ETV Bharat / state

ಮೇಕೆದಾಟು ಪಾದಯಾತ್ರೆಯ ಭದ್ರತೆಗೆ ತೆರಳಿದ್ದ ಆನೇಕಲ್ ಪೊಲೀಸರಿಗೆ ಕೊರೊನಾ ದೃಢ - ಆನೇಕಲ್ ಪೊಲೀಸರಿಗೆ ಕೊರೊನಾ ದೃಢ

ಬೆಂಗಳೂರು ನಗರ ಜಿಲ್ಲೆಯಿಂದ ತೆರಳಿದ್ದ ಪೊಲೀಸರಲ್ಲಿ 15 ಜನರಿಗೆ ಪಾಸಿಟಿವ್ ಆಗಿದೆ. ಪೊಲೀಸರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಎಲ್ಲಾ ಠಾಣೆಗಳಲ್ಲಿ ಆರೋಗ್ಯ ತಪಾಸಣೆ ಮಾಡಲು ಎಸ್​ಪಿ ಸೂಚಿಸಿದ್ದಾರೆ. ಈ ಹಿನ್ನೆಲೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಮಾಸ್ಕ್ ಕಡ್ಡಾಯಗೊಳಿಸಿದ್ದು, ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿದೆ.

S P Vamshikrishna
ಎಸ್ ​ಪಿ ವಂಶಿಕೃಷ್ಣ
author img

By

Published : Jan 17, 2022, 5:15 PM IST

ಆನೇಕಲ್: ಮೇಕೆದಾಟು ಪಾದಯಾತ್ರೆಯ ಭದ್ರತೆಗೆ ಜಿಲ್ಲೆಯಿಂದ 130 ಜನ ಪೊಲೀಸರು ಹೋಗಿದ್ರು. ಇವರಲ್ಲಿ ಬಹುತೇಕ ಅಧಿಕಾರಿಗಳಲ್ಲೂ ಪಾಸಿಟಿವ್​ ಕಾಣಿಸಿಕೊಂಡಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್​ಪಿ ವಂಶಿಕೃಷ್ಣ ಹೇಳಿದ್ದಾರೆ.

ಎಸ್​ ಪಿ ವಂಶಿಕೃಷ್ಣ ಮಾತನಾಡಿದರು

ಆನೇಕಲ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಈ ಕುರಿತು ಮಾತನಾಡಿದ ಅವರು, ಆನೇಕಲ್ ಉಪವಿಭಾಗದಲ್ಲಿ ಮೂವರಲ್ಲಿ ಇಂದು ಸೋಂಕು ಪತ್ತೆಯಾಗಿದೆ. ಉಳಿದ ನೂರಕ್ಕೂ ಹೆಚ್ಚು ಮಂದಿಯ ಫಲಿತಾಂಶ ಹೊರಬೀಳಬೇಕಿದೆ ಎಂದರು.

ಬೆಂಗಳೂರು ನಗರ ಜಿಲ್ಲೆಯಿಂದ ತೆರಳಿದ್ದ ಪೊಲೀಸರಲ್ಲಿ 15 ಜನರಿಗೆ ಪಾಸಿಟಿವ್ ಬಂದಿದೆ. ಪೊಲೀಸರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಎಲ್ಲಾ ಠಾಣೆಗಳಲ್ಲಿ ಆರೋಗ್ಯ ತಪಾಸಣೆ ಮಾಡಲು ತಿಳಿಸಲಾಗಿದೆ. ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಮಾಸ್ಕ್ ಕಡ್ಡಾಯಗೊಳಿಸಿದ್ದು, ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.

ಪೊಲೀಸರಿಗೆ 450 ಬೂಸ್ಟರ್ ಡೋಸ್ ಹಾಕಿದ್ದೇವೆ. ಬೆಂಗಳೂರು ಉಪವಿಭಾಗದಲ್ಲಿ ಸಿಬ್ಬಂದಿ ಕೊರತೆ ಹಿನ್ನೆಲೆ 200 ಜನ ಹೋಮ್ ಗಾರ್ಡ್ಸ್ ಅನ್ನು ಕೆಲಸಕ್ಕೆ ತೆಗೆದುಕೊಂಡಿದ್ದೇವೆ. ಕ್ರೈಂ ಆಗುತ್ತದೆ, ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸರು ಅಕ್ರಮಗಳನ್ನು ತಡೆಯುವ ನಿರಂತರ ಕೆಲಸ ಮಾಡುತ್ತಿದ್ದಾರೆ. ದಾಸನಪುರ ಪ್ರಕರಣವನ್ನು ಕೆಲವೇ ದಿನಗಳಲ್ಲಿ ಮಾಧ್ಯಮ ಹೇಳಿಕೆ ಮೂಲಕ ನೀಡುತ್ತೇವೆ ಎಂದು ತಿಳಿಸಿದರು.

ಓದಿ: ಬೆಳಗಾವಿಯಲ್ಲಿ ಶೇ 20ರಷ್ಟು ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆ: ಡಿಹೆಚ್ಒ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.