ETV Bharat / state

ವಿಧಾನಸಭೆಯಲ್ಲಿ ಬ್ರಾಹ್ಮಣ, ಲಿಂಗಾಯತ, ದಲಿತರ ಇತಿಹಾಸದ ಕುರಿತು ಸ್ವಾರಸ್ಯಕರ ಚರ್ಚೆ - ಯಂತ್ರೋಪಕರಣಗಳು ಮತ್ತು ಟ್ರ್ಯಾಕ್ಟರ್ ಡೀಸೆಲ್ ಖರೀದಿಗೆ ಸಬ್ಸಿಡಿ

ಕೃಷಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಉತ್ತರ ನೀಡಿದರು. ಈ ವೇಳೆ ಅವರು ಸರ್ಕಾರ ಯಂತ್ರೋಪಕರಣಗಳು ಮತ್ತು ಟ್ರ್ಯಾಕ್ಟರ್ ಡೀಸೆಲ್ ಖರೀದಿಗೆ ಸಬ್ಸಿಡಿ ನೀಡುತ್ತದೆ ಎಂದರು. ಅಷ್ಟೇ ಅಲ್ಲದೇ ಈ ಸಮಯದಲ್ಲಿ ಬ್ರಾಹ್ಮಣ, ಲಿಂಗಾಯತ, ದಲಿತರ ಇತಿಹಾಸ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು.

ಕೃಷಿ ಸಚಿವ ಬಿ.ಸಿ. ಪಾಟೀಲ್
ಕೃಷಿ ಸಚಿವ ಬಿ.ಸಿ. ಪಾಟೀಲ್
author img

By

Published : Mar 29, 2022, 3:53 PM IST

Updated : Mar 29, 2022, 4:29 PM IST

ಬೆಂಗಳೂರು: ಬ್ರಾಹ್ಮಣ, ಲಿಂಗಾಯತ ಹಾಗೂ ದಲಿತರ ಇತಿಹಾಸ ಕುರಿತಂತೆ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಕೃಷಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಉತ್ತರ ನೀಡಿದರು. ಈ ವೇಳೆ ಕುತೂಹಲಕಾರಿ ಸಂಗತಿ ಮುನ್ನೆಲೆಗೆ ಬಂತು.

ಸಚಿವರು ಮಾತನಾಡುತ್ತಾ, ಸರ್ಕಾರ ಯಂತ್ರೋಪಕರಣಗಳು, ಟ್ರ್ಯಾಕ್ಟರ್, ಡೀಸೆಲ್ ಖರೀದಿಗೆ ಸಬ್ಸಿಡಿ ನೀಡುತ್ತದೆ. ಆದರೆ ನಾಡಗೌಡ ಅವರಂತಹ ಜಮೀನುದಾರರು ಈ ಸಬ್ಸಿಡಿ ಹಣ ದುರುಪಯೋಗವಾಗುತ್ತದೆ, ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎನ್ನುತ್ತಾರೆ. ರೈತರಿಗೆ ನೀಡುವ ಒಂದೊಂದು ರೂಪಾಯಿ ಕೂಡ ಅತ್ಯಂತ ಅಮೂಲ್ಯ. ಲಕ್ಷಾಂತರ ರೈತರು ಇದರ ಉಪಯೋಗ ಪಡೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಮತ್ತು ರಾಜ್ಯದಿಂದ ಯಂತ್ರೋಪಕರಣಗಳು, ಟ್ರಾಕ್ಟರ್, ಡೀಸೆಲ್ ಮೇಲಿನ ಖರೀದಿಗೆ ಸಬ್ಸಿಡಿ ಕೊಡುತ್ತೇವೆ. ಆದರೆ ನಾಡಗೌಡರಂತಹ ಆಸ್ತಿವಂತರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಾರೆ ಎಂದರು.

