ETV Bharat / state

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಅನಂತ್ ಕುಮಾರ್ ಪಾತ್ರ ದೊಡ್ಡದು.. ಸಿಎಂ ಯಡಿಯೂರಪ್ಪ

ಜಯನಗರದಲ್ಲಿ ಆಯೋಜಿಸಲಾಗಿದ್ದ, ದಿವಂಗತ ಅನಂತ್ ಕುಮಾರ್ ಅವರ 60 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಕಟ್ಟಲು ಅನಂತ್​ಕುಮಾರ್​​ ಕೊಟ್ಟ ಸಮಯ, ಕೆಲಸ ಮಾಡಿದ ರೀತಿ ಅವಿಸ್ಮರಣೀಯ. ಪಕ್ಷ ಕಟ್ಟಿದ ಧೀಮಂತ ನಾಯಕ ಅವರು ಎಂದರು.

ಅನಂತ್ ಕುಮಾರ್ ಅವರ 60ನೇ ಜನ್ಮ ದಿನಾಚರಣೆ ಕಾರ್ಯಕ್ರಮ
author img

By

Published : Sep 22, 2019, 10:21 PM IST

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅನಂತ್ ಕುಮಾರ್ ಪಾತ್ರ ಹಿರಿದು ಎಂದು ಸಿಎಂ ಯಡಿಯೂರಪ್ಪ ಅನಂತ್ ಕುಮಾರ್ ಅವರ 60ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದ್ರು.

ಜಯನಗರದಲ್ಲಿ ಆಯೋಜಿಸಲಾಗಿದ್ದ, ದಿವಂಗತ ಅನಂತ್ ಕುಮಾರ್ ಅವರ 60ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಕಟ್ಟಲು ಅವರು ಕೊಟ್ಟ ಸಮಯ, ಕೆಲಸ ಮಾಡಿದ ರೀತಿ ಅವಿಸ್ಮರಣೀಯ. ಪಕ್ಷ ಕಟ್ಟಿದ ಧೀಮಂತ ನಾಯಕ ಅವರು. ಅನಂತ್ ಕುಮಾರ್ ಇನ್ನೂ ಬಹಳ ವರ್ಷ ಬದುಕಬೇಕಿತ್ತು. ಕೇಂದ್ರದಲ್ಲಿ ಬಹಳ ವರ್ಷ ಸಚಿವರಾಗಿ ಇದ್ದವರು. ನನಗೆ ಐದು‌ ನಿಮಿಷದಲ್ಲಿ ಅದ್ಭುತವಾಗಿ ಭಾಷಣ ತಯಾರಿಸಿಕೊಡ್ತಿದ್ದರು. ಅನಂತ್‌ಕುಮಾರ್ ನೆನಪಿನ ಶಕ್ತಿಗೆ ಸರಿ ಸಾಟಿ ಇಲ್ಲ. ಬೆಂಗಳೂರಿನ ಅಭಿವೃದ್ಧಿಯ ಕನಸು ಕಂಡವರು ಎಂದು ಸ್ಮರಿಸಿದರು.

ಅನಂತ್ ಕುಮಾರ್ ಅವರ 60ನೇ ಜನ್ಮ ದಿನಾಚರಣೆ ಕಾರ್ಯಕ್ರಮ

ಅನಂತ್ ಕುಮಾರ್ ಹಿಂದಿ ಜ್ಞಾನ ಅದ್ಭುತ. ದೆಹಲಿಯಲ್ಲಿ ತಮ್ಮ ಮನೆಯಲ್ಲಿ ಅನಂತ್ ಕುಮಾರ್ ಒಬ್ಬರೇ ಇದ್ದಿದ್ದು ನಾನು ಎಂದೂ ನೋಡಿಲ್ಲ. ಸದಾ ಯಾರಾದ್ರೂ ನಾಯಕರು, ಅಧಿಕಾರಿಗಳು ಅವರ ಸುತ್ತ ಇರುತ್ತಿದ್ದರು. ಅವರ ಅನುಪಸ್ಥಿತಿ ಕೇಂದ್ರ ಮತ್ತು ರಾಜ್ಯದಲ್ಲಿ ಎದ್ದು ಕಾಣುತ್ತಿದೆ. ಮುಂದಿನ ಹೊಸ ಪೀಳಿಗೆಗೆ ಅನಂತ್ ಕುಮಾರ್ ಪ್ರತಿಷ್ಠಾನ ದಾರಿ ದೀಪ ಆಗಲಿದೆ.

