ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಸದ್ಯ ಗಲಾಟೆ ವೇಳೆ ಪೊಲೀಸರ ಗುಂಡೇಟು ತಿಂದಿದ್ದ ಆರು ಮಂದಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದರು. ಸದ್ಯ ಓರ್ವನ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸದ್ಯ ಗುಂಡೇಟು ತಿಂದವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಆಸ್ಪತ್ರೆ ಸುತ್ತಾ ಖಾಕಿ ಕಣ್ಗಾವಲಿದೆ. ಮತ್ತೊಂದೆಡೆ ಮೃತಪಟ್ಟ ವ್ಯಕ್ತಿಯೋರ್ವನ ಪ್ಯಾಂಟ್ ಕಿಸೆಯಲ್ಲಿ ಗಾಂಜಾ ಪತ್ತೆಯಾಗಿದೆ. ಗಾಂಜಾ ಮತ್ತಿನಲ್ಲಿ ಕೃತ್ಯ ನಡೆಸಿ ಪೊಲೀಸರ ಗುಂಡಿಗೆ ಬಲಿಯಾಗಿರುವ ವಿಚಾರ ಬಯಲಾಗಿದೆ.
ಮತ್ತೊಂದೆಡೆ ಎಸ್ಡಿಪಿಐ ನಗರ ಜಿಲ್ಲಾ ಕಾರ್ಯದರ್ಶಿ ಮುಜಾಮಿಲ್ ಪಾಷಾ, ವಾಜಿದ್, ಹುಸೇನ್, ಮಹಮ್ಮದ್ ಅಹಮ್ಮದ್ ಪ್ರಮುಖ ಆರೋಪಿಗಳಾಗಿದ್ದು, ಸದ್ಯ ಪೊಲೀಸರು ಸಿಸಿಟಿವಿ, ವಿಡಿಯೋ ಅಧಾರದ ಮೇಲೆ ತನಿಖೆ ಮುಂದುವರೆಸಿದ್ದಾರೆ. ಈ ಗಲಭೆಗೆ ಮಾಸ್ಟರ್ ಮೈಂಡ್ ಮುಜಾಮಿಲ್ ಪಾಷ ಅನ್ನೋದು ಸದ್ಯ ತನಿಖೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ. ಈತ ಕೆ.ಜಿ.ಹಳ್ಳಿಯ ಸಗಾಯಪುರದ ನಿವಾಸಿಯಾಗಿದ್ದು, ಈತನ ಹಿನ್ನೆಲೆಯನ್ನ ಪೊಲೀಸರು ಕಲೆಹಾಕುತ್ತಿದ್ದಾರೆ.