ಇದಕ್ಕೆ ಕ್ರಿಯಾಲೋಪ ಎತ್ತಿದ ಮಾಜಿ ಸ್ಪೀಕರ್ ರಮೇಶ್‍ ಕುಮಾರ್, ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ಬಂದಾಗಿನಿಂದ ಯಾರೂ ಹೆಚ್ಚು ಜಮೀನು ಹೊಂದುವಂತಿಲ್ಲ. ನೀವು ಹೇಳುವ ಪ್ರಕಾರ ಅವರು ಜಮೀನು ಇಟ್ಟುಕೊಂಡರೆ ಕಾನೂನು ಪ್ರಕಾರ ಅವರಿಗೆ ಶಿಕ್ಷೆಯಾಗುತ್ತದೆ. ಟ್ರ್ಯಾಕ್ಟರ್, ಯಂತ್ರೋಪಕರಣ ಖರೀದಿಗೆ ಸಬ್ಸಿಡಿ ಹಣ ನೀಡುವುದು ಒಳ್ಳೆಯದೇ. ವಾಸ್ತವವಾಗಿ ಇದು ರೈತರಿಗೆ ಸೇರುತ್ತದೆಯೇ ಎಂಬುದು ನಾವು ಅವಲೋಕನ ಮಾಡಬೇಕು. ನಿಮ್ಮ ಅಧಿಕಾರಿಗಳು ಯಂತ್ರೋಪಕರಣಗಳನ್ನು ರತ್ನಗಿರಿ ಟ್ರೇಡರ್ಸ್ ಬಿಟ್ಟು ಆಚೆ ಎಲ್ಲಿ ಖರೀದಿಸಿದ್ದಾರೆ? ದಯವಿಟ್ಟು ಸಚಿವರು ನೋಡಬೇಕು ಎಂದು ಹೇಳಿದರು.

'ಗೌಡರಾದವರೆಲ್ಲರೂ ಶ್ರೀಮಂತರಲ್ಲ': ಆಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನಾಡಗೌಡರು ಹೆಸರಿಗೆ ಗೌಡರಾಗಿರಬಹುದು. ಗೌಡರಾದವರೆಲ್ಲರೂ ಶ್ರೀಮಂತರಾಗಿರುವುದಿಲ್ಲ. ಇಲ್ಲವೇ ಜಮೀನು ಹೊಂದಿರುವುದಿಲ್ಲ. ನನ್ನ ಸ್ನೇಹಿತ ಸಂಪತ್ ಅಯ್ಯಂಗಾರ್ ಎಂಬುವರು ಇದ್ದರು. ಹೆಸರಲ್ಲಿ ಮಾತ್ರ ಸಂಪತ್ತು ಇರುತ್ತಿತ್ತು. ಅವರು ಕೂಡ ಭಾನುವಾರ, ಸೋಮವಾರದ ವಕೀಲರಾಗಿದ್ದರು ಎಂದರು.

ಮತ್ತೆ ಮಾತು ಮುಂದುವರೆಸಿದ ರಮೇಶ್ ಕುಮಾರ್, ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಅಂದು ಮಾಜಿ ಸಚಿವ ಬಿ.ವಿ.ರಾಚಯ್ಯ ಅವರೊಂದಿಗೆ ಚರ್ಚೆ ನಡೆಸುತ್ತಿದ್ದರು. ಆಗ ಜೆ.ಎಚ್.ಪಟೇಲ್ ಅವರು, ಬ್ರಾಹ್ಮಣರಿಗೆ 5 ಸಾವಿರ ವರ್ಷಗಳ ಇತಿಹಾಸವಿದೆ. ಲಿಂಗಾಯತರಿಗೆ 800 ವರ್ಷಗಳ ಇತಿಹಾಸವಿದೆ. ದಲಿತರಿಗೆ ಸಂವಿಧಾನ ಬಂದ ಮೇಲೆ ಇತಿಹಾಸ ಬಂದಿದೆ. ಬ್ರಾಹ್ಮಣರು ಯಾವಾಗಲೂ ಒಂದಿಲ್ಲೊಂದು ಕಾರಣಕ್ಕಾಗಿ ಮೇಧಾವಿಗಳೇ ಎಂದರು ಎಂಬ ಮಾಹಿತಿ ಸದನದಲ್ಲಿ ಪ್ರಸ್ತಾಪ ಮಾಡಿದರು.

