ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ ಒಟ್ಟು 41 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಇಂದು ಆರೋಗ್ಯ ಇಲಾಖೆ ಎರಡನೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಒಂದೇ ದಿನ 8 ಮಂದಿಗೆ ಸೋಂಕು ತಗುಲಿರುವುದಾಗಿ ಹೇಳಿದೆ. ಇನ್ನು 41 ಸೋಂಕಿತರ ಪೈಕಿ ಇಂದು ಗುಣಮುಖರಾಗಿರುವ ಮತ್ತೊಬ್ಬರನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇದುವರೆಗೂ ಒಟ್ಟು 3 ಜನ ಗುಣಮುಖರಾಗಿ ಡಿಸ್ಚಾರ್ಜ್ ಮಾಡಲಾಗಿದ್ದು, ಈವರೆಗೆ ಒಬ್ಬರು ಸಾವನ್ನಪ್ಪಿರುವ ವರದಿಯಾಗಿದೆ.
ಸೋಂಕಿತರ ಹಿಸ್ಟರಿ ಮಾಹಿತಿ ಇಲ್ಲಿದೆ..
ರೋಗಿ- 34: 32 ವರ್ಷ ವಯಸ್ಸಿನ ಪುರುಷ, ಕೇರಳ ರಾಜ್ಯದ ಕಾಸರಗೋಡಿನ ನಿವಾಸಿಯು ದುಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆಯನ್ನು ಹೊಂದಿದ್ದು ಮಾರ್ಚ್ 20 ರಂದು ಮಂಗಳೂರಿಗೆ ಆಗಮಿಸಿದ್ದರು. ಈ ಪ್ರಕರಣವನ್ನು ನೇರವಾಗಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಅವರನ್ನು ವಿಮಾನ ನಿಲ್ದಾಣದಿಂದಲೇ ಮಂಗಳೂರಿನಲ್ಲಿರುವ ನಿಯೋಜಿತ ಆಸ್ಪತ್ರೆಗೆ ಕಳುಹಿಸಲಾಗಿದ್ದು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ.
ರೋಗಿ- 35: ಉತ್ತರ ಕನ್ನಡ ಜಿಲ್ಲೆಯ ನಿವಾಸಿ, 40 ವರ್ಷ ವಯಸ್ಸಿನ ಪುರುಷ ದುಬೈಗೆ ಪ್ರಯಾಣ ಕೈಗೊಂಡ ಹಿನ್ನೆಲೆ ಹೊಂದಿದ್ದು, ಮಾರ್ಚ್ 21 ರಂದು ಭಾರತಕ್ಕೆ ಆಗಮಿಸಿದ್ದಾರೆ. ಈ ಪ್ರಕರಣವನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ನಿಯೋಜಿತ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ- 36: ಉತ್ತರ ಕನ್ನಡ ಜಿಲ್ಲೆಯ ನಿವಾಸಿ, 65 ವರ್ಷ ವಯಸ್ಸಿನ ಪುರುಷ ದುಬೈಗೆ ಪ್ರಯಾಣ ಕೈಗೊಂಡ ಹಿನ್ನೆಲೆ ಹೊಂದಿದ್ದು, ಮಾರ್ಚ್ 18ರಂದು ಮುಂಬೈ ಮೂಲಕ ಭಾರತಕ್ಕೆ ಆಗಮಿಸಿದ್ದು, ರೈಲಿನ ಮೂಲಕ ಉತ್ತರ ಕನ್ನಡಕ್ಕೆ ಪ್ರಯಾಣ ಕೈಗೊಂಡಿದ್ದಾರೆ. ಇವರನ್ನು ಪ್ರತ್ಯೇಕಿಸಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ನಿಯೋಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 37: ಚಿಕ್ಕಬಳ್ಳಾಪುರ ಜಿಲ್ಲೆಯ ನಿವಾಸಿ 56 ವರ್ಷ ವಯಸ್ಸಿನ ಮಹಿಳೆ, ಅವರ ಕುಟುಂಬ ಸದಸ್ಯರು ಮತ್ತು ಪಿ 19 ಮತ್ತು ಪಿ 22 ಇದರ ಸಹಪ್ರಯಾಣಿಕ ಸೌದಿ ಅರೇಬಿಯಾ ಮೆಕ್ಕಾಗೆ ಪ್ರಯಾಣ ಕೈಗೊಂಡ ಹಿನ್ನೆಲೆ ಹೊಂದಿದ್ದು, ಮಾರ್ಚ್ 14 ರಂದು ಹೈದರಾಬಾದ್ ಮೂಲಕ ಭಾರತಕ್ಕೆ ಆಗಮಿಸಿದ್ದಾರೆ. ಚಿಕ್ಕಬಳ್ಳಾಪುರದ ನಿಯೋಜಿತ ಆಸ್ಪತ್ರೆಯಲ್ಲಿ ಈ ಪ್ರಕರಣವನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ.
