ETV Bharat / state

ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಮತ್ತೊಂದು ಸಂಕಷ್ಟ... ಮುಂದಿನ ಟೆಂಡರ್​ಗೆ ಅಡ್ಡಿ? - indira canteen latest news

ಈಗಾಗಲೇ ಎಸಿಬಿ ತನಿಖೆ ಎದುರಿಸುತ್ತಿರುವ ಇಂದಿರಾ ಕ್ಯಾಂಟೀನ್​ ಗುತ್ತಿಗೆದಾರರ ವಿರುದ್ಧ ಪಾಲಿಕೆಯ ಹಣಕಾಸು ಜಂಟಿ ಆಯುಕ್ತ ವೆಂಕಟೇಶ್ ಕೂಡಾ ಎಫ್​ಐಆರ್ ದಾಖಲಿಸಿದ್ದು, ಇಂದಿರಾ ಕ್ಯಾಂಟೀನ್​ಗಳಿಗೆ ಆಹಾರ ಪೂರೈಸುತ್ತಿರುವ ಚೆಫ್ ಟಾಕ್, ರಿವಾರ್ಡ್ಸ್ ಸಂಸ್ಥೆಗಳು ಸಂಕಷ್ಟ ಎದುರಿಸುವಂತಾಗಿದೆ.

Another problem for Indira Canteen contractors
ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಮತ್ತೊಂದು ಸಂಕಷ್ಟ....ಮುಂದಿನ ಟೆಂಡರ್​ಗೆ ಅಡ್ಡಿ?
author img

By

Published : Jan 22, 2020, 8:57 PM IST

ಬೆಂಗಳೂರು: ಇಂದಿರಾ ಕ್ಯಾಂಟೀನ್​ಗಳಿಗೆ ಆಹಾರ ಪೂರೈಸುತ್ತಿರುವ ಚೆಫ್ ಟಾಕ್, ರಿವಾರ್ಡ್ಸ್ ಸಂಸ್ಥೆಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಎಸಿಬಿ ತನಿಖೆ ಎದುರಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಪಾಲಿಕೆಯ ಹಣಕಾಸು ಜಂಟಿ ಆಯುಕ್ತ ವೆಂಕಟೇಶ್ ಕೂಡಾ ಎಫ್​ಐಆರ್ ದಾಖಲಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಮತ್ತೊಂದು ಸಂಕಷ್ಟ....ಮುಂದಿನ ಟೆಂಡರ್​ಗೆ ಅಡ್ಡಿ?

ಗುತ್ತಿಗೆ ಸಂಸ್ಥೆಗಳು ಅಪಾರ ಪ್ರಮಾಣದಲ್ಲಿ ಸಬ್ಸಿಡಿ ಹಣ ಪಡೆದು ಸರ್ಕಾರಕ್ಕೆ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಗರ ವಕ್ತಾರ ಎನ್.ಆರ್ ರಮೇಶ್, 2018 ರಲ್ಲೇ ದಾಖಲೆ ಸಹಿತ ಈ ಹಗರಣವನ್ನು ಬಯಲು ಮಾಡಿದ್ದೆ. ಎರಡೂ ಗುತ್ತಿಗೆ ಸಂಸ್ಥೆಗಳು ನೀಡಿರುವ ಲೆಕ್ಕಚಾರದ ಪ್ರಕಾರ, 175 ಇಂದಿರಾ ಕ್ಯಾಂಟೀನ್ ಹಾಗೂ ಹದಿನೈದು ಮೊಬೈಲ್ ಕ್ಯಾಂಟೀನ್​ಗಳು 62,70,000 ಜನ ಊಟ, ಉಪಹಾರ ಮಾಡುತ್ತಾರೆ ಎಂಬ ತಪ್ಪು ಲೆಕ್ಕ ಕೊಟ್ಟಿದ್ದಾರೆ ಎಂದರು.

