ETV Bharat / state

ಯಲಹಂಕದ ಬಿಎಸ್​ಎಫ್​ ಕ್ಯಾಂಪ್​ನಲ್ಲಿ ಸೈನಿಕರ ವಾರ್ಷಿಕ ಕ್ರೀಡಾಕೂಟ - ಯಲಹಂಕದ ಬಿಎಸ್​ಎಫ್​ ಕ್ಯಾಂಪ್

ಬಿಎಸ್​ಎಫ್​ ಕ್ಯಾಂಪ್​ನಲ್ಲಿ ಸೈನಿಕರ ವಾರ್ಷಿಕ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ಸೈನಿಕರು ಉತ್ಸಾಹದಿಂದ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದರು.

BSF Camp, Yelahanka
ಯಲಹಂಕದ ಬಿಎಸ್​ಎಫ್​ ಕ್ಯಾಂಪ್​ನಲ್ಲಿ ಸೈನಿಕರ ವಾರ್ಷಿಕ ಕ್ರೀಡಾಕೂಟ
author img

By

Published : Nov 6, 2020, 9:51 PM IST

ಯಲಹಂಕ: ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಲು ಯಲಹಂಕ ಬಿ.ಎಸ್.ಎಫ್​​​ನ ಸಿಗ್ನಲ್ ಟ್ರೈನಿಂಗ್ ಸ್ಕೂಲ್​ನಲ್ಲಿ ಸೈನಿಕರಿಗಾಗಿ ವಾರ್ಷಿಕ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು. ಸೈನಿಕರಿಗೆ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚಿಸಲು ಆಯೋಜನೆ ಮಾಡಿದ್ದ ಕ್ರೀಡೆಯಲ್ಲಿ ಸೈನಿಕರು ಉತ್ಸಾಹದಿಂದ ಭಾಗವಹಿಸಿದ್ರು.

ಚಂಗನೆ ನೆಗೆದು ಚಿರತೆಯಂತೆ ಗುರಿಯತ್ತ ಮುನ್ನುಗ್ಗಿದ ಕ್ರೀಡಾಪಟುಗಳಿಗೆ ಗ್ಯಾಲರಿಯಲ್ಲಿ ಕೂತು ಪ್ರೇಕ್ಷಕರು ಹುರಿದುಂಬಿಸ್ತಿದ್ರು. ಹಗ್ಗ ಹಿಡಿದು ಬಲ ಭೀಮರಂತೆ ಹುರಿಯಾಳುಗಳು ಸೆಣಸಾಡುತ್ತಿದ್ದರು.

ಬೆಂಗಳೂರು ಉತ್ತರ ಯಲಹಂಕ ತಾಲೂಕಿನ ಬಿ.ಎಸ್.ಎಫ್ ಕ್ಯಾಂಪ್​ನ ಸಿಗ್ನಲ್ ಟ್ರೈನಿಂಗ್ ಸ್ಕೂಲ್ ಸೈನಿಕರ ನಡುವೆ ನಡೆದ ವಾರ್ಷಿಕ ಕ್ರೀಡಾಕೂಟ ನೆರೆದಿದ್ದವರ ಮೈ ನವಿರೇಳಿಸಿತ್ತು. ಕೊರೊನಾ ಮಹಾಮಾರಿ ಇಡೀ ಜಗತ್ತನ್ನ ಕಿತ್ತು ತಿನ್ನುತ್ತಿರುವ ಸಮಯದಲ್ಲಿ ಜಗತ್ತಿನಾದ್ಯಂತ ವೈದ್ಯರು ಲಸಿಕೆ ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ. ನಮ್ಮ ಪ್ರಧಾನಿಗಳು ನೀಡಿದ ಸೂಚನೆಯಂತೆ ನಾವು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಡಿದ್ದೇವೆ. ಸೈನಿಕರ ದೈಹಿಕ ಚಟುವಟಿಕೆಯಿಂದ ಫಿಟ್ನೆಸ್ ತೊಂದರೆ ಆಗದ ಹಾಗೆ ತರಬೇತಿ ಮುಂದುವರೆಸಿ ದೇಶದ ಭದ್ರತೆಗೆ ನಮ್ಮ ಕರ್ತವ್ಯ ಮುಂದುವರೆಸುತ್ತಿದ್ದೇವೆ. ಎದೆಗುಂದದ ಸೈನಿಕರ ಆತ್ಮಸ್ಥೈರ್ಯಕ್ಕಾಗಿ ಇಂತಹ ಕ್ರೀಡಾಕೂಟಗಳು ಸಹಕಾರಿ ಆಗಲಿವೆ ಎಂದು ಬಿ.ಎಸ್.ಎಫ್ ಐ‌ಜಿಪಿ ಡಾ. ಸಾಬು ಎ. ಜೋಸೆಫ್ ಸಂತಸ ವ್ಯಕ್ತಪಡಿಸಿದರು.

ಇನ್ನು ಯಲಹಂಕದ ಬಿ.ಎಸ್.ಎಫ್ ನೆಲೆಗೂ ಕಾಲಿಟ್ಟಿದ್ದ ಕೊರೊನಾ 30 ಜನರಿಗೆ ಬಾಧಿಸಿತ್ತು. ದೈಹಿಕ ಸದೃಢತೆಯಿಂದ ಯಾರಿಗೂ ಏನೂ ತೊಂದರೆ ಆಗಿಲ್ಲ.

ಕ್ರೀಡಾಪಟು ಬಿ.ಎಸ್.ಎಫ್ ಕಾನ್ಸ್​ಟೇಬಲ್​​ ನೀಲೇಶ್ ಮಾತನಾಡಿ, ನಮ್ಮ ದೈಹಿಕ-ಮಾನಸಿಕ ಸದೃಢತೆಗಾಗಿ ಕ್ರೀಡೆ ಅತ್ಯವಶ್ಯಕ. ಇದರಲ್ಲಿ ನಾನು ಭಾಗವಹಿಸಿ ಪದಕ ಗೆದ್ದಿದ್ದು ಸಂತೋಷ ತಂದಿದೆ ಎಂದು ಸಂತಸ ಹಂಚಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.