರನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು.

* ಕಾವೇರಿ ನೀರು ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಹೊರವಲಯದಲ್ಲಿ ವಾರಕ್ಕೆ ಒಂದು ದಿನ ಕೊಡುತ್ತಿದ್ದು, ವಾರಕ್ಕೆ ಎರಡು ದಿನ ನೀರು ಸರಬರಾಜು ಮಾಡಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕು.

* ಬಿಬಿಎಂಪಿ ಹೊರವಲಯದಲ್ಲಿನ ಅನೇಕ ಅಪಾರ್ಟ್‌ಮೆಂಟ್​ಗಳಿಗೆ ಮತ್ತು ಸಣ್ಣ ಮನೆಗಳಿಗೆ OCCUPASTION CERTIFICATE ಇಲ್ಲದೆ ಇರುವುದರಿಂದ ಜಲಮಂಡಳಿ ಹೆಚ್ಚುವರಿಯಾಗಿ ದಂಡವನ್ನು ವಿಧಿಸುತ್ತಿದ್ದು, ಇದನ್ನು ರದ್ದುಪಡಿಸಲು ತಕ್ಷಣ ಕ್ರಮವಹಿಸಬೇಕು.

* ಬೆಂಗಳೂರಿನ ಸ್ಲಂಗಳಲ್ಲಿ ವಾಸ ಮಾಡುವ ಬಡವರ ಮನೆಗಳಿಗೆ ಬಿಡಬ್ಲ್ಯೂಎಸ್‌ಎಸ್‌ಬಿ ಇಲಾಖೆಯಿಂದ ತಿಂಗಳಿಗೆ 100 ರೂ.ಗಳ ಶುಲ್ಕವನ್ನು ನಿಗದಿಗೊಳಿಸಿ ಕಾವೇರಿ ನೀರನ್ನು ಸರಬರಾಜು ಮಾಡುವ ಮೂಲಕ ಬಡವರಿಗೆ ಸರ್ಕಾರದಿಂದ ನೆರವು ನೀಡಬೇಕು.

* ಕೊರೊನಾ ಸಂದರ್ಭದಲ್ಲಿ ಬೆಂಗಳೂರಿನಾದ್ಯಂತ ಹಲವು ಬಾರಿ ಲಾಕ್​ಡೌನ್​ ಆಗಿದ್ದು, ಗಾರ್ಮೆಂಟ್ ಫ್ಯಾಕ್ಟರಿ ಮತ್ತು ವರ್ತಕರು ಸಣ್ಣ ಉದ್ದಿಮೆದಾರರು ನಷ್ಟವನ್ನು ಅನುಭವಿಸಿದ್ದಾರೆ. ಆದ್ದರಿಂದ, ಇವರೆಲ್ಲರಿಗೂ ಬಿಬಿಎಂಪಿ ವತಿಯಿಂದ ತೆರಿಗೆಯನ್ನು ಕಡಿತಗೊಳಿಸಬೇಕು.

* ಆಟೋ ಡ್ರೈವರ್​ಗಳಿಗೆ, ಕ್ಯಾಬ್ ಡ್ರೈವರ್​ಗಳಿಗೆ ಮತ್ತು ಜೊಮ್ಯಾಟೋ ಹಾಗೂ ಸ್ವಿಗ್ಗಿಗಳಲ್ಲಿ ಕೆಲಸ ಮಾಡುವ ಯುವಕರು ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಇವರಿಗಾಗಿ ಬಜೆಟ್‌ನಲ್ಲಿ ಪ್ರತ್ಯೇಕ ಯೋಜನೆ ರೂಪಿಸುವ ಮೂಲಕ ಅವರಿಗೆ ನೆರವಾಗಬೇಕು.

ಓದಿ: ಗಾಯಕಿ ಲತಾ ಮಂಗೇಶ್ಕರ್, ಇಬ್ರಾಹಿಂ ಸುತಾರ, ಚಂಪಾ ಸೇರಿ ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.