ETV Bharat / state

ಯುವಕನ ಮೇಲೆ ಪೊಲೀಸರಿಂದ ಹಲ್ಲೆ, ದೌರ್ಜನ್ಯ ಆರೋಪ: ಡಿಎಸ್​ಎಸ್​ ಪ್ರತಿಭಟನೆ

author img

By

Published : Aug 14, 2019, 9:23 AM IST

ವರ್ತೂರು ನಿವಾಸಿ ಚರಣ್ ಎಂಬ ಅಮಾಯಕ ಯುವಕನನ್ನು ಕಳ್ಳತನ ಆರೋಪದಡಿ ಕಾಡುಗುಡಿ ಪೊಲೀಸರು ರಾತ್ರೋರಾತ್ರಿ ವಿಚಾರಣೆಗೆ ಒಳಪಡಿಸಿದ್ದರು. ಅಲ್ಲದೆ 48 ಗಂಟೆಗಳ ಕಾಲ ಅಕ್ರಮವಾಗಿ ಬಂಧನಕ್ಕೊಳಪಡಿಸಿ ದೈಹಿಕ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಾಡೊಗೋಡಿ ಪೊಲೀಸರ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಬೆಂಗಳೂರು: ಯಾರೋ ಮಾಡಿರುವ ಮೊಬೈಲ್ ಕಳ್ಳತನಕ್ಕೆ ವರ್ತೂರು ನಿವಾಸಿ ಚರಣ್ ಎಂಬ ಯುವಕನನ್ನು ಕಳ್ಳತನ ಆರೋಪದಡಿ ಕಾಡುಗುಡಿ ಪೊಲೀಸರು ರಾತ್ರೋರಾತ್ರಿ ವಿಚಾರಣೆಗೆ ಒಳಪಡಿಸಿ 48 ಗಂಟೆಗಳ ಕಾಲ ಅಕ್ರಮವಾಗಿ ಬಂಧನಕ್ಕೊಳಪಡಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಕಾಡೊಗೋಡಿ ಪೊಲೀಸರ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಯುವಕನ ಮೇಲೆ ದೈಹಿಕ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ವೈಟ್ ಫೀಲ್ಡ್ ನಲ್ಲಿ ಪ್ರತಿಭಟನೆ ನಡೆಸಿದ್ರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತಾಧಿಕಾರಿಗಳು ಪ್ರಕರಣವನ್ನು ತನಿಖೆ ನಡೆಸಿ ಯುವಕನ ಮೇಲೆ ಅಮಾನವೀಯವಾಗಿ ದೌರ್ಜನ್ಯ ಎಸಗಿರುವ ಪೊಲೀಸರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕಾಗಮಿಸಿದ ವೈಟ್ ಫೀಲ್ಡ್ ಉಪವಿಭಾಗದ ಡಿಸಿಪಿ ಅನುಚೇತ್ ಅವರು ಮನವಿ ಸ್ವೀಕರಿಸಿ ಸೂಕ್ತ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು.

Intro:ಕಾಡುಗುಡಿ :ಮಹದೇವಪುರ.

ಅಮಾಯಕ ಯುವಕನೊಬ್ಬನ ಮೇಲೆ ಪೊಲೀಸರಿಂದ ಹಲ್ಲೆ ,ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ.

ಯಾರೋ ಮಾಡಿರುವ ಕಳ್ಳತನಕ್ಕೆ ಅಮಾಯಕ ವರ್ತೂರು ನಿವಾಸಿ ಚರಣ್ ಎಂಬ ಯುವಕನನ್ನು ಮೊಬೈಲ್ ಕಳ್ಳತನ ಆರೋಪದ ನೆಪದಲ್ಲಿ ಕಾಡುಗುಡಿ ಪೊಲೀಸರು ರಾತ್ರೋರಾತ್ರಿ ವಿಚಾರಣೆಗೆ ಒಳಪಡಿಸಿ 48 ಗಂಟೆಗಳ ಕಾಲ ಅಕ್ರಮವಾಗಿ ಬಂದನಕ್ಕೋಳಪಡಿಸಿ ದೈಹಿಕ ಮತ್ತು ಮಾನಸಿಕವಾಗಿ ಚಿತ್ರ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಅಮಾಯಕ ಯುವಕನೊಬ್ಬನ ಮೇಲೆ ಪೊಲೀಸರಿಂದ ಹಲ್ಲೆ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ ಮಾಡಿದರು.