ರೋಗಿ -38: ಬೆಂಗಳೂರಿನ ನಿವಾಸಿಯಾಗಿರುವ 56 ವರ್ಷ ವಯಸ್ಸಿನ ಮಹಿಳೆ ಮತ್ತು ಪಿ3 ಸಂಪರ್ಕವನ್ನು ಹೊಂದಿರುವಾಕೆಯನ್ನು ಬೆಂಗಳೂರಿನ ನಿಯೋಜಿತ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ- 39: 47 ವರ್ಷ ವಯಸ್ಸಿನ ಪುರುಷ, ಕೇರಳ ರಾಜ್ಯದ ಕಾಸರಗೋಡಿನ ನಿವಾಸಿಯು ದುಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆಯನ್ನು ಹೊಂದಿದ್ದು ಮಂಗಳೂರಿಗೆ ಆಗಮಿಸಿದ್ದರು. ಈ ಪ್ರಕರಣವನ್ನು ನೇರವಾಗಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಮತ್ತು ಅವರನ್ನು ವಿಮಾನ ನಿಲ್ದಾಣದಿಂದಲೇ ಮಂಗಳೂರಿನಲ್ಲಿರುವ ನಿಯೋಜಿತ ಆಸ್ಪತ್ರೆಗೆ ಕಳುಹಿಸಲಾಗಿದ್ದು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ.
ರೋಗಿ 40 : 70 ವರ್ಷ ವಯಸ್ಸಿನ ಮಹಿಳೆ, ಕೇರಳ ರಾಜ್ಯದ ಕಾಸರಗೋಡಿನ ನಿವಾಸಿಯು ಸೌದಿ ಅರೇಬಿಯಾಗೆ ಪ್ರಯಾಣ ಮಾಡಿರುವ ಹಿನ್ನೆಲೆಯನ್ನು ಹೊಂದಿದ್ದು ಮಂಗಳೂರಿಗೆ ಆಗಮಿಸಿದ್ದರು. ಈ ಪ್ರಕರಣವನ್ನು ಮಂಗಳೂರಿನಲ್ಲಿರುವ ನಿಯೋಜಿತ ಆಸ್ಪತ್ರೆಗೆ ಕಳುಹಿಸಲಾಗಿದ್ದು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ.
ರೋಗಿ 41: : 23 ವರ್ಷ ವಯಸ್ಸಿನ ಪುರುಷ, ಕೇರಳ ರಾಜ್ಯದ ಕಾಸರಗೋಡಿನ ನಿವಾಸಿಯು ದುಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆಯನ್ನು ಹೊಂದಿದ್ದು ಮಾರ್ಚ್ 20ರಂದು ಮಂಗಳೂರಿಗೆ ಆಗಮಿಸಿದ್ದರು. ಈ ಪ್ರಕರಣವನ್ನು ನೇರವಾಗಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಮತ್ತು ಅವರನ್ನು ವಿಮಾನ ನಿಲ್ದಾಣದಿಂದಲೇ ಮಂಗಳೂರಿನಲ್ಲಿರುವ ನಿಯೋಜಿತ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ.
ಇನ್ನು ಕರ್ನಾಟಕದಲ್ಲಿ ಒಟ್ಟು ಪತ್ತೆ ಮಾಡಲಾಗಿರುವ 41 ಪ್ರಕರಣಗಳಲ್ಲಿ 6 ಪ್ರಕರಣಗಳು ಕೇರಳಕ್ಕೆ ಪ್ರಯಾಣ ಮಾಡಬೇಕಿರುವ ಪ್ರಯಾಣಿಕರಾಗಿದ್ದು, ಅವರು ಕರ್ನಾಟಕದ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಟ್ಕಳ, ಉತ್ತರ ಕನ್ನಡ ಜಿಲ್ಲೆಯ ನಿವಾಸಿಯಾದ ಇವರನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆದು ಐಸೊಲೇಷನ್ ಮಾಡಿರುವುದರಿಂದ ಇವರನ್ನು ದಕ್ಷಿಣ ಕನ್ನಡ ಜಿಲ್ಲೆಯ ವರದಿಯಲ್ಲಿ ಪರಿಗಣಿಸಲಾಗಿದೆ.
ಜಿಲ್ಲಾವಾರು ಕೊರೊನಾ ಕೇಸ್
- ಬೆಂಗಳೂರು- 24
- ಕಲಬುರಗಿ- 3
- ಕೊಡಗು- 1
- ಚಿಕ್ಕಬಳ್ಳಾಪುರ- 3
- ಮೈಸೂರು-2
- ಧಾರವಾಡ- 1
- ದಕ್ಷಿಣ ಕನ್ನಡ- 5
- ಉತ್ತರ ಕನ್ನಡ- 2