ETV Bharat / state

ಆನೇಕಲ್​ನಲ್ಲಿ Rave Party ಮೇಲೆ ಪೊಲೀಸರ​ ದಾಳಿ... 5 ಯುವತಿಯರು ಸೇರಿ 37 ಮಂದಿ ಬಂಧನ

ಆನೇಕಲ್​ನ ಮುತ್ಯಾಲಮಡು ಬಳಿ ರೆಸಾರ್ಟ್​​ ಮೇಲೆ ದಾಳಿ ನಡೆಸಿದ ಪೊಲೀಸರು, Rave party (ರೇವ್​ ಪಾರ್ಟಿ) ಮಾಡುತ್ತಿದ್ದ 37 ಜನರನ್ನು ಜನರನ್ನು ಬಂಧಿಸಿದ್ದಾರೆ. ಈ ರೆಸಾರ್ಟ್ ತಮ್ಮನಾಯಕನಹಳ್ಳಿ ಜೆಡಿಎಸ್ ಮುಖಂಡ ಶ್ರೀನಿವಾಸ್ ಮಾಲೀಕತ್ವದ್ದಾಗಿದೆ ಎಂದು ತಿಳಿದುಬಂದಿದೆ.

anekal-police-raid-on-resort
ವೀಕೆಂಡ್ ರೇವ್ ಪಾರ್ಟಿ ಮೇಲೆ ಪೊಲೀಸರ ದಾಳಿ
author img

By

Published : Sep 19, 2021, 8:26 AM IST

Updated : Sep 19, 2021, 3:38 PM IST

ಆನೇಕಲ್(ಬೆಂಗಳೂರು): ಇಲ್ಲಿನ ಮುತ್ಯಾಲಮಡು ಬಳಿ ವಾರಾಂತ್ಯದ ಮೋಜು ಮಸ್ತಿಗೆ ಖಾಸಗಿ ರೆಸಾರ್ಟ್​​ನಲ್ಲಿ ನಡೆಯುತ್ತಿದ್ದ ರೇವ್​ ಪಾರ್ಟಿ (Rave party) ಮೇಲೆ ಪೊಲೀಸರು ದಾಳಿ ನಡೆಸಿ, ಯುವಕ-ಯುವತಿಯರು ಸೇರಿ 37 ಮಂದಿಯನ್ನು ಬಂಧಿಸಿದ್ದಾರೆ. ದಾಳಿ ವೇಳೆ ಸ್ಥಳದಲ್ಲಿಯೇ 15 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಪರಾರಿಯಾಗಿದ್ದ 22 ಜನರನ್ನು ಇದೀಗ ಬಂಧಿಸಿರುವುದಾಗಿ ಆನೇಕಲ್ ಡಿವೈಎಸ್ಪಿ ಮಲ್ಲೇಶ್ ತಿಳಿಸಿದ್ದಾರೆ.

ಕಾಡಂಚಿನ ಮುತ್ಯಾಲಮಡು ಕಣಿವೆ ಬಳಿ ಭರ್ಜರಿ ಪಾರ್ಟಿ:

ಬನ್ನೇರುಘಟ್ಟ ಹಾಗೂ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ತಮ್ಮನಾಯಕನಹಳ್ಳಿ ಕಾಡಂಚಿನ ಮುತ್ಯಾಲಮಡು ಕಣಿವೆ ಬಳಿ ಇರುವ ಖಾಸಗಿ ರೆಸಾರ್ಟ್​ನಲ್ಲಿ ನಿನ್ನೆ ರಾತ್ರಿ 12.30ರ ಸುಮಾರಿಗೆ ರೇವ್​ ಪಾರ್ಟಿ ನಡೆಯುತ್ತಿತ್ತು. ​ವೀಕೆಂಡ್​ ಮೋಜಿಗಾಗಿ ರೆಸಾರ್ಟ್​​ನಲ್ಲಿ ಸೇರಿದ್ದ ಯುವಕ-ಯುವತಿಯರು ಗಾಂಜಾ, ಡ್ರಗ್ಸ್ ಸೇವಿಸಿ ನಶೆಯಲ್ಲಿ ತೇಲುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಆನೇಕಲ್ ಪೊಲೀಸರು 15 ಜನರನ್ನು ಸ್ಥಳದಲ್ಲೇ ಬಂಧಿಸಿದ್ದರು. ಖಾಕಿ ಕಂಡು ಹಲವರು ಸ್ಥಳದಿಂದ ಪರಾರಿಯಾಗಿದ್ದರು. ಓಡಿ ಹೋಗಿದ್ದವರಿಗಾಗಿ ಶೋಧ ಕಾರ್ಯ ಆರಂಭಿಸಿದ ಪೊಲೀಸರು ಈ ವರೆಗೆ ಒಟ್ಟು 37 ಜನರನ್ನು ಬಂಧಿಸಿದ್ದಾರೆ.

