ETV Bharat / state

ಬೆಂಗಳೂರಲ್ಲಿ ನಾಳೆ ಅಮಿತ್ ಶಾ ರೋಡ್ ಶೋ: ಎಲ್ಲೆಲ್ಲಿ? ಸಂಪೂರ್ಣ ವಿವರ..

ರಾಜ್ಯ ವಿಧಾನಸಭೆ ಚುನಾವಣೆಗೆ ಕೇವಲ 9 ದಿನ ಬಾಕಿ ಇದೆ. ಅಭ್ಯರ್ಥಿಗಳ ಪರವಾಗಿ ವಿವಿಧ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಅಬ್ಬರದ ಮತ ಪ್ರಚಾರ ನಡೆಸುತ್ತಿದ್ದಾರೆ.

union home minister amith shah
ಕೇಂದ್ರ ಗೃಹಸಚಿವ ಅಮಿತ್ ಶಾ
author img

By

Published : May 1, 2023, 9:29 AM IST

Updated : May 1, 2023, 1:33 PM IST

ಬೆಂಗಳೂರು: ಕಳೆದ ಎರಡು ದಿನ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ರೋಡ್ ಶೋ ಮೂಲಕ ಮತಬೇಟೆ ನಡೆಸಿದ ಬೆನ್ನಲ್ಲೇ ಉದ್ಯಾನನಗರಿ ಬೆಂಗಳೂರಿನ ಮೂರು ಕಡೆಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ಮಂಗಳವಾರ ಸಂಜೆ 4.30ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ಬಿಜೆಪಿ ಚುನಾವಣಾ ಚಾಣಕ್ಯ 4.50 ರಿಂದ 5.40 ರವರೆಗೆ ಮೊದಲನೇ ರೋಡ್ ಶೋ ನಡೆಸಲಿದ್ದಾರೆ. ಆಡುಗೋಡಿ ಸಿಗ್ನಲ್​ನಿಂದ ಮಡಿವಾಳದ ಟೋಟಲ್ ಮಾಲ್​ವರೆಗೂ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ. ಸಂಜೆ 5.50 ರಿಂದ 6.40 ರವರೆಗೆ ಈಸ್ಟ್ ಎಂಡ್ ಮುಖ್ಯ ರಸ್ತೆಯಿಂದ ಜಯನಗರದ ಶಾಲಿನಿ ಮೈದಾನದವರೆಗೆ ಎರಡನೇ ರೋಡ್ ಶೋ ನಡೆಸಲಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಡಿಕೆಶಿ ರೋಡ್ ಶೋ: ಅಭ್ಯರ್ಥಿಗಳ ಪರ ಮತಬೇಟೆ

ಬಿಟಿಎಂ ಲೇಔಟ್ ಹಾಗು ಜಯನಗರ ಕಾಂಗ್ರೆಸ್ ತೆಕ್ಕೆಯಲ್ಲಿದ್ದು ಈ ಬಾರಿ ಮತ ತಪ್ಪಬಾರದೆಂದು ಬಿಜೆಪಿ ಪಣ ತೊಟ್ಟಿದ್ದು ಅಮಿತ್ ಶಾ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಮಂಗಳವಾರ ಸಂಜೆ 7.00-7.50 ರವರೆಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಿಂದ ನಾಗರಬಾವಿ ವೃತ್ತದವರೆಗೂ ರೋಡ್ ಶೋ ನಡೆಯಲಿದೆ. ಗೋವಿಂದರಾಜನಗರದಲ್ಲಿ ಈ ಬಾರಿ ಹೊಸ ಮುಖಕ್ಕೆ ಅವಕಾಶ ನೀಡಿದ್ದು, ವಿಜಯನಗರ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಹೀಗಾಗಿ ಇಲ್ಲಿ ಅಮಿತ್ ಶಾ ಮತಬೇಟೆ ಮಹತ್ವ ಪಡೆದುಕೊಂಡಿದೆ. ನಾಳೆ ರಾತ್ರಿ 8.30 ಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೊರಟು ರಾತ್ರಿ 11.10 ಕ್ಕೆ ಅಮಿತ್ ಶಾ ನವದೆಹಲಿ ತಲುಪಲಿದ್ದಾರೆ.

ಕೊಡಗಿನಲ್ಲಿ ಅರ್ಧಕ್ಕೆ ನಿಂತ ರೋಡ್​ ಶೋ: ಏಪ್ರಿಲ್​ 29 ರಂದು ಮಡಿಕೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್ ಪರ ಅಮಿತ್ ಶಾ ರೋಡ್​ ಶೋ ನಡೆಸಿದ್ದರು. ಆದರೆ ರೋಡ್​ ಶೋ ಸ್ವಲ್ಪ ತಡವಾಗಿ ಶುರುವಾಗಿದ್ದು ಕಾರಣಾಂತರಗಳಿಂದ ಅರ್ಧಕ್ಕೆ ಮೊಟಕುಗೊಳಿಸಿದ್ದರು. ಸಮಯದ ಅಭಾವದಿಂದ ಗೃಹ ಸಚಿವರು ಉಡುಪಿ ಜಿಲ್ಲೆಯ ಕಾಪುಗೆ ಪ್ರಯಾಣ ಬೆಳೆಸಿದ್ದರು. ಇದರಿಂದ ಅಮಿತ್​ ಶಾ ಅವರನ್ನು ನೋಡಲು ಬಂದಿದ್ದ ಕಾರ್ಯಕರ್ತರು, ಅಭಿಮಾನಿಗಳು ನಿರಾಸೆಗೊಂಡಿದ್ದರು.

ಕೇಸರಿಮಯವಾಗಿತ್ತು ಗುಂಡ್ಲುಪೇಟೆ: ಏಪ್ರಿಲ್​ 24 ರಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಚಾಮರಾಜನಗರದ ಗುಂಡ್ಲುಪೇಟೆಗೆ ಅಮಿತ್​ ಶಾ ಆಗಮಿಸಿದ್ದರು. ಈ ಸಂದರ್ಭದಲ್ಲಿ ಗುಂಡ್ಲುಪೇಟೆ ಪಟ್ಟಣ ಕೇಸರಿ ಕೋಟೆಯಾಗಿ ಬದಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಜೆಪಿ ಧ್ವಜಗಳು ರಾರಾಜಿಸಿದ್ದವು. ಪ್ರಚಾರ ರಥದಲ್ಲಿ ಶಾ ಅವರು ಕಾಂಗ್ರೆಸ್​ ವಿರುದ್ಧ ಮೀಸಲಾತಿ ಅಸ್ತ್ರವನ್ನು ಪ್ರಯೋಗಿಸಿದ್ದರು.

ಇದನ್ನೂ ಓದಿ: ಕರ್ನಾಟಕ ಚುನಾವಣೆ: ಜೆ ಪಿ ನಡ್ಡಾರಿಂದ ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ

Last Updated : May 1, 2023, 1:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.