ಅನಂತ್ ಕುಮಾರ್ ಪ್ರತಿಷ್ಠಾನಕ್ಕೆ ಜೆ.ಪಿ.ನಡ್ಡಾ ಚಾಲನೆ:

ಇದೇ ವೇಳೆ‌ ಅನಂತ್ ಕುಮಾರ್ ಪ್ರತಿಷ್ಠಾನಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಿದರು. ಬಳಿಕ ಮಾತನಾಡಿದ ಜೆ ಪಿ ನಡ್ಡಾ, ಅನಂತ್ ಕುಮಾರ್ ನನಗಿಂತ ಹಿರಿಯರು. ಆದರೆ, ಅವರು ನನ್ನ ಜತೆ ಹಿರಿಯ ಅಂತಾ ತೋರಿಸದೇ ಗೆಳೆಯನ ಹಾಗೆ ಇದ್ದರು. ಪಕ್ಷ ಸಂಘಟನೆ, ಸಮಾಜ‌ ಪರಿವರ್ತನೆ ವಿಚಾರದಲ್ಲಿ ಅವರು ಎಲ್ಲರಿಗೂ ಪ್ರೇರಣೆ. ಅವರ ಜೊತೆ ಕೆಲಸ ಮಾಡುವ ಸೌಭಾಗ್ಯ ನಮಗೆ ಸಿಕ್ತು. ನಾನು ಅವರು ವಿದ್ಯಾರ್ಥಿ‌ ಪರಿಷತ್​ನಿಂದಲೂ ಪರಿಚಯಸ್ಥರು. 2010 ರಿಂದ ಕೇಂದ್ರ ಸಚಿವರಾಗಿ ಅವರ ಜೊತೆ ಕೆಲಸ ಮಾಡೋ ಸೌಭಾಗ್ಯ ಸಿಕ್ತು ಎಂದು ಸ್ಮರಿಸಿದರು.

ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಸದಾನಂದ ಗೌಡ, ಬೆಂಗಳೂರಿನಲ್ಲಿ ಸಿಪೆಟ್ ಸಂಸ್ಥೆ‌ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಾಣವಾಗುತ್ತಿದೆ. ಅದಕ್ಕೆ ದಿವಂಗತ ಅನಂತ್ ಕುಮಾರ್ ಹೆಸರಿಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

Intro:Body:KN_BNG_03_ANANTHKUMAR_CM_SCRIPT_7201951

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಅನಂತ್ ಕುಮಾರ್ ಪಾತ್ರ ಹಿರಿದು: ಸಿಎಂ

ಬೆಂಗಳೂರು: ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಅನಂತ್ ಕುಮಾರ್ ಪಾತ್ರ ಹಿರಿದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಜಯನಗರದಲ್ಲಿ ಆಯೋಜಿಸಲಾಗಿದ್ದ, ದಿವಂಗತ ಅನಂತ್ ಕುಮಾರ್ ಅವರ 60 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಕಟ್ಟಲು ಅವರು ಕೊಟ್ಟ ಸಮಯ, ಕೆಲಸ ಮಾಡಿದ ರೀತಿ ಅವಿಸ್ಮರಣೀಯ. ಪಕ್ಷ ಕಟ್ಟಿದ ಧೀಮಂತ ನಾಯಕ ಅವರು. ಅನಂತ್ ಕುಮಾರ್ ಇನ್ನೂ ಬಹಳ ವರ್ಷ ಬದುಕಬೇಕಿತ್ತು. ಕೇಂದ್ರದಲ್ಲಿ ಬಹಳ ವರ್ಷ ಸಚಿವರಾಗಿ ಇದ್ದವರು. ನನಗೆ ಐದು‌ ನಿಮಿಷದಲ್ಲಿ ಅದ್ಭುತವಾಗಿ ಭಾಷಣ ತಯಾರಿಸಿಕೊಡ್ತಿದ್ದರು. ಅನಂತ್‌ಕುಮಾರ್ ನೆನಪಿನ ಶಕ್ತಿಗೆ ಸರಿ ಸಾಟಿ ಇಲ್ಲ. ಬೆಂಗಳೂರಿನ ಅಭಿವೃದ್ಧಿಯ ಕನಸು ಕಂಡವರು, ಸಾಕಾರ ಮಾಡಿದವರು ಎಂದು ಸ್ಮರಿಸಿದರು.

ಅನಂತ್ ಕುಮಾರ್ ಹಿಂದಿ ಜ್ಞಾನ ಅದ್ಭುತ. ದೆಹಲಿಯಲ್ಲಿ ತಮ್ಮ ಮನೆಯಲ್ಲಿ ಅನಂತ್ ಕುಮಾರ್ ಒಬ್ಬರೇ ಇದ್ದಿದ್ದು ನಾನು ಎಂದೂ ನೋಡಿಲ್ಲ. ಸದಾ ಯಾರಾದ್ರೂ ನಾಯಕರು, ಅಧಿಕಾರಿಗಳು ಅವರ ಸುತ್ತ ಇರುತ್ತಿದ್ದರು. ಅವರ ಅನುಪಸ್ಥಿತಿ ಕೇಂದ್ರ ಮತ್ತು ರಾಜ್ಯದಲ್ಲಿ ಎದ್ದು ಕಾಣುತ್ತಿದೆ. ಮುಂದಿನ ಹೊಸ ಪೀಳಿಗೆಗೆ ಅನಂತ್ ಕುಮಾರ್ ಪ್ರತಿಷ್ಠಾನ ದಾರಿ ದೀಪ ಆಗಲಿದೆ. ಅನಂತ್ ಕುಮಾರ್‌ ನೆನಪು ಸದಾ ಉಳಿಯುವಂತಾಗಬೇಕು. ಇದಕ್ಕೆ ಏನು ಸಹಕಾರ ಬೇಕಾದರೂ ನಾನು ಮಾಡಲು ಸಿದ್ಧ ಎಂದು ಒಂದು ಕ್ಷಣ ಅನಂತ್ ಕುಮಾರ್ ಸ್ಮರಿಸಿಕೊಂಡು ಗದ್ಗದಿತರಾದರು.

