ETV Bharat / state

ಅನುಶ್ರೀ ಡ್ರಗ್ಸ್ ಕನ್ಸೂಮರ್ ಅಲ್ಲ ಅಕೆಯೇ ಡಗ್ಸ್ ಸಪ್ಲೈಯರ್ : ಪ್ರಶಾಂತ್ ಸಂಬರಗಿ ಹೊಸ ಬಾಂಬ್​ - Anushree is not a Drug Consumer

ನಟಿ, ಆ್ಯಂಕರ್ ಅನುಶ್ರೀ ಹೇಳಿಕೆ ಕೂಡ ಚಾರ್ಜ್‌ಶೀಟ್‌ನಲ್ಲಿ ಕೈಬಿಡಲಾಗಿದೆ ಎಂದು ಹೇಳಿದ್ದರು. ಮಂಗಳೂರಿನ ಪೊಲೀಸರು, ಬೆಂಗಳೂರು ಪೊಲೀಸರ ತರಹ ತನಿಖೆ ಮಾಡಿಲ್ಲ, ಎಲ್ಲೋ ಒಂದು ಕಡೆ ಟೆಕ್ನಿಕಲ್ ಎರರ್ಸ್ ಆಗಿದೆ. ಆರೋಪಿಗಳ ಮೆಡಿಕಲ್ ರಿಪೋರ್ಟ್‌ ಮಾಡಿಲ್ಲ. ತನಿಖಾಧಿಕಾರಿ ಶಿವಪ್ರಕಾಶ್ ನಾಯಕ್ ಎತ್ತಂಗಡಿ ಮಾಡಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೇಸ್ ರೀಓಪನ್ ಮಾಡಲು ಪಿಟಿಷನ್ ಕೊಡುತ್ತೇನೆ..

ಅನುಶ್ರೀ ಡ್ರಗ್ಸ್ ಕನ್ಸೂಮರ್ ಅಲ್ಲ ಅಕೆಯೇ ಡಗ್ಸ್ ಸಪ್ಲೈಯರ್

author img

By

Published : Sep 8, 2021, 10:49 PM IST

ಬೆಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ಕೋರ್ಟ್​ಗೆ ಸಲ್ಲಿಸಿರುವ ಚಾರ್ಜ್​ಶೀಟ್​​ನಲ್ಲಿ ಆ್ಯಂಕರ್​ ​ಕಮ್ ನಟಿ ಅನುಶ್ರೀ ಬಣ್ಣ ಬಯಲಾಗಿದೆ. ಈ ಕುರಿತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ, ಅನುಶ್ರೀ ಡ್ರಗ್ಸ್ ಕನ್ಸೂಮರ್ ಅಲ್ಲ. ಆಕೆಯೇ ಪ್ರಮುಖ ಡ್ರಗ್ಸ್ ಸಪ್ಲೈಯರ್ ಎಂದು ಅರೋಪಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಶಾಂತ್ ಸಂಬರಗಿ, ಅನುಶ್ರೀಯನ್ನು ಮತ್ತೆ ವಿಚಾರಣೆ ಮಾಡಬೇಕು. ಈ ಪ್ರಕರಣ ರೀ ಇನ್ವೆಸ್ಟಿಗೇಷನ್ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ. ಅನುಶ್ರೀ ಡ್ರಗ್ಸ್ ಕನ್ಸೂಮರ್ ಅಲ್ಲ, ಸಪ್ಲೈಯರ್. ಆಕೆ ಕಂಬಿ ಹಿಂದೆ ಹೋಗೋ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿವೆ ಎಂದು ಬಾಂಬ್ ಸಿಡಿಸಿದ್ದಾರೆ.

ಅನುಶ್ರೀ ಡ್ರಗ್ಸ್ ಕನ್ಸೂಮರ್ ಅಲ್ಲ ಅಕೆಯೇ ಡಗ್ಸ್ ಸಪ್ಲೈಯರ್
ಅನುಶ್ರೀ ಡ್ರಗ್ಸ್ ಕನ್ಸೂಮರ್ ಅಲ್ಲ ಅಕೆಯೇ ಡಗ್ಸ್ ಸಪ್ಲೈಯರ್

