ETV Bharat / state

ಮುಖಕ್ಕೆ ಉಗಿದು ಅಸಭ್ಯ ವರ್ತನೆ: ಪೊಲೀಸ್​ ಅಧಿಕಾರಿ ಪತ್ನಿ ವಿರುದ್ಧ ಫೇಸ್​ಬುಕ್​ನಲ್ಲಿ ಆರೋಪ - Ajay Hilori

ಕೋವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ಕ್ವಾರಂಟೈನ್​ನಲ್ಲಿರುವ ಅಜಯ್ ಹಿಲೋರಿ ಪತ್ನಿ ನನ್ನ ಮೇಲೆ ಉಗುಳಿ ಅಸಹ್ಯವಾಗಿ ಬೈದಿದ್ದಾರೆ ಎಂದು ಆರೋಪಿಸಿ ವಂದನಾ ಸುಧಾ ವೆಂಕಟೇಶ್ ಎಂಬುವರು ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

Police
ಪೊಲೀಸ್
author img

By

Published : Jun 30, 2020, 5:35 AM IST

ಬೆಂಗಳೂರು: ಐಎಂಎ ಹಗರಣದ ಆರೋಪಿ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಪತ್ನಿಯು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ‌ ಮಹಿಳೆಯೊಬ್ಬಳು‌ ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ವಂದನಾ ಸುಧಾ ವೆಂಕಟೇಶ್ ಎಂಬುವರು ಹಿಲೋರಿ ಪತ್ನಿ ವಿರುದ್ಧ ಫೇಸ್​ಬುಕ್ ಪೋಸ್ಟ್​ನಲ್ಲಿ ಆಪಾದಿಸಿದ್ದಾರೆ. ಅಜಯ್ ಹಿಲೋರಿ ಅವರ ಕುಟುಂಬ ಜಯನಗರದಲ್ಲಿ ವಾಸವಾಗಿದೆ. ಇವರ ಮಗ‌ ನನ್ನ ಮನೆ‌ ಮುಂದೆ ಕಿರುಚಾಡುತ್ತಾ ಆಟವಾಡಿದ್ಡಾನೆ. ನಿಧಾನವಾಗಿ ಆಟ ಆಡುವಂತೆ ವಂದನಾ‌ ಹೇಳಿದ್ದಾರೆ.

  • " class="align-text-top noRightClick twitterSection" data="">

ಬಳಿಕ ಹಿಲೋರಿ ಪತ್ನಿಗೂ ತಮ್ಮ ಮನೆಯ ಬಾಲ್ಕನಿಯಲ್ಲಿ ತಿಳಿ ಹೇಳಿದ್ದರಂತೆ. ಇದೇ ವಿಚಾರಕ್ಕೆ ಕೆಲ ಹೊತ್ತಿನ ಬಳಿಕ ಮನೆಗೆ ಬಂದ ಎಂಟು ಮಂದಿ ಪೊಲೀಸರು ಮಕ್ಕಳ‌ ಮೇಲಿನ ದೌರ್ಜನ್ಯ ಆರೋಪದಡಿ‌ ವಿಚಾರಣೆ ಮಾಡಿದ್ದಾರೆ.

ಇಂತಹ ಬೆದರಿಕೆ ತಂತ್ರಗಳನ್ನು ನನ್ನ ವಿರುದ್ಧ ಬಳಸಬೇಡಿ ಎಂದು ಕೇಳಲು ನಾನು ಅವರ ಮನೆಗೆ ಹೋಗಿದ್ದೆ. ಕೋವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ಕ್ವಾರಂಟೈನ್​ನಲ್ಲಿರುವ ಅಜಯ್ ಹಿಲೋರಿ ಪತ್ನಿ ನನ್ನ ಮೇಲೆ ಉಗುಳಿ ಅಸಹ್ಯವಾಗಿ ಬೈದಿದ್ದಾರೆ ಎಂದು ಮಹಿಳೆಯು ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ನಗರ ದಕ್ಷಿಣ ವಿಭಾಗದ ಪೊಲೀಸ್ ಹಾಗೂ ಬೆಂಗಳೂರು ಪೊಲೀಸರಿಗೆ ಈ ಬರಹವನ್ನು ಟ್ಯಾಗ್ ಮಾಡಿ ನ್ಯಾಯ ಕೊಡಿಸಬಹುದಾ ಎಂದು ಪ್ರಶ್ನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.