ಬೆಂಗಳೂರು: ಕೊರೊನಾ ಹೆಮ್ಮಾರಿಗೆ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನರ್ಸ್ ಒಬ್ಬರು ಇಂದು ಮೃತಪಟ್ಟಿದ್ದು, ಇದರೊಂದಿಗೆ ಸಂಜಯ್ ಗಾಂಧಿ ಆಸ್ಪತ್ರೆಯನ್ನು ಸೀಲ್ಡೌನ್ ಮಾಡಲಾಗಿದೆ.
ನಗರದ ಸಂತೋಷ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನರ್ಸ್, ಲಿಂಗರಾಜಪುರ ನಿವಾಸಿಯಾಗಿದ್ದು, ಇಂದು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ನಗರದ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿನ ಸಿಬ್ಬಂದಿಗೂ ಕೊರೊನಾ ತಟ್ಟಿದ್ದು, ಸುಮಾರು 11 ಸಿಬ್ಬಂದಿಗಳಿಗೆ ಸೋಂಕು ಪತ್ತೆಯಾಗಿದೆ.
ಒಬ್ಬ ರೋಗಿಯಿಂದ 11 ಜನರಿಗೆ ಸೋಂಕು ತಗುಲಿದ್ದು, ಟೆಕ್ನಿಷಿಯನ್ ನರ್ಸ್ ಹಾಗೂ ವೈದ್ಯರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಇಂದಿನಿಂದ ಮುಂದಿನ ಗುರುವಾರದವರೆಗೆ ಆಸ್ಪತ್ರೆ ಸೀಲ್ಡೌನ್ ಮಾಡಲಾಗಿದೆ. ಹೊರ ರೋಗಿಗಳ ಚಿಕಿತ್ಸೆ ಇರುವುದಿಲ್ಲ ಕೇವಲ ತುರ್ತು ಸೇವೆ ಮಾತ್ರ ಲಭ್ಯವಿರಲಿದೆ ಎಂದು ತಿಳಿದು ಬಂದಿದೆ.