ETV Bharat / state

ಏರೋ ಇಂಡಿಯಾದಲ್ಲಿ ಆ್ಯಂಟಿ ಡ್ರೋನ್ ಡಿವೈಸ್​ಗಳದ್ದೇ ಮಾತು, ಚರ್ಚೆ - ಬೇಸಿಕ್ ಆ್ಯಂಟಿ ಡ್ರೋನ್​

ಭಾರತೀಯ ವಾಯುಪಡೆ ಹಾಗೂ ಭೂಸೇನೆ ಆ್ಯಂಟಿ ಡ್ರೋನ್ ಡಿವೈಸ್​ ಅನ್ನು ಖರೀದಿಸಲು ಮುಂದಾಗಿವೆ.

ಏರೋ ಇಂಡಿಯಾ
ಏರೋ ಇಂಡಿಯಾ
author img

By

Published : Feb 16, 2023, 9:22 PM IST

ಬೆಂಗಳೂರು: ಏರೋ ಇಂಡಿಯಾ 2023 ರಲ್ಲಿ ರಕ್ಷಣಾ ವಲಯದಲ್ಲಿ ಬಹು ಚರ್ಚಿತ ವಿಷಯಗಳಾಗಿ ಡ್ರೋನ್ ಹಾಗೂ ಪ್ಯಾರಾಚೂಟ್​ಗಳು ಮುಖ್ಯವಾಗಿ ಆ್ಯಂಟಿ ಡ್ರೋನ್ ಡಿವೈಸ್ ವಾಯುಪಡೆಗಳ ಎರಡು ಭವಿಷ್ಯದ ಪ್ರಮುಖ ಅಸ್ತ್ರವಾಗಲಿದೆ ಎಂದು ವ್ಯಾಖ್ಯಾನಿಸಲಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಏರೋ ಇಂಡಿಯಾದಲ್ಲಿ ಬಹುತೇಕ ಡ್ರೋನ್‌ಗಳ ಕಾರು ಬಾರು ಜೋರಾಗಿ ಕಂಡುಬರುತ್ತಿದೆ. ಹಲವು ಪ್ರದರ್ಶಕರು ಡ್ರೋನ್ ಹಾಗೂ ಪ್ಯಾರಾಚೂಟ್​ಗೆ ಸಂಬಂಧಿಸಿದಂತೆ ಹಲವು ಸಂಶೋಧನೆಗಳನ್ನು ನಡೆಸಿ, ಪ್ರಾಯೋಗಾರ್ಥ ಹಾರಾಟಗಳನ್ನು ನಡೆಸುತ್ತಿದ್ದಾರೆ.

ಭವಿಷ್ಯದಲ್ಲಿ ಯುದ್ಧವಿಮಾನಗಳಿಗೆ ಸರಿಸಮಾನವಾಗಿ ಡ್ರೋನ್ ಗಳು ಕಾರ್ಯನಿರ್ವಹಿಸುತ್ತವೆ. ಈ ಕಾರಣಕ್ಕಾಗಿ ಭಾರತೀಯ ವಾಯುಪಡೆ ಹಾಗೂ ಭೂಸೇನೆ ಒಂದು ಹೆಜ್ಜೆ ಮುಂದೆ 'ಆ್ಯಂಟಿ ಡ್ರೋನ್' ಡಿವೈಸ್ ಖರೀದಿಸಲು ಮುಂದಾಗಿದೆ. ಹಲವು ಸಂಸ್ಥೆಗಳು ಡಿವೈಸ್ ಅನ್ನು ಸಿದ್ಧಪಡಿಸಿದ್ದು, ಈಗಾಗಲೇ ಭಾರತೀಯ ಸೇನೆಯಲ್ಲಿ ತನ್ನ ಪರಿಕ್ಷಾರ್ಥ ಕಾರ್ಯವನ್ನು ಆರಂಭಿಸಿವೆ. ಮುಂದಿನ ದಿನದಲ್ಲಿ ಇನ್ನಷ್ಟು ಪ್ರಮಖವಾಗಿ ಕಾರ್ಯನಿರ್ವಹಿಸಲಿದೆ. ದೂರದ ಪ್ರಯಾಣವನ್ನು ಡ್ರೋನ್ ಗಳು ಸುಮಾರು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಸಂಶೋಧನೆ ನಡೆಸಲಾಗುತ್ತಿದೆ. ಬೆಳಗ್ಗೆ, ರಾತ್ರಿ ಎರಡೂ ಸಮಯದಲ್ಲಿ ಹಾರಾಡುವ ಸಾಮರ್ಥ್ಯ ಇರುವ ಡ್ರೋನ್ ಗಳು ಸದ್ಯದಲ್ಲೇ ಬರಲಿವೆ.

