ETV Bharat / state

ನಗರದಲ್ಲಿ ಮತ್ತೊಂದು ಬೃಹತ್ ಕಟ್ಟಡ ಕುಸಿತದ ಭೀತಿ..! - ಬೃಹತ್ ಕಟ್ಟಡ

ಹೊರಮಾವು ಸಿಗ್ನಲ್ ಬಳಿ ಕಟ್ಟಡ ನೆಲಕ್ಕುರುಳುವ ಭೀತಿ ಎದುರಾಗಿದ್ದು, ಕಟ್ಟಡದ ಅಕ್ಕಪಕ್ಕ ಇರುವ ಮನೆಯವರು ಭಯದಿಂದಲೇ ಜೀವನ ಸಾಗಿಸುತ್ತಿದ್ದಾರೆ.

ಬೃಹತ್ ಕಟ್ಟಡ ಕುಸಿತದ ಭೀತಿ
author img

By

Published : May 25, 2019, 4:49 AM IST

Updated : May 25, 2019, 9:07 AM IST

ಬೆಂಗಳೂರು: ಹೊರಮಾವು ಸಮೀಪದ ರೈಲ್ವೇ ಅಂಡರ್ ಪಾಸ್ ಬಳಿ ವಾಲಿಕೊಂಡಿದ್ದ ಅನಧಿಕೃತ ಕಟ್ಟಡವನ್ನು ಕೆಲವೇ ದಿನಗಳಹಿಂದೆ ತೆರವುಗೊಳಿಸಲಾಗಿತ್ತು, ಈ ಘಟನೆ ಮಾಸುವ ಮುನ್ನವೇ ಹೊರಮಾವು ಸಿಗ್ನಲ್ ಬಳಿ ಮತ್ತೊಂದು ಕಟ್ಟಡ ನೆಲಕ್ಕುರುಳುವ ಭೀತಿ ಎದುರಾಗಿದೆ. ಕಟ್ಟಡದ ಅಕ್ಕಪಕ್ಕ ಇರುವ ಮನೆಯವರು ಭಯದಿಂದಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳಿಗೇನೂ ಕೊರತೆಯಿಲ್ಲ, ಅದರಲ್ಲಿ ಅಕ್ರಮ ಕಟ್ಟಡಗಳೂ ಇವೆ, ಸಕ್ರಮ ಕಟ್ಟಡಗಳೂ ಇವೆ. ನಿಜ ಹೇಳಬೇಕೆಂದರೇ ಸಕ್ರಮಕ್ಕಿಂತ ಅಕ್ರಮಗಳೇ ಹೆಚ್ಚು, ಆದರೆ ಇಲ್ಲೊಂದು ಕಟ್ಟಡ ಸಕ್ರಮ ಕಟ್ಟಡವಾಗಿದ್ದು ಕೂಡಾ ಇದೇ ಕಟ್ಟಡ ಕುಸಿಯುವ ಹಂತದಲ್ಲಿದೆ. ಇದು ರಾಮಮೂರ್ತಿನಗರ ಹೊರವರ್ತುಲ ರಸ್ತೆಗೆ ಅಂಟಿಕೊಂಡಿರುವ ಹೊರಮಾವು ಸಿಗ್ನಲ್ ಬಳಿ ಸಾಯಿನಾಥ್ ಎಂಬುವರಿಗೆ ಸೇರಿದ ಕಟ್ಟಡವಾಗಿದೆ.

