ಬೆಂಗಳೂರು: ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಪ್ರಕರಣ ಸದ್ಯ ಹಲವು ಮಜಲುಗಳನ್ನ ಪಡೆಯುತ್ತಿದೆ. ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ 2016ರ ಶಿವಾಜಿನಗರದ ಕಾಮರಾಜ ರಸ್ತೆ ಬಳಿ ನಡೆದ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಕೂಡ ತಳಕು ಹಾಕಿಕೊಂಡಿದೆ.
ಪ್ರಕರಣದ ತನಿಖೆ ಇದೀಗ ಸಿಸಿಬಿಯ ಎಟಿಸಿ ಎಸಿಪಿ ವೇಣುಗೋಪಲ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಪ್ರಕರಣದ ಗಂಭೀರತೆ ಇನ್ನಷ್ಟು ಹೆಚ್ಚಾಗಿದೆ.
![An Inside Story of the Bengaluru riots](https://etvbharatimages.akamaized.net/etvbharat/prod-images/kn-bng-rudresh-murder-7204498_17082020152004_1708f_01351_669.jpg)
ರುದ್ರೇಶ್ ಕೊಲೆ ಪ್ರಕರಣದಲ್ಲಿ ಎಸ್ಡಿಪಿಐ ಪಾತ್ರ ಇದ್ದುದರಿಂದ ಮೊಹಮ್ಮದ್ ಸಾದಿಕ್, ಮೊಹಮ್ಮದ್ ಮುಜಿಬುಲ್ಲಾ, ವಾಸೀಮ್ ಅಹ್ಮದ್ ಹಾಗೂ ಇರ್ಮಾಮ್ ಪಾಷಾ ಎಂಬ ಪ್ರಮುಖ ಆರೋಪಿಗಳನ್ನ ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ಸಮೀಯುದ್ದೀನ್ ಎಂಬಾತನ ಹೆಸರು ಸಹ ತಳಕು ಹಾಕಿಕೊಂಡಿತ್ತು. ನಂತರ ಸಮೀಯುದ್ದೀನ್ ಜಾಮೀನು ಪಡೆದು ಹೊರಬಂದಿದ್ದ. ಆದರೆ, ಕೆಲ ಸಂಘಟನೆಗಳು ಹಮ್ಮಿಕೊಳ್ಳುತ್ತಿದ್ದ ಕಾರ್ಯಕ್ರಮದ ಸ್ಥಳಕ್ಕೆ ತೆರಳಿ ಹಲವರ ಮೇಲೆ ಹಲ್ಲೆ ಮಾಡಲು ಪ್ರಯತ್ನಪಟ್ಟಿರುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
![An Inside Story of the Bengaluru riots](https://etvbharatimages.akamaized.net/etvbharat/prod-images/kn-bng-rudresh-murder-7204498_17082020152004_1708f_01351_277.jpg)
ಮತ್ತೊಂದೆಡೆ ಸಮೀಯುದ್ದೀನ್ಗೆ ಬಾಂಬೆ ನಂಟು ಇರುವ ಗುಮಾನಿ ಸಹ ಇದೆ ಎನ್ನಲಾಗುತ್ತಿದೆ. ಬಾಂಬೆ ನಂಟು ಯಾಕೆ? ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಘಟನೆಗೆ ಕುಮ್ಮಕ್ಕು ನೀಡಿದವರು ಯಾರು? ಅನ್ನೋದರ ಬಗ್ಗೆ ತನಿಖೆ ಚುರುಕುಗೊಂಡಿದೆ.
![An Inside Story of the Bengaluru riots](https://etvbharatimages.akamaized.net/etvbharat/prod-images/kn-bng-rudresh-murder-7204498_17082020151958_1708f_01351_575.jpg)
ಎನ್ಐಎ ಎಂಟ್ರಿ ಕೊಡುವ ಸಾಧ್ಯತೆ:
ರುದ್ರೇಶ್ ಕೊಲೆ ಪ್ರಕರಣವನ್ನ ಎನ್ಐಎ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದು, ಪ್ರಮುಖ ಆರೋಪಿಗಳಿಗೆ(ಮೊಹಮ್ಮದ್ ಸಾದಿಕ್, ಮೊಹಮ್ಮದ್ ಮುಜಿಬುಲ್ಲಾ, ವಾಸೀಮ್ ಅಹ್ಮದ್ ಹಾಗೂ ಇರ್ಮಾಮ್ ಪಾಷಾ) ಜಾಮೀನು ಸಿಗದ ರೀತಿಯಲ್ಲಿ ಮೇಲ್ಮನವಿ ಅರ್ಜಿಯನ್ನ ಹೈಕೋರ್ಟ್ಗೆ ಹಾಕುತ್ತಲೇ ಇದೆ. ಸದ್ಯ ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಪ್ರಕರಣ ಕೂಡ ಗಂಭೀರತೆ ಪಡೆದಿದ್ದು, ಸಮೀಯುದ್ದೀನ್ ಕೈವಾಡ ಇರುವ ಮೇರೆಗೆ ಎಟಿಎಸ್ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಭಯೋತ್ಪಾದಕರ ಕೈವಾಡವಿದೆ ಎಂಬ ಮಾಹಿತಿ ಕೂಡ ಲಭಿಸಿದ್ದು, ಎನ್ಐಎ ಟೇಕ್ ಓವರ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.