ETV Bharat / state

ಕಳ್ಳನಿಗೂ ಕೊರೊನಾ: ಬೆಂಗಳೂರಲ್ಲಿ ಇಂದು ನಾಲ್ವರಲ್ಲಿ ಸೋಂಕು ಪತ್ತೆ - ಕಳ್ಳನಿಗೆ ಕೊರೊನಾ ಸೋಂಕು

ಇಂದು ರಾಜ್ಯದಲ್ಲಿ 63 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರು ಒಂದರಲ್ಲೇ 4 ಪ್ರಕರಣಗಳು ದಾಖಲಾಗಿವೆ.

Another four more corona positive cases registered in Bangalore
ಇಂದು ನಾಲ್ವರಲ್ಲಿ ಸೋಂಕು ಪತ್ತೆ
author img

By

Published : May 20, 2020, 4:26 PM IST

ಬೆಂಗಳೂರು: ಕಳ್ಳನೋರ್ವನಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಇಂದು ನಾಲ್ಕು ಜನರಿಗೆ ಸೋಂಕು ತಗುಲಿದೆ.

ಪಾದರಾಯನಪುರ ಬಳಿಯ ಜೆ.ಜೆ.ಆರ್ ನಗರ ವಾರ್ಡ್ 136ರ ನಿವಾಸಿಯಾಗಿದ್ದ ಕಳ್ಳನೋರ್ವ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಬಂಧನಕ್ಕೊಳಗಾಗಿದ್ದ. ಈ ವೇಳೆ ಆತನಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ವರದಿಯಲ್ಲಿ ಪಾಸಿಟಿವ್​ ಬಂದಿತ್ತು. ಈ ಸಂಬಂಧ ವ್ಯಕ್ತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ದ್ವಿತೀಯ ಸಂಪರ್ಕಿತರಿಬ್ಬರಿಗೆ ಹರಡಿದ ಸೋಂಕು:

ಇದಲ್ಲದೆ ಮೂವರಲ್ಲಿ ಪಾಸಿಟಿವ್ ಬಂದಿದ್ದು, ಇಬ್ಬರು ಮಲ್ಲೇಶ್ವರಂ ವಾರ್ಡ್​ನವರಾಗಿದ್ದಾರೆ. ಯಶವಂತಪುರ ಸಮೀಪದ ಮಲ್ಲೇಶ್ವರಂ ವಾರ್ಡ್ ವ್ಯಾಪ್ತಿಯಲ್ಲಿ ಮಂಗಲ್ಸ್ ಆಸ್ಪತ್ರೆಯಲ್ಲಿ ಪಶ್ಚಿಮ ಬಂಗಾಳದ ಮಹಿಳೆಗೆ (701) ಕೊರೊನಾ ಪಾಸಿಟಿವ್ ಬಂದಿತ್ತು. ಇವರ ದ್ವಿತೀಯ ಸಂಪರ್ಕದ ಇಬ್ಬರಿಗೆ ಪರೀಕ್ಷೆ ಮಾಡಿದಾಗ ಕೊರೊನಾ ತಗುಲಿರುವುದು ಗೊತ್ತಾಗಿದೆ‌.

ಸೋಂಕು ತಗುಲಿರುವವರ ಮಾಹಿತಿ:

ರೋಗಿ ನಂ-701 ಮಹಿಳೆಗೆ ಚಿಕಿತ್ಸೆ ನೀಡಿದ್ದ ವೈದ್ಯರ ಸೊಸೆ (31) ಹಾಗೂ ಸುಮಾರು 40 ವರ್ಷದ ಅವರ ಮನೆಯ ವ್ಯಕ್ತಿಯೋರ್ವನಿಗೆ ಕೊರೊನಾ ಬಂದಿದೆ. ಹದಿನಾಲ್ಕು ದಿನದ ಕ್ವಾರಂಟೈನ್ ಬಳಿಕ ಎಂಟು ಜನರ ಆರೋಗ್ಯ ಪರೀಕ್ಷೆ ಮಾಡಿದಾಗ ಇಬ್ಬರಲ್ಲಿ ಕೊರೊನಾ ದೃಢಪಟ್ಟಿದೆ. ಬೆಂಗಳೂರಿನ ಇನ್ನೊಂದು ಕೊರೊನಾ ಪಾಸಿಟಿವ್ ಪ್ರಕರಣ ಎಲ್ಲಿಯದೆಂದು ತಿಳಿದು ಬಂದಿಲ್ಲ. ಈ ಮೂಲಕ ನಗರದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 250ಕ್ಕೆ ಏರಿಕೆಯಾಗಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.