ಹೊರಮಾವು ಸಿಗ್ನಲ್ ಬಳಿ ಕಟ್ಟಡ ನೆಲಕ್ಕುರುಳುವ ಭೀತಿ

ಅದರಲ್ಲಿ ಕ್ಲೌಡ್ ನೈನ್ ಎಂಬ ಹೆರಿಗೆ ಆಸ್ಪತ್ರೆ ಇದೆ. ಇದರ ಪಕ್ಕದಲ್ಲಿ ಸಯ್ಯದ್ ಆಸಿಫ್ ಅಲಿ ಎಂಬುವವರಿಗೆ ಸೇರಿದ ಜಾಗವಿದ್ದು, ಅದರಲ್ಲಿ ಯೂನಿಶೈರ್ ಹೆಸರಲ್ಲಿ ಅಪಾರ್ಟ್ ಮೆಂಟ್ ನಿರ್ಮಿಸಲು ಸುಮಾರು 25ಅಡಿಗೂ ಹೆಚ್ಚು ಆಳವನ್ನು ಅಗೆಯಲಾಗಿದೆ. ಅದೂ ಕೂಡಾ ಸುಮಾರು ಎರಡು ವರ್ಷಗಳ ಹಿಂದೆ. ಆಗಿನಿಂದಲೂ ತಕಾರಾರಿನಿಂದ ಕಾಮಗಾರಿ ನಿಂತಿದೆ. ಆದರೆ, ಹೆರಿಗೆ ಆಸ್ಪತ್ರೆ ಪಕ್ಕದಲ್ಲೇ ಪಾಯಕ್ಕಾಗಿ ಅಗೆಯಲಾಗಿರುವುದರಿಂದ ದಿನೇ ದಿನೇ ಮಣ್ಣು ಕುಸಿಯುತ್ತಿದೆ. ಮಳೆ ಬಂದಾಗಲಂತೂ ಹೆಚ್ಚು ಭೂಕುಸಿತ ಉಂಟಾಗುತ್ತಿದ್ದು, ಕಟ್ಟಡಕ್ಕೆ ಹೆಚ್ಚಿನ ಅನಾಹುತವಾಗುವ ಸಾಧ್ಯತೆ ಇದೆ.

ಅಷ್ಟೇ ಅಲ್ಲದೆ ಪಾಯ ಅಗೆದಿರುವ ಜಮೀನಿನ ಹಿಂಭಾಗಲ್ಲಿ ಸಾಕಷ್ಟು ಮನೆಗಳು ಕೂಡಾ ಇದ್ದು, ಅವು ಕೂಡಾ ಕುಸಿಯುವ ಸಾಧ್ಯತೆ ಇದೆ. ಯೂನಿಶೈರ್ ಕಂಪನಿಯವರು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವುದರಿಂದ ಮುಂದಿನ ದಿನಗಳಲ್ಲಿ ಅಕ್ಕಪಕ್ಕದ ಕಟ್ಟಡಗಳಿಗೆ ಸಮಸ್ಯೆ ತಪ್ಪಿದ್ದಲ್ಲ.

ನಗರದಲ್ಲಿ ಈಗಾಗಲೇ ಕಟ್ಟಡಗಳು ಕುಸಿದು ಅನೇಕರನ್ನು ಬಲಿ ತೆಗೆದುಕೊಂಡಿವೆ, ಯಾರೋ ಮಾಡಿದ ತಪ್ಪಿಗೆ ಅಮಾಯಕರು ಬಲಿಯಾಗುವುದೇ ಹೆಚ್ಚು. ಇನ್ನಾದರೂ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಿ ಅಮಾಯಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ ಎಂಬುದು ಇಲ್ಲಿನ ಸ್ಥಳೀಯರ ಮನವಿ.

Intro:ನಗರದಲ್ಲಿ ಮತ್ತೊಂದು ಬೃಹತ್ ಕಟ್ಟಡ ಕುಸಿತದ ಭೀತಿ.

