ETV Bharat / state

ಸಿಗರೇಟ್ ವ್ಯಾಪಾರಿಗಳಿಂದ ಲಂಚ ಪಡೆದ ಆರೋಪ ಪ್ರಕರಣ: ಎಸಿಪಿ ಪ್ರಭುಶಂಕರ್​ಗೆ ಹೈಕೋರ್ಟ್ ರಿಲೀಫ್​​

author img

By

Published : Jun 3, 2020, 9:54 PM IST

ಕೊರೊನಾ ಲಾಕ್​ಡೌನ್ ವೇಳೆ ಅಕ್ರಮವಾಗಿ ಸಿಗರೇಟ್ ಮಾರಾಟ ಮಾಡಲು ವ್ಯಾಪಾರಸ್ಥರಿಂದ ಲಂಚ ಪಡೆದಿರುವ ಆರೋಪದಡಿ ಎಸಿಪಿ ಪ್ರಭುಶಂಕರ್ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಸದ್ಯ ಹೈಕೋರ್ಟ್ ಈ ಎಫ್​ಐಆರ್​​ನಿಂದ ಎಸಿಪಿಗೆ ರಿಲೀಫ್​​ ನೀಡಿದ್ದು, ಎಲ್ಲಾ ಎಫ್​ಐಆರ್​ಗಳನ್ನು ರದ್ದು ಮಾಡುವಂತೆ ಆದೇಶ ನೀಡಿದೆ.

ಬೆಂಗಳೂರು: ಲಾಕ್​​ಡೌನ್​ ಅವಧಿಯಲ್ಲಿ ಸಿಗರೇಟ್ ವ್ಯಾಪಾರಕ್ಕೆ ಸಹಕಾರ ನೀಡುವುದಾಗಿ ತಿಳಿಸಿ ವ್ಯಾಪಾರಿಗಳಿಂದ ಲಂಚ ಪಡೆದ ಆರೋಪದಡಿ ಎಸಿಪಿ ಪ್ರಭುಶಂಕರ್ ವಿರುದ್ಧ ದಾಖಲಿಸಲಾಗಿರುವ ಎಫ್ಐಆರ್​ಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಪ್ರಕರಣ ಸಂಬಂಧ ಬೆಂಗಳೂರಿನ ಕಾಟನ್ ಪೇಟೆ ಠಾಣೆ ಪೊಲೀಸರು ದಾಖಲಿಸಿರುವ ಎರಡು ಪ್ರತ್ಯೇಕ ಎಫ್ಐಆರ್​ಗಳನ್ನು ರದ್ದುಪಡಿಸುವಂತೆ ಕೋರಿ ಪ್ರಭುಶಂಕರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಹೆಚ್.ಪಿ.ಸಂದೇಶ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲಕಾಲ ವಾದ ಆಲಿಸಿದ ಪೀಠ, ಎಫ್ಐಆರ್​ಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ದುರುದ್ದೇಶದಿಂದ ಸುಳ್ಳು ದೂರನ್ನು ನೀಡಲಾಗಿದೆ. ಒಂದೇ ಕೃತ್ಯದ ಮೇಲೆ ಪ್ರತ್ಯೇಕ ಮೂರು ದೂರುಗಳನ್ನು ಸಲ್ಲಿಸಲಾಗಿದ್ದು, ಅವುಗಳ ಆಧಾರದ ಮೇಲೆ 2 ಪ್ರತ್ಯೇಕ ಎಫ್ಐಆರ್​​ಗಳನ್ನು ದಾಖಲಿಸಲಾಗಿದೆ. ಪೊಲೀಸರು ದಾಖಲಿಸಿರುವ ಪ್ರಕರಣ ವಸೂಲಿ ಆರೋಪದಡಿ ಬರುವುದಿಲ್ಲ. ಹೀಗಾಗಿ ಎಫ್ಐಆರ್​​ಗಳಿಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ: ಲಾಕ್​​ಡೌನ್​ ಅವಧಿಯಲ್ಲಿ ಅಕ್ರಮವಾಗಿ ಸಿಗರೇಟ್ ಮಾರಾಟ ಮಾಡಲು ಅನುಕೂಲ ಮಾಡಿಕೊಡುವುದಾಗಿ ತಿಳಿಸಿ ವ್ಯಾಪಾರಿಗಳಿಂದ 62.5 ಲಕ್ಷ ರೂಪಾಯಿ ಹಣವನ್ನು ಸಿಸಿಬಿ ಎಸಿಬಿ ಪ್ರಭುಶಂಕರ್ ಸ್ವೀಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸಲ್ಲಿಕೆಯಾದ ದೂರುಗಳನ್ನು ಆಧರಿಸಿ ಕಾಟನ್ ಪೇಟೆ ಠಾಣೆ ಪೊಲೀಸರು 2 ಪ್ರತ್ಯೇಕ ಎಫ್ಐಆರ್​​ಗಳನ್ನು ದಾಖಲಿಸಿದ್ದರು.

ದೂರು ದಾಖಲಾದ ಬಳಿಕ ಅವುಗಳನ್ನು ರದ್ದುಪಡಿಸುವಂತೆ ಕೋರಿ ಎಸಿಪಿ ಪ್ರಭುಶಂಕರ್ ಹೈಕೋರ್ಟ್​​ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.