ಸಿದ್ದರಾಮಯ್ಯ ಕಾಲೆಳೆದ ಸಿಎಂ: ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ನಾಡಗೌಡರು ಮೊದಲು ಅವಿಭಜಿತ ಕುಟುಂಬದಲ್ಲಿದ್ದಾಗ ಹೆಚ್ಚು ಆಸ್ತಿ ಹೊಂದಿರಬಹುದೇನೋ, ಈಗ ವಿಭಜಿತರಾದ ಮೇಲೆ ಕಡಿಮೆ ಆಸ್ತಿ ಹೊಂದಿದ್ದಾರೆ. ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ಬಂದ ಮೇಲೆ ಯಾರೊಬ್ಬರೂ ಹೆಚ್ಚು ಆಸ್ತಿ ಹೊಂದುವಂತಿಲ್ಲ. ಒಂದು ವೇಳೆ ಯಾರಾದರೂ ಹೆಚ್ಚು ಆಸ್ತಿ ಹೊಂದಿದ್ದರೆ ಸಿದ್ದರಾಮಯ್ಯನವರಂತಹ ವಕೀಲರು ಸಲಹೆ ಕೊಟ್ಟಿರುತ್ತಾರೆ ಎಂದು ಸಿದ್ದರಾಮಯ್ಯ ಅವರ ಕಾಲೆಳೆದರು. ಇದಕ್ಕೆ ತಕ್ಷಣವೇ ಎದ್ದು ನಿಂತ ಸಿದ್ದರಾಮಯ್ಯ, ಯಾರೋ ವಕೀಲರು ಸಲಹೆ ಕೊಡಬಹುದು. ನನ್ನಂಥವರು ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಸರ್ಕಾರಿ ಭೂಮಿ ಒತ್ತುವರಿ, ಮರಳು ದಂಧೆ ಕೇಸ್: ಎಸ್ಐಟಿ ತನಿಖೆಗೆ ಸೂಚಿಸಿದ ರಾಜ್ಯ ಸರ್ಕಾರ

ಆಗ ಮಧ್ಯೆ ಪ್ರವೇಶಿಸಿದ ಸಚಿವ ಗೋವಿಂದ ಕಾರಜೋಳ ಅವರು, ಗೌಡ, ಸಂಪತ್ತು ಹೆಸರು ಇಟ್ಟುಕೊಂಡವರಲ್ಲ ಶ್ರೀಮಂತರಾಗಿರಲು ಸಾಧ್ಯವಿಲ್ಲ. ಈಗಲೂ ಅನೇಕ ಜನ ಹಲವಾರು ವರ್ಷಗಳಿಂದಲೂ ಉಪಕಸುಬು ನಂಬಿಕೊಂಡೇ ಜೀವನ ಮಾಡುತ್ತಿದ್ದಾರೆ. ಸಮಾಜದಲ್ಲಿ ಸಮಸಮಾಜ ನಿರ್ಮಾಣ ಮಾಡಲು ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಆದರೂ ಇದು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು. 12ನೇ ಶತಮಾನದಲ್ಲೇ ಬಸವಣ್ಣನವರು ಸಮಸಮಾಜ ನಿರ್ಮಿಸಲು ಮುಂದಾದರು. ಅನುಭವ ಮಂಟಪ ಸ್ಥಾಪಿಸಿದರು. ಆ ಮಂಟಪಕ್ಕೆ ಹಿಂದುಳಿದವರನ್ನು ಸಿಂಹಾಸನದ ಮೇಲೆ ಕೂರಿಸಿದ್ದರು ಎಂದು ಸ್ಮರಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಹಿಂದುಳಿದವರಿಗೆ ಸ್ಥಾನಮಾನ ನೀಡಲು ಮುಂದಾಗಿದ್ದಕ್ಕೆ ಅವರನ್ನು ಅಲ್ಲಿಂದ ಓಡಿಸುವ ಪ್ರಯತ್ನ ಮಾಡಿದರು. ಸಮಸಮಾಜ ನಿರ್ಮಾಣವಾಗಿದ್ದರೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಏಕೆ ಮತಾಂತರವಾಗುತ್ತಿದ್ದರು ಎಂದು ಪ್ರಶ್ನಿಸಿದರು. ಆಗ ಕಾರಜೋಳ, ಸಮಾಜದಲ್ಲಿ ಒಳ್ಳೆಯವರು, ಕೆಟ್ಟವರು ಇದ್ದೇ ಇರುತ್ತಾರೆ. ನಾವು ಸಮಾಜದ ಅಂಕು ಡೊಂಕು ತಿದ್ದಿ ವ್ಯವಸ್ಥೆಯನ್ನು ಬದಲಾಯಿಸಬೇಕು. ಎಲ್ಲವನ್ನೂ ಮೆಟ್ಟಿ ನಿಂತಾಗಲೇ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

Last Updated : Mar 29, 2022, 4:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.