ಹೊರಮಾವು ಸಮೀಪದ ರೈಲ್ವೇ ಅಂಡರ್ ಪಾಸ್ ಬಳಿ ವಾಲಿಕೊಂಡಿದ್ದ ಅನಧಿಕೃತ ಕಟ್ಟಡವನ್ನು ಕೆಲವೇ ದಿನಗಳಹಿಂದೆ ತೆರವುಗೊಳಿಸಲಾಗಿತ್ತು, ಈ ಘಟನೆ ಮಾಸುವ ಮುನ್ನವೇ ಹೊರಮಾವು ಸಿಗ್ನಲ್ ಬಳಿ ಮತ್ತೊಂದು ಕಟ್ಟಡ ನೆಲಕ್ಕುರುಳುವ ಭೀತಿ ಎದುರಾಗಿದ್ದು, ಕಟ್ಟಡದ ಅಕ್ಕಪಕ್ಕ ಇರುವ ಮನೆಗಳವರು ಭಯದಿಂದಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳಿಗೇನೂ ಕೊರತೆಯಿಲ್ಲ, ಅದರಲ್ಲಿ ಅಕ್ರಮ ಕಟ್ಟಡಗಳೂ ಇವೆ, ಸಕ್ರಮ ಕಟ್ಟಡಗಳೂ ಇವೆ. ನಿಜ ಹೇಳಬೇಕೆಂದರೇ ಸಕ್ರಮಕ್ಕಿಂತ ಅಕ್ರಮಗಳೇ ಹೆಚ್ಚು, ಆದರೇ ಇಲ್ಲೊಂದು ಕಟ್ಟಡ ಸಕ್ರಮ ಕಟ್ಟಡವಾಗಿದ್ದು ಕೂಡಾ ಇದೇ ಕಟ್ಟಡ ಕುಸಿಯುವ ಹಂತದಲ್ಲಿದೆ. ರಾಮಮೂರ್ತಿನಗರ ಹೊರವರ್ತುಲ ರಸ್ತೆಗೆ ಅಂಟಿಕೊಂಡಿರುವ ಹೊರಮಾವು ಸಿಗ್ನಲ್ ಬಳಿ ಸಾಯಿನಾಥ್ ಎಂಬುವರಿಗೆ ಸೇರಿದ ಕಟ್ಟಡವಿದ್ದು, ಅದರಲ್ಲಿ ಕ್ಲೌಡ್ ನೈನ್ ಎಂಬ ಹೆರಿಗೆ ಆಸ್ಪತ್ರೆ ಇದೆ. ಇದರ ಪಕ್ಕದಲ್ಲಿ ಸಯ್ಯದ್ ಆಸಿಫ್ ಅಲಿ ಎಂಬುವವರಿಗೆ ಸೇರಿದ ಜಾಗವಿದ್ದು ಅದರಲ್ಲಿ ಯೂನಿಶೈರ್ ಹೆಸರಲ್ಲಿ ಅಪಾರ್ಟ್ ಮೆಂಟ್ ನಿರ್ಮಿಸಲು ಸುಮಾರು 25ಅಡಿಗೂ ಹೆಚ್ಚು ಆಳವನ್ನು ಅಗೆಯಲಾಗಿದೆ. ಅದೂ ಕೂಡಾ ಸುಮಾರು ಎರಡು ವರ್ಷಗಳ ಹಿಂದೆ. ಆಗಿನಿಂದಲೂ ತಕಾರಾರಿನಿಂದ ಕಾಮಗಾರಿ ನಿಂತಿದೆ. ಆದರೆ ಹೆರಿಗೆ ಆಸ್ಪತ್ರೆ ಪಕ್ಕದಲ್ಲೇ ಪಾಯಕ್ಕಾಗಿ ಅಗೆಯಲಾಗಿರುವುದರಿಂದ ದಿನೇ ದಿನೇ ಮಣ್ಣು ಕುಸಿಯುತ್ತಿದೆ. ಮಳೆ ಬಂದಾಗಲಂತೂ ಹೆಚ್ಚು ಭೂಕುಸಿತ ಉಂಟಾಗುತ್ತಿದ್ದು, ಕಟ್ಟಡಕ್ಕೆ ಹೆಚ್ಚಿನ ಅನಾಹುತವಾಗುವ ಸಾಧ್ಯತೆ ಇದೆ.