ಡ್ರೋನ್ ವಿಮಾನಗಳು ಮಾತ್ರವಲ್ಲದೆ ಅದಕ್ಕೆ ಅಗತ್ಯವಿರುವ ತಂತ್ರಜ್ಞಾನಗಳನ್ನು ಸಿದ್ಧಪಡಿಸುವ ಕೆಲಸದಲ್ಲಿ ಹಲವು ಸಂಸ್ಥೆಗಳು ಇವೆ. ಬೇಸಿಕ್ ಆ್ಯಂಟಿ ಡ್ರೋನ್ ಈಗಾಗಲೇ ರವಾನಿಸಲು ರಕ್ಷಣಾ ಇಲಾಖೆಯಲ್ಲಿದ್ದು, ಇನ್ನಷ್ಟು ಅಭಿವೃದ್ದಿಪಡಿಸಲಾಗುತ್ತಿದೆ. ಸದ್ಯ 200 ಡಿವೈಸ್‌ಗಳು ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾಹಿತಿಯನ್ನು ಕಂಟ್ರೋಲ್ ರೂಂಗೆ ರವಾನಿಸುತ್ತದೆ. ಇದರಿಂದಾಗಿ, ಯಾವುದೇ ಅನುಮಾನಾಸ್ಪದ ಡ್ರೋನ್​ಗಳು ಬಂದರೂ, ಕ್ರಮವಹಿಸಲು ಸಹಾಯವಾಗುತ್ತದೆ. ಮುಂದಿನ ದಿನದಲ್ಲಿ ಇನ್ನಷ್ಟು ಸೇರ್ಪಡೆಯಾಗುವ ವಿಶ್ವಾಸವಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಶೇ. 75ರಷ್ಟು ಹಣ ಮೀಸಲು: ಮುಂಬರುವ ಆರ್ಥಿಕ ವರ್ಷದಲ್ಲಿ ರಕ್ಷಣಾ ಇಲಾಖೆಗೆ ಹಂಚಿಕೆಯಾಗಿರುವ ಒಟ್ಟು ಬಂಡವಾಳದ ಬಜೆಟ್​ನಲ್ಲಿ ಶೇಕಡಾ 75 ರಷ್ಟು ಹಣವನ್ನು ದೇಶಿ ಸಂಸ್ಥೆಗಳಿಂದ ರಕ್ಷಣಾ ಸಾಮಗ್ರಿಗಳ ಖರೀದಿಗೆ ಮೀಸಲಿಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ನಿನ್ನೆ (ಬುಧವಾರ) ಏರೋ ಇಂಡಿಯಾ 2023 ರ ಬಂಧನ್ - ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿ, ನಿರ್ಧಾರದಿಂದ ಭಾರತೀಯ ರಕ್ಷಣಾ ಸಾಮಗ್ರಿಗಳ ತಯಾರಕರು ಮತ್ತು ಸಲಕರಣೆಗಳ ಖರೀದಿಗೆ ಸುಮಾರು 1 ಲಕ್ಷ ಕೋಟಿ ರೂಪಾಯಿಗಳಷ್ಟು ಹಣ ಮೀಸಲಿಟ್ಟಂತೆ ಆಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ರಕ್ಷಣಾ ಇಲಾಖೆ ಮೀಸಲಿಟ್ಟ ಶೇ 75ರಷ್ಟನ್ನು ದೇಶಿಯ ಸಂಸ್ಥೆಗಳಿಂದ ಖರೀದಿಗೆ ಮೀಸಲಿಡಲಾಗಿದೆ: ರಾಜನಾಥ್ ಸಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.