ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿದ್ದು, ಮೇ.27ರಂದು ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 24 ಸಚಿವರು ಪದಗ್ರಹಣ ಮಾಡಿದ್ದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ ಬೋಧಿಸಿದ್ದರು. ಕಳೆದ ಶನಿವಾರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಮತ್ತು ಇವರ ಜೊತೆ ಸಂಪುಟ ಸಚಿವರಾಗಿ 8 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರು. ಇದರಿಂದಾಗಿ ಈಗ ಸಿಎಂ, ಡಿಸಿಎಂ ಸೇರಿದಂತೆ ಒಟ್ಟು 34 ಸಚಿವರ ಪೂರ್ಣ ಪ್ರಮಾಣದ ಸಂಪುಟ ರಚನೆಯಾಗಿದೆ.
ಸಚಿವ ಸಂಪುಟದಲ್ಲಿ ಸ್ಥಾನ ಪಡೆದವರು: ಗದಗ ಶಾಸಕ ಎಚ್ ಕೆ ಪಾಟೀಲ್, ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ, ಪಿರಿಯಾಪಟ್ಟಣ ಶಾಸಕ ಕೆ. ವೆಂಕಟೇಶ್, ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ, ಮುಧೋಳ ಶಾಸಕ ಆರ್ ಬಿ ತಿಮ್ಮಾಪುರ್, ದಾವಣಗೆರೆ ಉತ್ತರ ಶಾಸಕ ಎಸ್ ಎಸ್ ಮಲ್ಲಿಕಾರ್ಜುನ್, ಕನಕಗಿರಿ ಶಾಸಕ ಶಿವರಾಜ್ ತಂಗಡಗಿ, ಶಹಾಪೂರ ಶಾಸಕ ಶರಣಬಸಪ್ಪ ಬಾಪೂಗೌಡ ದರ್ಶನಾಪುರ್, ಸೇಡಂ ಶಾಸಕ ಶರಣಪ್ರಕಾಶ್ ಪಾಟೀಲ್, ಭಟ್ಕಳ ಶಾಸಕ ಮಾಂಕಾಳು ವೈದ್ಯ, ಕಲಘಟಗಿ ಶಾಸಕ ಸಂತೋಷ್ ಲಾಡ್, ಎಐಸಿಸಿ ಕಾರ್ಯದರ್ಶಿ ಎನ್. ಎಸ್. ಬೋಸರಾಜು, ಹೆಬ್ಬಾಳ ಶಾಸಕ ಭೈರತಿ ಸುರೇಶ್, ಸೊರಬ ಶಾಸಕ ಮಧು ಬಂಗಾರಪ್ಪ, ಚಿಂತಾಮಣಿ ಶಾಸಕ ಎಂ ಸಿ ಸುಧಾಕರ್.
ಬ್ಯಾಟರಾಯನಪುರ ಶಾಸಕ ಕೃಷ್ಣಬೈರೇಗೌಡ, ಟಿ ನರಸೀಪುರ ಶಾಸಕ ಡಾ ಎಚ್ ಸಿ ಮಹದೇವಪ್ಪ. ಮಧುಗಿರಿ ಶಾಸಕ ಕೆ ಎನ್ ರಾಜಣ್ಣ, ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ , ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಬೀದರ್ ಶಾಸಕ ರಹೀಮ್ ಖಾನ್, ಚಳ್ಳಕೆರೆ ಶಾಸಕ ಡಿ. ಸುಧಾಕರ್, ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ ಪ್ರಮಾಣವಚನ ಸ್ವೀಕರಿಸಿದ್ದರು.
ಸದ್ಯ ರಾಜ್ಯ ಸರ್ಕಾರದ 12 ಮಂದಿ ನೂತನ ಸಚಿವರುಗಳಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಎಚ್.ಕೆ.ಪಾಟೀಲ್ - ವಿಧಾನಸೌಧ ಕೊಠಡಿ ಸಂಖ್ಯೆ 314,314ಎ. ಕೆ.ವೆಂಕಟೇಶ್- ವಿಧಾನಸೌಧ ಕೊಠಡಿ ಸಂಖ್ಯೆ 329,329ಎ.
ಡಾ.ಹೆಚ್.ಸಿ.ಮಹದೇವಪ್ಪ- ವಿಧಾನಸೌಧ ಕೊಠಡಿ ಸಂಖ್ಯೆ 330,330ಎ. ಕೆ.ಎನ್. ರಾಜಣ್ಣ- ವಿಧಾನಸೌಧ ಕೊಠಡಿ ಸಂಖ್ಯೆ 339,339 ಎ. ಶರಣಬಸಪ್ಪ ದರ್ಶನಾಪುರ್- ವಿಧಾನಸೌಧ ಕೊಠಡಿ ಸಂಖ್ಯೆ 328,328 ಎ. ನೀಡಲಾಗಿದೆ.
ಸಂತೋಷ್ ಎಸ್. ಲಾಡ್- ವಿಧಾನಸೌಧ ಕೊಠಡಿ ಸಂಖ್ಯೆ 342, 342 ಎ. ಸುರೇಶ್ ಬಿ.ಎಸ್. (ಭೈರತಿ) -ವಿಧಾನಸೌಧ ಕೊಠಡಿ ಸಂಖ್ಯೆ 316, 316 ಎ.
ಲಕ್ಷ್ಮಿ ಹೆಬ್ಬಾಳ್ಕರ್- ವಿಧಾನಸೌಧ ಕೊಠಡಿ ಸಂಖ್ಯೆ 301, 301 ಎ. ಬಿ.ನಾಗೇಂದ್ರ- ವಿಧಾನಸೌಧ ಕೊಠಡಿ ಸಂಖ್ಯೆ 343,343 ಎ. ಕೃಷ್ಣಬೈರೇಗೌಡ- ವಿಕಾಸಸೌಧ ಕೊಠಡಿ ಸಂಖ್ಯೆ 244, 245. ಡಾ.ಎಂ.ಸಿ.ಸುಧಾಕರ್- ವಿಕಾಸಸೌಧ ಕೊಠಡಿ ಸಂಖ್ಯೆ 344, 345. ರಹೀಂ ಖಾನ್- ವಿಕಾಸಸೌಧ ಕೊಠಡಿ ಸಂಖ್ಯೆ 38,39. ಹಂಚಿಕೆ ಮಾಡಲಾಗಿದೆ.