ಅನಂತ್ ಕುಮಾರ್ ಪ್ರತಿಷ್ಠಾನಕ್ಕೆ ಜೆ.ಪಿ.ನಡ್ಡಾ ಚಾಲನೆ:

ಇದೇ ವೇಳೆ‌ ಅನಂತ್ ಕುಮಾರ್ ಪ್ರತಿಷ್ಠಾನಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಅನಂತ್ ಕುಮಾರ್ ನನಗಿಂತ ಹಿರಿಯರು. ಆದರೆ ಅವರು ನನ್ನ ಜತೆ ಹಿರಿಯ ಅಂತ ತೋರಿಸದೇ ಗೆಳೆಯನ ಹಾಗೆ ಇದ್ದರು. ಪಕ್ಷ ಸಂಘಟನೆ, ಸಮಾಜ‌ ಪರಿವರ್ತನೆ ವಿಚಾರದಲ್ಲಿ ಅವರು ಎಲ್ಲರಿಗೂ ಪ್ರೇರಣೆ. ಅವರ ಜೊತೆ ಕೆಲಸ ಮಾಡುವ ಸೌಭಾಗ್ಯ‌ ನಮಗೆ ಸಿಕ್ತು. ನಾನು ಅವರು ವಿದ್ಯಾರ್ಥಿ‌ ಪರಿಷತ್ ನಿಂದಲೂ ಪರಿಚಯಸ್ಥರು. 2010 ರಿಂದ ಕೇಂದ್ರ ಸಚಿವರಾಗಿ ಅವರ ಜೊತೆ ಕೆಲಸ ಮಾಡೋ ಸೌಭಾಗ್ಯ ಸಿಕ್ತು ಎಂದು ಸ್ಮರಿಸಿದರು.

ಅನಂತ್ ಕುಮಾರ್ ಪರಿಶ್ರಮಿ, ಕರುಣಾಮಯಿ, ಸಹೃದಯಿ, ಪ್ರಾಮಾಣಿಕ, ಸಾಟಿ ಇಲ್ಲದ ಸಂಘಟಕ. ಸರ್ಕಾರಗಳಲ್ಲೂ, ಪಕ್ಷದಲ್ಲೂ ಅವರ ಸೇವೆ, ತ್ಯಾಗ ಅಪಾರ. ಅನಂತ್ ಕುಮಾರ್ ಬಹಳ ಗಂಭೀರ ಕಾಯಿಲೆಗೆ ತುತ್ತಾಗಿ ನಮ್ಮನ್ನು ಇಷ್ಟು ಬೇಗ ಬಿಟ್ಟು ಹೋಗ್ತಾರೆ ಅಂದು ಕೊಂಡಿರಲಿಲ್ಲ. ಇದು ನನಗೆ ವೈಕ್ತಿಕವಾಗಿ ಬಹಳ ದುಃಖ ಉಂಟು ಮಾಡಿದೆ. ಅವರಿಗೆ ಅಷ್ಟು ಗಂಭೀರ ಕಾಯಿಲೆ ಇದ್ದರೂ ಅವರ ಮುಖದ ಚಹರೆಯಲ್ಲಿ ಅದು ಕಾಣುತ್ತಲೇ ಇರಲಿಲ್ಲ. ಅವರನ್ನು ಬಹಳ ಬಾರಿ ನಾನು ಪ್ರಶ್ನೆ ಮಾಡಿದರೂ ಅವರು ಐ ಆಮ್ ಫೈನ್ ಆಂಡ್ ಫಿಟ್ ಅಂತಿದ್ದರು ಎಂದು ಸ್ಮರಿಸಿದರು.

ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಸದಾನಂದ ಗೌಡ, ಬೆಂಗಳೂರಿನಲ್ಲಿ ಸಿಪೆಟ್ ಸಂಸ್ಥೆ‌ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಾಣವಾಗುತ್ತಿದೆ.ಅದಕ್ಕೆ ದಿವಂಗತ ಅನಂತ್ ಕುಮಾರ್ ಹೆಸರಿಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಪಿ. ಮುರಳೀಧರ ರಾವ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಜಗದೀಶ್ ಶೆಟ್ಟರ್, ಸಚಿವ ವಿ.ಸೋಮಣ್ಣ, ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್, ಕೇಂದ್ರದ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ ಭಾಗಿಯಾಗಿದ್ದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.