ಆನೇಕಲ್​ನಲ್ಲಿ Rave Party ಮೇಲೆ ಪೊಲೀಸರ​ ದಾಳಿ

ಹೈ ಆ್ಯಪ್ ಮೂಲಕ ಪಾರ್ಟಿ ಆಯೋಜನೆ:

ಈ ಕುರಿತು ಮಾತನಾಡಿದ ಆನೇಕಲ್ ಡಿವೈಎಸ್ಪಿ ಮಲ್ಲೇಶ್, ನಿನ್ನೆ ರಾತ್ರಿ ಖಾಸಗಿ ರೆಸಾರ್ಟ್​ನಲ್ಲಿ ರೇವ್ ಪಾರ್ಟಿ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತು. ದಾಳಿ ಮಾಡಿದ ವೇಳೆ 15 ಜನರನ್ನ ಸ್ಥಳದಲ್ಲೇ ಬಂಧಿಸಿದ್ದೆವು. ರಾತ್ರಿ ವೇಳೆ ಕತ್ತಲಲ್ಲಿ ಕೆಲವರು ಓಡಿಹೋಗಿ ತಪ್ಪಿಸಿಕೊಂಡಿದ್ದರು. ಆಶಿಕ್ ಗೌಡ ಮತ್ತು ಪ್ರವಣ್ ಇಬ್ಬರೂ ಸೇರಿ ಈ ಪಾರ್ಟಿ ಆಯೋಜನೆ ಮಾಡಿದ್ದರು. ₹1200 ರೂ. ಎಂಟ್ರಿ ಫೀಸ್ ಇಟ್ಟಿದ್ದರು. ಹೈ ಆ್ಯಪ್ ಮೂಲಕ ರಿಜಿಸ್ಟರ್ ಮಾಡಿದವರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಹೇಳಿದ್ದಾರೆ.

ಎಲ್ಲರಿಗೂ ಡ್ರಗ್ ಟೆಸ್ಟ್:

ಗಾಂಜಾ, ಅಫೀಮು ರೆಸಾರ್ಟ್​ನಲ್ಲಿ ಸಿಕ್ಕಿಲ್ಲ. ಆದರೆ ಎಲ್ಲರಿಗೂ ಡ್ರಗ್ ಟೆಸ್ಟ್ ಮಾಡಲಾಗುತ್ತೆ. ಇಲ್ಲಿಯವರೆಗೆ 37 ಮಂದಿಯನ್ನ ಅರೆಸ್ಟ್ ಮಾಡಿದ್ದೇವೆ. ಇವರಲ್ಲಿ ಐವರು ಹುಡುಗಿಯರು, ನಾಲ್ವರು ಡಿಜೆಗಳು ಇದ್ದಾರೆ. ಅಶುತೋಶ್ ಎಂಬಾತ ಹೈ ಆ್ಯಪ್ ಮೂಲಕ ಇಂತಹ ಪಾರ್ಟಿಗಳನ್ನು ಆಯೋಜನೆ ಮಾಡುತ್ತಾನೆ. ಅರೆಸ್ಟ್ ಆದವರಲ್ಲಿ ಸಾಫ್ಟ್​ವೇರ್ ಎಂಜಿನಿಯರ್​ಗಳು, ಎಂಬಿಎ , ಡಿಗ್ರಿ ವಿದ್ಯಾರ್ಥಿಗಳಿದ್ದಾರೆ ಎಂದಿದ್ದಾರೆ.

ನಗರದ ನಾನಾ ಭಾಗಗಳಿಂದ ಪಾರ್ಟಿ ಮಾಡಲು ಯುವಕ-ಯುವತಿಯರು ಇಲ್ಲಿಗೆ ಬಂದಿದ್ದಾರೆ. ಕೇರಳ ಹಾಗೂ ಬೆಂಗಳೂರು ಸೇರಿ ನಾನಾ ಕಡೆಯವರಿದ್ದಾರೆ. ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಾಗಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಜೆಡಿಎಸ್ ಮುಖಂಡನ ರೆಸಾರ್ಟ್​ನಲ್ಲಿ ನಡೆದ ಪಾರ್ಟಿ:

ಹಿಮಾಚಲ ಪ್ರದೇಶ ಮೂಲದ ಅಶುತೋಶ್ ಎಂಬಾತ ಈ ಪಾರ್ಟಿ ಆಯೋಜನೆ ಮಾಡಿದ್ದ. ಆನ್​ಲೈನ್​ ಆ್ಯಪ್​ ಮೂಲಕ ಬುಕ್​ ಮಾಡಿಕೊಂಡು ಈ ಪಾರ್ಟಿಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿತ್ತು. ಯಾರಿಗೂ ಸುಳಿವು ಸಿಗದಂತೆ ಬಿದಿರು ಪೊದೆಗಳಿರುವ ಪ್ರದೇಶದಲ್ಲಿ ರೇವ್​ ಪಾರ್ಟಿ ಆಯೋಜನೆಗೊಂಡಿತ್ತು. ಪೊಲೀಸ್​​ ದಾಳಿ ವೇಳೆ ಯುವಕ-ಯುವತಿಯರು ಡಿಜೆ ಹಾಕಿ ಕುಣಿದು ಕುಪ್ಪಳಿಸುತ್ತಿದ್ದರು. ಈ ರೆಸಾರ್ಟ್ ತಮ್ಮನಾಯಕನಹಳ್ಳಿ ಜೆಡಿಎಸ್ ಮುಖಂಡ ಶ್ರೀನಿವಾಸ್ ಮಾಲೀಕತ್ವದ್ದಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಆನೇಕಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 19, 2021, 3:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.