Body:ಅಲ್ಲದೇ ಪಾಯ ಅಗೆದಿರುವ ಜಮೀನಿನ ಹಿಂಭಾಗಲ್ಲಿ ಸಾಕಷ್ಟು ಮನೆಗಳು ಕೂಡಾ ಇದ್ದು ಅವು ಕೂಡಾ ಕುಸಿಯುವ ಸಾದ್ಯತೆ ಇದೆ. ಯೂನಿಶೈರ್ ಕಂಪನಿಯವರು ಕಾಮಗಾರಿಗೆ ಅರ್ಧಕ್ಕೆ ನಿಲ್ಲಿಸಿರುವುದರಿಂದ ಮುಂದಿನ ದಿನಗಳಲ್ಲಿ ಅಕ್ಕಪಕ್ಕದ ಕಟ್ಟಡಗಳಿಗೆ ಸಮಸ್ಯೆ ತಪ್ಪಿದ್ದಲ್ಲ, ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ಮಂದಿ ಆಗಮಿಸುತ್ತಾರೆ. ಅಕ್ಕಪಕ್ಕದಲ್ಲಿ ಹತ್ತಾರು ಕುಟುಂಬಗಳು ವಾಸವಾಗಿದ್ದು, ಅವರು ಕೂಡಾ ಅಪಾಯ ಸಂಭವಿಸುವ ಭೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಸಂಭಂದಪಟ್ಟವರಿಗೆ ತಿಳಿಸಿದ್ದರೂ ಸಹ ಯಾವುದೇ ಕ್ರಮವಾಗಿಲ್ಲ. ಇತ್ತೀಚೆಗಷ್ಟೇ ಬಿಬಿಎಂಪಿನವರು ಸಂಬಂಧಪಟ್ಟ ಸೈಟ್ ಮಾಲೀಕರಿಗೆ ನೋಟಿಸ್ ಸಹ ನೀಡಿದ್ದಾರೆ.

ಬೈಟ್2. ರವಿ, ಸ್ಥಳೀಯರು
ಬೈಟ್ 3, ರಘು, ಸ್ಥಳೀಯರು

Conclusion:ಸಿರೀಶ್ ಆಸ್ಪತ್ರೆಯ ಮಾಲೀಕ ಮಾತನಾಡಿ, ನಾವು ಒಂದು‌ ಆಸ್ಪತ್ರೆ ಕಟ್ಟಿದ್ದೆವೆ ಅದರ ಪಕ್ಕದಲ್ಲಿ ಯೂನಿಶೈರ್ ಬಿಲ್ಡರ್ಸ್ ಎಂಬವರು ಕಳೆದ ಐದು ವರ್ಷಗಳ ಹಿಂದೆ ಪ್ರಾಜೆಕ್ಟ್ ಆರಂಭಿಸಿದರು. ಪಾರ್ಕಿಂಗ್ ಮಾಡಲು ಸುಮಾರು 45 ರಿಂದ 60 ಅಡಿಗಳಷ್ಟು ಆಳಕ್ಕೆ ಮಣ್ಣನ್ನು ತೆಗೆದಿದ್ದಾರೆ. ಈಗ ಸಮಸ್ಯೆ ಬಂದಿರುವು ಅಂದರೆ ಕಳೆದ ಎರಡು ವರ್ಷಗಳಿಂದ ಕಾಮಗಾರಿ ನಿಲ್ಲಿಸಲಾಗಿದೆ. ಆಳವಾಗಿ ಮಣ್ಣನ್ನು ತೋಡಿರುವುದರಿಂದ ಮಳೆ ಬಿದ್ದಾಗ ಮಣ್ಣು ಕುಸಿದು ಅಕ್ಕಪಕ್ಕದ ಮನೆಗಳು ಕಟ್ಟಡಗಳು ಕುಸಿಯುವ ಭೀತಿ ಎದುರಾಗಿ ಅಕ್ಕಪಕ್ಕದ ನಿವಾಸಿಗಳು ಭಯದಿಂದ ಜೀವನ ನಡೆಸುವಂತಾಗಿದೆ ಎಂದು ಹೇಳಿದರು. ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದರು.ಹತ್ತಾರು ಜೀವಗಳ ಪ್ರಾಣ ಹೋಗುವ ಮುನ್ನ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.

ನಗರದಲ್ಲಿ ಈಗಾಗಲೇ ಕಟ್ಟಡಗಳು ಕುಸಿದು ಅನೇಕರನ್ನು ಬಲಿ ತೆಗೆದುಕೊಂಡಿವೆ, ಯಾರೋ ಮಾಡಿದ ತಪ್ಪಿಗೆ ಅಮಾಯಕರು ಬಲಿಯಾಗುವುದೇ ಹೆಚ್ಚು,ಇನ್ನಾದರೂ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಿ ಅಮಾಯಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಿ.

ಧರ್ಮರಾಜು ಎಂ ಕೆಆರ್ ಪುರ.
Last Updated : May 25, 2019, 9:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.