ಬೆಂಗಳೂರು ಕೇಸ್‌ನಂತೆಯೇ ಟೈಟ್ ಆಗಿ ತನಿಖೆ ನಡೆದರೆ ಅನುಶ್ರೀ ಅರೆಸ್ಟ್ ಆಗುತ್ತಾಳೆ. ತರುಣ್ ಈಕೆಗೆ ಮೊದಲ ಆತ್ಮೀಯ ಫ್ರೆಂಡ್. ತರುಣ್ ಮೂಲಕ ಕಿಶೋರ್ ಅನುಶ್ರೀಗೆ ಸ್ನೇಹಿತ ಆಗುತ್ತಾನೆ. ಆದರೆ, ಕಿಶೋರ್ ಸಿಕ್ಕಿಹಾಕಿಕೊಳ್ತಾನೆ. ಆದರೆ, ತರುಣ್‌ನನ್ನು ಪೊಲೀಸರು ಬಿಟ್ಟು ಕಳುಹಿಸುತ್ತಾರೆ. ತರುಣ್ ಪ್ರಭಾವಿ ಅಲ್ಲದಿದ್ದರೂ ಅನುಶ್ರೀ ಪ್ರಭಾವಿಯಾಗಿದ್ದೇ ಇದಕ್ಕೆ ಕಾರಣ.

ಪಾರ್ಟಿಗಳ ಫೋಟೋಗಳು ನನ್ನ ಬಳಿ ಇವೆ. ಅನುಶ್ರೀ ಕೂಡ ಇನ್​ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಾಕಿದ್ದಾಳೆ. ಬಳಿಕ ಡಿಲೀಟ್ ಮಾಡಿದ್ದಾಳೆ. ಉಡ್ತಾ ಪಂಜಾಬ್ ರೀತಿಯಲ್ಲೇ ಕೊರೊನಾ ಬಂದಿಲ್ಲದಿದ್ದರೆ ಉಡ್ತಾ ಕರ್ನಾಟಕ ಆಗುತ್ತಿತ್ತು ಎಂದಿರುವ ಅವರು, ಅನಿಕಾ ಕೊಟ್ಟ 2 ಸಾವಿರ ಜನರ ಲಿಸ್ಟ್‌ನಲ್ಲಿ ಇವರ ಹೆಸರುಗಳೂ ಇವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅನುಶ್ರೀ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಕೈ ಬಿಡಲಾಗಿದೆ : ಇನ್ನು, ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೊದಲು ರಾಜಭವನ ಬಳಿ ಪ್ರಶಾಂತ್ ಸಂಬರಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಮಂಗಳೂರು ಪೊಲೀಸರು ಹಾಕಿದ ಚಾರ್ಜ್‌ಶೀಟ್‌ನಲ್ಲಿ ಅನೇಕ ಲೋಪದೋಷಗಳು ಕಂಡು ಬಂದಿವೆ. ತರುಣ್ ವಿಚಾರಣೆ ಮಾಡಿದರೂ ಅವನ ಸ್ಟೇಟ್‌ಮೆಂಟ್ ಚಾರ್ಜ್‌ಶೀಟ್‌ನಲ್ಲಿ ಇಲ್ಲ.

ನಟಿ, ಆ್ಯಂಕರ್ ಅನುಶ್ರೀ ಹೇಳಿಕೆ ಕೂಡ ಚಾರ್ಜ್‌ಶೀಟ್‌ನಲ್ಲಿ ಕೈಬಿಡಲಾಗಿದೆ ಎಂದು ಹೇಳಿದ್ದರು. ಮಂಗಳೂರಿನ ಪೊಲೀಸರು, ಬೆಂಗಳೂರು ಪೊಲೀಸರ ತರಹ ತನಿಖೆ ಮಾಡಿಲ್ಲ, ಎಲ್ಲೋ ಒಂದು ಕಡೆ ಟೆಕ್ನಿಕಲ್ ಎರರ್ಸ್ ಆಗಿದೆ. ಆರೋಪಿಗಳ ಮೆಡಿಕಲ್ ರಿಪೋರ್ಟ್‌ ಮಾಡಿಲ್ಲ. ತನಿಖಾಧಿಕಾರಿ ಶಿವಪ್ರಕಾಶ್ ನಾಯಕ್ ಎತ್ತಂಗಡಿ ಮಾಡಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೇಸ್ ರೀಓಪನ್ ಮಾಡಲು ಪಿಟಿಷನ್ ಕೊಡುತ್ತೇನೆ ಎಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.