ಪ್ರತೀ ತಿಂಗಳು ಆರು ಕೋಟಿ ಎಂಬತ್ಮೂರು ಲಕ್ಷ ರೂಪಾಯಿ ಸಬ್ಸಿಡಿ ಹಣ ಲೂಟಿ ಮಾಡುತ್ತಿದ್ದಾರೆ. ಈ ದಾಖಲೆಗಳ ಪ್ರಕಾರ, ಸಿ.ಎಂ ಹಗರಣವನ್ನು ತನಿಖೆಗೆ ವಹಿಸಿದ್ದು, ಎಸಿಬಿ ತನಿಖೆಯಿಂದ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವ ನಿರೀಕ್ಷೆಯಿದೆ ಎಂದರು.

ಕೆಲವು ಕ್ಯಾಂಟೀನ್​ಗಳಲ್ಲಿ ಐದಾರು ಜನರೂ ಸಹ ಊಟ ಮಾಡುತ್ತಿಲ್ಲ. ಆದ್ರೆ 1,400 ಜನರ ಊಟದ ಲೆಕ್ಕ ಕೊಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ವಿರುದ್ಧ ಎಫ್ ಐಆರ್ ದಾಖಲಾಗಿರುವುದು ಸ್ವಾಗತಾರ್ಹ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಅಬ್ದುಲ್ ವಾಜಿದ್, ಈ ಹಿಂದೆಯೇ ನಡೆಸಿದ ತನಿಖೆಯಲ್ಲಿ ಏನೂ ಸಿಗಲಿಲ್ಲ. ಇದೀಗ ಇಂದಿರಾ ಕ್ಯಾಂಟೀನ್​ನನ್ನು ಮುಚ್ಚಿಸಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡ್ತಾ ಇದ್ದಾರೆ. ಬಡವರು ನೆಮ್ಮದಿಯ ಊಟ ಮಾಡದಂತೆ ಸರ್ಕಾರ ಮಾಡ್ತಿದೆ ಎಂದರು.

ಇನ್ನು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು ಪ್ರತಿಕ್ರಿಯಿಸಿ, ಮೂರು ತಿಂಗಳಿಂದ ಎಸಿಬಿ ತನಿಖೆಗೆ ಸಹಕರಿಸಿ ದಾಖಲೆಗಳನ್ನು ನೀಡಿದ್ದೇವೆ. ಎಲ್ಲ ಲೆಕ್ಕಗಳು ಟ್ಯಾಪ್​ ಆಗ್ತಿವೆ. ಇದೀಗ ಮತ್ತೊಂದು ಪ್ರಕರಣ ದಾಖಲಾಗಿರುವುದು ಗೊಂದಲ ಮೂಡಿಸಿದ್ದು, ಹೊಸ ಟೆಂಡರ್​ನಲ್ಲಿ ಭಾಗವಹಿಸದಂತೆ ಮಾಡುವ ಕಾರಣಕ್ಕೆ ಈ ರೀತಿಯಾಗ್ತಿರಬಹುದು ಎಂದು ತಿಳಿಸಿದರು.

