ETV Bharat / state

ಸೋಮವಾರ ಅಮಿತ್ ಶಾ, ಜೆ ಪಿ‌ ನಡ್ಡಾ ರಾಜ್ಯಕ್ಕೆ ಎಂಟ್ರಿ: ವಿವಿಧೆಡೆ ಪ್ರತ್ಯೇಕ ರೋಡ್ ಶೋ ನಡೆಸಿ ಮತಬೇಟೆ - ಜೆ ಪಿ‌ ನಡ್ಡಾ ರಾಜ್ಯಕ್ಕೆ ಎಂಟ್ರಿ

ರಾಜ್ಯದಲ್ಲಿ ಚುನಾವಣಾ ರಣಕಹಳೆ ಮೊಳಗುತ್ತಿದೆ. ರಾಜ್ಯ, ರಾಷ್ಟ್ರೀಯ ನಾಯಕರಿಂದ ಮತಬೇಟೆ ಜೋರಾಗಿದೆ.

Amit Shah, JP Nadda
ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ‌ ನಡ್ಡಾ
author img

By

Published : Apr 23, 2023, 9:50 PM IST

ಬೆಂಗಳೂರು: ರಾಜ್ಯದ ಚುನಾವಣಾ ರಣಕಣದಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಈಗಾಗಲೇ ರಾಜ್ಯದಲ್ಲಿ ಪ್ರಚಾರ ಆರಂಭಿಸಿದ್ದರೆ, ಮತ್ತೊಂದೆಡೆ ಬಿಜೆಪಿ ರಾಷ್ಟ್ರೀಯ ನಾಯಕರು ಸಹ ಪ್ರಚಾರದ ಅಖಾಡಕ್ಕೆ ಧುಮುಕುತ್ತಿದ್ದಾರೆ. ಬಿಜೆಪಿ ನಾಯಕರು ಭರ್ಜರಿ ರೋಡ್ ಶೋಗಳ ಮೂಲಕ ಮತಬೇಟೆಗೆ ಇಳಿದಿದ್ದು, ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ವಿವಿಧೆಡೆ ರೋಡ್ ಶೋ, ಸಾರ್ವಜನಿಕ ಸಮಾವೇಶಗಳಲ್ಲಿ ಪಾಲ್ಗೊಂಡು ಮತಯಾಚನೆ ನಡೆಸಲಿದ್ದಾರೆ.

ಬಿಜೆಪಿಯ ಘಟಾನುಘಟಿ ನಾಯಕರು ಚುನಾವಣಾ ಅಖಾಡದತ್ತ ಮುಖ ಮಾಡುತ್ತಿದ್ದಾರೆ‌. ಸೋಮವಾರ ಮತ್ತೆ ರಾಜ್ಯ ಪ್ರವಾಸ ಕೈಗೊಳ್ಳುವ ಬಿಜೆಪಿ ಚಾಣಕ್ಯ ಅಮಿತ್ ಶಾ ಅವರು ಮೈಸೂರು, ಗುಂಡ್ಲುಪೇಟೆ, ಹಾಸನ, ಸಕಲೇಶಪುರ ಮತ್ತು ಹುಬ್ಬಳ್ಳಿಯಲ್ಲಿ ಸಮಾವೇಶ, ರೋಡ್ ಶೋಗಳಲ್ಲಿ ಪಾಲ್ಗೊಂಡು ಚುನಾವಣಾ ರಣತಂತ್ರ ರೂಪಿಸಲಿದ್ದಾರೆ. ಬೆಂಗಳೂರಿಗೆ ಆಗಮಿಸಲಿರುವ ಅಮಿತ್ ಶಾ ಬೆಳಗ್ಗೆ 11 ಗಂಟೆಗೆ ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲಿದ್ದಾರೆ.

ಬಳಿಕ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ತೆರಳಿ ಭರ್ಜರಿ ರೋಡ್ ಶೋ ಕೈಗೊಳ್ಳಲಿದ್ದಾರೆ. ಬಳಿಕ ಸಕಲೇಶಪುರದ ಅಲೂರಿನಲ್ಲಿ ಅಮಿತ್ ಶಾ ರೋಡ್ ಶೋ ನಡೆಸಿ ಮತಯಾಚನೆ ಮಾಡಲಿದ್ದಾರೆ. ಬಳಿಕ ಹುಬ್ಬಳ್ಳಿಗೆ ಆಗಮಿಸಿ ರಾತ್ರಿ ಚುನಾವಣಾ ಕಾರ್ಯ ಸಮಿತಿ ಸಭೆ ನಡೆಸಿ ಕಾರ್ಯತಂತ್ರ ರೂಪಿಸಲಿದ್ದಾರೆ.

