ETV Bharat / state

ಉದ್ದೇಶ ಪೂರ್ವಕವಾಗಿ ಶಾಸಕರನ್ನು ಬಿಟ್ಟು ಸಂಸದೆ ಸಮಲತಾ ದಿಶಾ ಸಭೆ ನಡೆಸಿದ್ದಾರೆ: ಅನ್ನದಾನಿ - ಈಟಿವಿ ಭಾರತ ಕನ್ನಡ

ತಮ್ಮನ್ನ ಬಿಟ್ಟು ಸಂಸದೆ ಸುಮಲತಾ ದಿಶಾ ಸಭೆ ನಡೆಸಿದ್ದಾರೆ ಎಂದು ಜೆಡಿಎಸ್​ ಶಾಸಕ ಅನ್ನದಾನಿ ಸುಮಲತಾ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

KN_BNG
ಶಾಸಕ ಡಾ. ಕೆ. ಅನ್ನದಾನಿ
author img

By

Published : Sep 16, 2022, 7:35 PM IST

ಬೆಂಗಳೂರು: ಉದ್ದೇಶಪೂರ್ವಕವಾಗಿ ಶಾಸಕರನ್ನು ಬಿಟ್ಟು ಸಂಸದೆ ಸುಮಲತಾ ದಿಶಾ ಸಭೆ ನಡೆಸಿದ್ದಾರೆ ಎಂದು ಮಳವಳ್ಳಿ ಜೆಡಿಎಸ್ ಶಾಸಕ ಕೆ.ಅನ್ನದಾನಿ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ‌ಮಾತನಾಡಿದ ಅವರು, ಮಂಡ್ಯದಲ್ಲಿ ಸಂಸದೆ ಸುಮಲತಾ ದಿಶಾ ಸಭೆ ಕರೆದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಅನೌಪಚಾರಿಕವಾಗಿ ದಿಶಾ ಮೀಟಿಂಗ್ ಕರೆದ ಮಾಹಿತಿ ಬಂತು. ನಾವೆಲ್ಲ ಶಾಸಕರು ಅಸೆಂಬ್ಲಿಯಲ್ಲಿ ಇದ್ದು, ನಾವೂ ದಿಶಾ ಸಭೆಯ‌ ಸದಸ್ಯರು. ನಮ್ಮನ್ನು ಬಿಟ್ಟು ಸಭೆ ನಡೆಸುವುದು ಸೂಕ್ತವಲ್ಲ ಎಂದರು.

ಅಸೆಂಬ್ಲಿ ನಡೆಯಬೇಕಾದರೆ ಯಾಕೆ ಮೀಟಿಂಗ್ ಮಾಡುತ್ತೀರಾ. ಕಳೆದ ಬಾರಿ ಕೂಡ ಅಸೆಂಬ್ಲಿ ಸಂದರ್ಭದಲ್ಲಿ ಮೀಟಿಂಗ್ ಮಾಡಿದ್ರು. ಸಭೆ ಮುಂದೂಡಲು‌ ನಾನು ಜಿಲ್ಲಾಧಿಕಾರಿಗೆ ಹೇಳಿದ್ದೇನೆ. ಚರ್ಚೆ ಮಾಡಿ ಹೇಳುತ್ತೇನೆ ಅಂತ ಡಿಸಿ ಹೇಳಿದ್ರು.

ಆದರೆ ಡಿಸಿ ವಾಪಸು ಕಾಲ್ ಮಾಡಿಲ್ಲ. ಡಿಸಿ‌ ಕೂಡ ಹೊಣೆಯಾಗ್ತಾರೆ. ಕಳೆದ ಬಾರಿ ಕೂಡ ಇದೆ ರೀತಿ ಮಾಡಿದ್ರು. ಸಂಸದರು ಶಾಸಕರ ಜೊತೆ ಚರ್ಚೆ ಮಾಡಿ ಸಮಯ‌ ನಿಗದಿ ಮಾಡಬೇಕಿತ್ತು. ಸಂಸದರು ಬೇಕು ಅಂತ ನಮ್ಮನ್ನು ಬಿಟ್ಟು ಸಭೆ ಮಾಡುತ್ತಿದ್ದಾರೆ‌. ಇದೊಂದು ಹುನ್ನಾರ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಮತ್ತೆ ಜೆಡಿಎಸ್ ಶಾಸಕರ ವಿರುದ್ಧ ಸಂಸದೆ ಸುಮಲತಾ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.