Intro:ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಮತ್ತೊಂದು ಸಂಕಷ್ಟ- ಮುಂದಿನ ಟೆಂಡರ್ ಗೆ ಅಡ್ಡಿ!?
ಬೆಂಗಳೂರು: ಇಂದಿರಾ ಕ್ಯಾಂಟೀನ್ ಗಳಿಗೆ ಆಹಾರ ಪೂರೈಸುತ್ತಿರುವ ಚೆಫ್ ಟಾಕ್, ರಿವಾರ್ಡ್ಸ್ ಸಂಸ್ಥೆಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಎಸಿಬಿ ತನಿಖೆ ಎದುರಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಪಾಲಿಕೆಯ ಹಣಕಾಸು ಜಂಟಿ ಆಯುಕ್ತ ವೆಂಕಟೇಶ್ ಕೂಡಾ ಎಫ್ ಐ ಆರ್ ದಾಖಲಿಸಿದ್ದಾರೆ. ಗುತ್ತಿಗೆ ಸಂಸ್ಥೆಗಳು ಅಪಾರ ಪ್ರಮಾಣದಲ್ಲಿ ಸಬ್ಸಿಡಿ ಹಣ ಪಡೆದು ಸರ್ಕಾರಕ್ಕೆ ವಂಚಿಸಿದ್ದಾರೆಂಬ ಎಂಬ ಆರೋಪದ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಗರ ವಕ್ತಾರ ಎನ್ ಆರ್ ರಮೇಶ್, 2018 ರಲ್ಲೇ ದಾಖಲೆ ಸಹಿತ ಈ ಹಗರಣವನ್ನು ಬಯಲು ಮಾಡಿದ್ದೆ. ಎರಡೂ ಗುತ್ತಿಗೆ ಸಂಸ್ಥೆಗಳು ನೀಡಿರುವ ಲೆಕ್ಕಚಾರದ ಪ್ರಕಾರ, 175 ಇಂದಿರಾಕ್ಯಾಂಟೀನ್ ಹಾಗೂ ಹದಿನೈದು ಮೊಬೈಲ್ ಕ್ಯಾಂಟೀನ್ ಗಳು 62,70,000 ಜನ ಊಟ, ಉಪಹಾರ ಮಾಡುತ್ತಾರೆ ಎಂಬ ತಪ್ಪು ಲೆಕ್ಕ ಕೊಟ್ಟಿದ್ದಾರೆ. ಪ್ರತಿತಿಂಗಳು ಆರು ಕೋಟಿ ಎಂಬತ್ಮೂರ ಲಕ್ಷ ರೂಪಾಯಿ ಸಬ್ಸಿಡಿ ಹಣ ಲೂಟಿ ಮಾಡುತ್ತಿದ್ದಾರೆ. ಈ ದಾಖಲೆಗಳ ಪ್ರಕಾರ, ಸಿಎಂ ಹಗರಣವನ್ನು ತನಿಖೆಗೆ ವಹಿಸಿದರು. ಎಸಿಬಿ ತನಿಖೆಯಿಂದ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವ ನಿರೀಕ್ಷೆಯಿದೆ ಎಂದರು.
ಕೆಲವು ಕ್ಯಾಂಟೀನ್ ಗಳಲ್ಲಿ ಐದಾರು ಜನರೂ ಊಟ ಮಾಡುತ್ತಿಲ್ಲ. ಆದ್ರೆ 1400 ಜನರ ಊಟದ ಲೆಕ್ಕ ಕೊಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ವಿರುದ್ಧ ಎಫ್ ಐಆರ್ ದಾಖಲಾಗಿರುವುದು ಸ್ವಾಗತಾರ್ಹ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಅಬ್ದುಲ್ ವಾಜಿದ್, ಈ ಹಿಂದೆಯೇ ನಡೆಸಿದ ತನಿಖೆಯಲ್ಲಿ ಏನೂ ಸಿಗಲಿಲ್ಲ. ಇದೀಗ ಇಂದಿರಾ ಕ್ಯಾಂಟೀನ್ ನ ಮುಚ್ಚಿಸಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡ್ತಾ ಇದ್ದಾರೆ. ಬಡವರು ನೆಮ್ಮದಿಯ ಊಟ ಮಾಡದಂತೆ ಸರ್ಕಾರ ಮಾಡ್ತಿದೆ ಎಂದರು.
ಇನ್ನು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು ಪ್ರತಿಕ್ರಿಯಿಸಿ, ಮೂರ ತಿಂಗಳಿಂದ ಎಸಿಬಿ ತನಿಖೆಗೆ ಸಹಕರಿಸಿ ದಾಖಲೆಗಳನ್ನು ನೀಡಿದ್ದೇವ. ಎಲ್ಲಾ ಲೆಕ್ಕಗಳೂ ಟ್ಯಾಪಿ ಆಗ್ತಿವೆ. ಇದೀಗ ಮತ್ತೊಂದು ಪ್ರಕರಣ ದಾಖಲಾಗಿರುವುದು ಗೊಂದಲ ಮೂಡಿಸಿದೆ. ಹೊಸ ಟೆಂಡರ್ ನಲ್ಲಿ ಭಾಗವಹಿಸದಂತೆ ಮಾಡುವ ಕಾರಣಕ್ಕೆ ಈ ರೀತಿಯಾಗ್ತಿರಬಹುದು ಎಂದು ತಿಳಿಸಿದರು.

ಸೌಮ್ಯಶ್ರೀ
Kn_bng_03_Indira_canteen_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.