ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ಈ ಕುರಿತು ಫೇಸ್ಬುಕ್ ಲೈವ್ನಲ್ಲಿ ಮಾತನಾಡಿರುವ ಅವರು, 2021ರ ಏಪ್ರಿಲ್ ನಲ್ಲಿ ಬರುವ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದೇನೆ. ನನ್ನ ಬದುಕಿನಲ್ಲಿ ಕೆಲವು ಬದಲಾವಣೆ ತರಬೇಕು ಎಂದು ನಿರ್ಧರಿಸಿದ್ದೇನೆ. ನೀವು ನಿಮ್ಮ ಬದುಕಿನಲ್ಲಿ ಬದಲಾವಣೆಗಳನ್ನ ಮಾಡಿಕೊಳ್ಳಿ ಎಂದು ಯುವ ಜನಕ್ಕೆ ಕಿವಿ ಮಾತು ಹೇಳಿರುವ ಅವರು, ಇದಕ್ಕಾಕಿ ತಾಯಿನಾಡು ತಮಿಳುನಾಡಿನಲ್ಲಿ ಇದ್ದುಕೊಂಡು ಕೆಲ ಸಮಾಜ ಕಾರ್ಯ ಮಾಡುತ್ತಿದ್ದೇನೆ ಎಂದಿದ್ದಾರೆ.
ಮಿಸ್ಯೂ ಕರ್ನಾಟಕ: ಕೋವಿಡ್ 19 ಬಂದಿದೆ ಅದರ ವಿರುದ್ಧ ನಾವು ಹೋರಾಟ ನಡೆಸಬೇಕು. ನಾನು ಚೆನ್ನಾಗಿದ್ದೇನೆ. ಮಿಸ್ ಯೂ ಕರ್ನಾಟಕ ಎಂದು ಲೈವ್ ನಲ್ಲಿ ಅವರು ಹೇಳಿದ್ದಾರೆ.
ಕರ್ನಾಟಕ ದ ಜನ ಪ್ರಿತಿ ಕೊಟ್ಟರು ನಾನು ಅದಕ್ಕೆ ಆಭಾರಿಯಾಗಿದ್ದೇನೆ. ಕರ್ನಾಟಕ ಪೊಲೀಸ್ ಅಧಿಕಾರಿಯಾಗಿ 10 ವರ್ಷ ಕೆಲಸ ನಿರ್ವಹಿಸಿದ್ದೇನೆ. ಬದುಕಿನಲ್ಲಿ ಹಲವಾರು ರೀತಿಯ ಗುರಿ ಇಟ್ಟುಕೊಂಡು ನಾನು ಪೊಲೀಸ್ ವೃತ್ತಿಗೆ ವಿದಾಯ ಹೇಳಿದ್ದೆ. ಸದ್ಯ 2021ರಲ್ಲಿ ರಾಜಕೀಯ ಪ್ರವೇಶ ಮಾಡಲಿದ್ದೆನೆ. ಇನ್ನು ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳಿಗೆ, ಯುವ ಜನರಿಗೆ ಒಳ್ಳೆಯ ವಾತಾವರಣ ಕಲ್ಪಿಸಬೇಕು. ಬಡವರಿಗೆ ಕೃಷಿಕರಿಗೆ ಒತ್ತು ಕೊಡಬೇಕು, ಅದಕ್ಕೆ ಶ್ರಮಿಸುತ್ತೆನೆ. ಎಂದರು.
ಪುಸ್ತಕ ಬರೆಯುತ್ತೇನೆ: ಕೊರೊನಾ ಸೋಂಕು ಬಹಳ ದುರ್ಬಲ ವೈರಸ್, ನಾವು ಸಾಮಾಜಿಕ ಅಂತರ ಕಾಪಾಡಿಕೊಂಡರೆ ಆರಾಮಾಗಿ ಬದುಕಬಹುದು. ಇದು ಮುಗಿಯುವ ಹೊತ್ತಿಗೆ ನಮ್ಮ ಜೀವನದಲ್ಲಿ ಬಹಳಷ್ಟು ಬದಲಾವಣೆಯಾಗಬೇಕು. ನನ್ನ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇನೆ. ನಾನು ಒಂದು ಪುಸ್ತಕ ಬರೆಯುತ್ತೇನೆ ಎಂದಿದ್ದಾರೆ.
ಕೆಲಸ ಮಾತ್ರ ಜೀವನವಲ್ಲ, ಕುಟುಂಬ ಸ್ನೇಹಿತರ ಜೊತೆ ಕಳೆಯಿರಿ ಬದುಕಿನಲ್ಲಿ ಕೊನೆಯಲ್ಲಿ ಸಾಯುವಾಗ ಖುಷಿ ವಿಷಯ ಅಂದರೆ ತಂದೆ ತಾಯಿ ಜೊತೆ ಇರುವುದು ಎಂದಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಒತ್ತಡವಿದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಪ್ರತಿನಿಧಿಗಳನ್ನ ಆಯ್ಕೆ ಮಾಡಿ ಕಳುಹಿಸುತ್ತಾರೆ.
ರಾಜಕೀಯ ವ್ಯಕ್ತಿಗಳು ಪೊಲೀಸರ ಮೇಲೆ ಒತ್ತಡ ಹಾಕುವುದು ಸಹಜ. ಆದರೆ ಪೊಲೀಸರು ಜನ ಪರ ಕೆಲಸ ಮಾಡಬೇಕು. ಎಲ್ಲಾ ಒತ್ತಡಕ್ಕೆ ಬಗ್ಗಬಾರದು, ರಾಜಕೀಯ ವ್ಯಕ್ತಿಗಳು ಜನಪರವಾಗಿದ್ದರೆ ಒಳ್ಳೆಯದು ಎಂದಿದ್ದಾರೆ. ಯುವ ಜನರು ರಾಜಕೀಯಕ್ಕೆ ಬರಬೇಕು ಎಂದೂ ಸಲಹೆ ನೀಡಿದ್ದಾರೆ.