ಯುವಕನೊಬ್ಬನ ಮೇಲೆ ಹಲ್ಲೆಮಾಡಿ ಅಕ್ರಮವಾಗಿ ಬಂಧನಗೊಳಪಡಿಸಿದ ಕಾಡುಗುಡಿ ಪೊಲೀಸರ  ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರ ವೈಟ್ ಫೀಲ್ಡ್ ನಲ್ಲಿ ಪ್ರತಿಭಟನೆ ನಡೆಸಿದರು.

ನಿಷ್ಠಾವಂತ ಉನ್ನತಾಧಿಕಾರಿಗಳು ಪ್ರಕರಣ ವನ್ನು ತನಿಖೆ ನಡೆಸಿ ಅಮಾಯಕ ಯುವಕನ ಮೇಲೆ ಅಮಾನವೀಯವಾಗಿ ದೌರ್ಜನ್ಯ ಎಸಗಿರುವ ಪೋಲಿಸರನ್ನು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವೈಟ್ ಫೀಲ್ಡ್ ಉಪವಿಭಾಗದ ಡಿಸಿಪಿ ಅನುಚೇತ್ ಮನವಿ ಸ್ವೀಕರಿಸಿ ಸೂಕ್ತ ತನಿಖೆ ನಡೆಸಿ ತಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Body:ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ ಆರ್ .ವೆಂಕಟೇಶ್ ವರ್ತೂರು ನಿವಾಸಿ ಚರಣ್ ಎಂಬ ಯುವಕನನ್ನು ಮೊಬೈಲ್ ಕಳ್ಳತನ ಆರೋಪದ ನೆಪದಲ್ಲಿ ರಾತ್ರೋರಾತ್ರಿ
ವಿಚಾರಣೆಗೆ ಒಳಪಡಿಸಿದ ಕಾಡುಗುಡಿ ಪೋಲಿಸರು ೪೮ ಗಂಟೆಗಳ ಕಾಲ ಅಕ್ರಮವಾಗಿ ಬಂದನಕ್ಕೋಳಪಡಿಸಿ ದೈಹಿಕ ಮತ್ತು ಮಾನಸಿಕವಾಗಿ ಚಿತ್ರ ಹಿಂಸೆ ನೀಡಿದ್ದಾರೆ. ಚಿತ್ರಹಿಂಸೆ ನೀಡುವ ಸಂದರ್ಭದಲ್ಲಿ ಅಮಾನುಷವಾಗಿ ಹಲ್ಲೆಮಾಡಿದ್ದು ಚರಣ್ ತಲೆಗೆ ಮತ್ತು ಕಾಲಿನ ತೊಡೆ ಭಾಗದಲ್ಲಿ ತೀವ್ರವಾದ ಗಾಯವಾಗಿದೆ,
ಗಂಭೀರತೆಯನ್ನು ಗಮನಿಸಿದ ಪೋಲಿಸರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರವೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ.ಚರಣ್ ಬಗ್ಗೆ ವಿಚಾರಿಸಲು ತೆರಳಿದ ಸಹೋದರ ವಿನೋದನನ್ನು ಸಹ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.Conclusion:ಆರೋಪ ಸಾಭಿತಾಗದ ಹಿನ್ನೆಲೆ ೨ ದಿನದ ನಂತರ ಖಾಲಿ ಹಾಳೆಯಲ್ಲಿ ಸಹಿ ಪಡೆದು ಬಿಟ್ಟು ಕಳುಹಿಸಿದ್ದಾರೆ. ಪೋಲಿಸರು ಅಮಾನುಷವಾಗಿ ನಡೆದುಕೊಂಡಿದ್ದರಿಂದ ಯುವಕ ಮಾನಸಿಕ ದೈಹಿಕ ವಾಗಿ ಜಾರ್ಜರಿತವಾಗಿದ್ದಾನೆಂದು ಹೇಳಿದರು. ಪೋಲಿಸರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಜನಸಾಮಾನ್ಯರನ್ನು ಸುಲಿಯುತ್ತಾ ಬಡಪಾಯಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆಂದು ದೂರಿದರು.

ಬೈಟ್: ಎಂ ಆರ್ .ವೆಂಕಟೇಶ್ :
ಡಿ ಎಸ್‌ ಎಸ್ ರಾಜ್ಯ ಸಂಘಟನಾ ಸಂಚಾಲಕ.

ಬೈಟ್: ಚರಣ್.ಹಲ್ಲೆಗೆ ಒಳಗಾದ ಯುವಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.