ಜೆ.ಪಿ. ನಡ್ಡಾ ಮತಬೇಟೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸೋಮವಾರ ರಾಜ್ಯಕ್ಕೆ ಆಗಮಿಸಲಿದ್ದು, ದಿನಪೂರ್ತಿ ರೋಡ್ ಶೋ, ಸಮಾವೇಶ ನಡೆಸಿ ಮತಯಾಚನೆ ಮಾಡಲಿದ್ದಾರೆ. ನಡ್ಡಾ ಅವರು ಚಿಕ್ಕಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ನೆಲಮಂಗಲದಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿರುವ ನಡ್ಡಾ, ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಹೊಸಕೋಟೆಗೆ ತೆರಳಿ ರೋಡ್ ಶೋ ಕೈಗೊಳ್ಳಲಿದ್ದಾರೆ. ಸಂಜೆ ದೇವನಹಳ್ಳಿಯಲ್ಲಿ ಹೊಸಕೋಟೆ ಕ್ಷೇತ್ರ, ದೇವನಹಳ್ಳಿ ಕ್ಷೇತ್ರ, ದೊಡ್ಡಬಳ್ಳಾಪುರ ಕ್ಷೇತ್ರ ಹಾಗೂ ನೆಲಮಂಗಲ ಕ್ಷೇತ್ರಗಳ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ.

ವಿಜಯಪುರಕ್ಕೆ ನರೇಂದ್ರ ಮೋದಿ : ಚುನಾವಣಾ ಪ್ರಚಾರಕ್ಕಾಗಿ ಇದೇ ತಿಂಗಳ 29ರಂದು ನಗರದ ಸೈನಿಕ ಶಾಲೆ ಮೈದಾನಕ್ಕೆ ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಅಂದು ಸೈನಿಕ ಶಾಲೆ ಮೈದಾನದಲ್ಲಿ ಬಹಿರಂಗ ಸಭೆ ನಡೆಸುವರು ಎಂದು ವಿಜಯಪುರ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್​​ ಯತ್ನಾಳ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಜಿಲ್ಲೆಯ 8 ಮತ ಕ್ಷೇತ್ರದ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಏಪ್ರಿಲ್ 25ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಹ ವಿಜಯಪುರಕ್ಕೆ ಆಗಮಿಸಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.

ನನ್ನ ಕ್ಷೇತ್ರಕ್ಕೆ ನಾನೇ ಡೈರೆಕ್ಟರ್​: ಚಿತ್ರನಟ ಸುದೀಪ್​ ವಿಜಯಪುರಕ್ಕೆ ಪ್ರಚಾರಕ್ಕೆ ಬರುವುದು ಬೇಡ, ನಾನೇ ಚಿತ್ರನಟರಿಗಿಂತ ಹೆಚ್ಚಿನ ಪಾಪ್ಯುಲರ್ ಇದ್ದೇನೆ. ಅವರು ಯಾರೂ ಪ್ರಚಾರಕ್ಕೆ ಬರೋದಿಲ್ಲ. ಯಾವುದೇ ಸಿನಿಮಾ ನಟರುಗಳು ನನಗೆ ಬೇಡ. ವಿಜಯಪುರ ಚಿತ್ರ ನಟರಿಗಿಂತಲೂ ನಾನೇನು ಕಡಿಮೆ ಇಲ್ಲ. ಡೈರೆಕ್ಟರ್, ಆಕ್ಟರ್, ಕಥಾ ಸಂಕಲನ ನಾನೇ ಮಾಡ್ತಿನಿ ಎಂದು ಯತ್ಲಾಳ್​ ಹೇಳಿದ್ದಾರೆ.

ಇದನ್ನೂಓದಿ:ದ.ಕ ಜಿಲ್ಲೆಯ ಮೂವರು ಬಿಜೆಪಿ ನಾಯಕರು ಸಿಡಿ ರಿಲೀಸ್​ ಮಾಡಬಾರದೆಂದು ತಡೆಯಾಜ್ಞೆ ತಂದಿದ್ದೇಕೆ?: ಡಿಕೆಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.