ETV Bharat / state

ಬೆಂಗಳೂರು: ಕೆಲಸಕ್ಕೆ ಸೇರಿದವನಿಂದಲೇ ಮಾಲೀಕನ ಮಗು ಅಪಹರಣ ಆರೋಪ; ತಂದೆಯಿಂದ ದೂರು

ಒಂದೂವರೆ ವರ್ಷದ ಹಿಂದೆ ಕೆಲಸಕ್ಕೆ ಸೇರಿ, ಕೆಲಸ ಬಿಟ್ಟಿದ್ದ ವ್ಯಕ್ತಿಯೇ ಮಗುವನ್ನು ಅಪಹರಿಸಿರುವುದಾಗಿ ಮಗುವಿನ ತಂದೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

Child father Shafivulla
ಮಗುವಿನ ತಂದೆ ಶಫೀವುಲ್ಲಾ
author img

By ETV Bharat Karnataka Team

Published : Jan 4, 2024, 3:05 PM IST

ಮಗುವಿನ ತಂದೆ ಶಫೀವುಲ್ಲಾ

ಬೆಂಗಳೂರು: ಒಂದೂವರೆ ವರ್ಷದ ಹಿಂದೆ ಕೆಲಸಕ್ಕೆ ಸೇರಿ ಬಿಟ್ಟಿದ್ದ ಯುವಕನೊಬ್ಬ ತನ್ನ ಅಂಗಡಿ ಮಾಲೀಕನ ಮಗುವನ್ನು ಅಪಹರಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆ ಕಳೆದ ಡಿ.28ರಂದು ಬನಶಂಕರಿ 2ನೇ ಹಂತದ ಕಾವೇರಿ ನಗರದಲ್ಲಿ ನಡೆದಿದೆ. ಕೆಲಸಗಾರ ವಾಸೀಂ ಎಂಬಾತ ನನ್ನ ಮಗುವನ್ನು ಅಪಹರಿಸಿಕೊಂಡು ಹೋಗಿರುವುದಾಗಿ ಮಗುವಿನ ತಂದೆ ಶಫೀವುಲ್ಲಾ ಎಂಬುವವರು ಆರೋಪಿಸಿ ಬನಶಂಕರಿ ಠಾಣೆಗೆ ದೂರು ನೀಡಿದ್ದಾರೆ.

2015ರಲ್ಲಿ ನಾನು ಮದುವೆ ಆಗಿದ್ದೆ. ನನಗೆ ನಾಲ್ಕು ವರ್ಷಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಬಳಿಕ ನನ್ನ ಪತ್ನಿ ನನ್ನಿಂದ ವಿಚ್ಛೇದನ ಪಡೆದು ದೂರವಾಗಿದ್ದಾಳೆ. ನಾನು ಮತ್ತು ನನ್ನ ಮಗಳು ಇಬ್ಬರು ಕಳೆದ ನಾಲ್ಕು ವರ್ಷದಿಂದ ಒಟ್ಟಿಗೆ ಇದ್ದೇವೆ. ಆಕೆಯ ಆರೈಕೆಯನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಸದ್ಯ ಬನಶಂಕರಿಯಲ್ಲಿ ಫರ್ನೀಚರ್ ಶಾಫ್ ನಡೆಸುತ್ತಿದ್ದೇನೆ ಎಂದು ಶಫೀವುಲ್ಲಾ ಹೇಳಿದ್ದಾರೆ.

ಈ ನಡುವೆ ಒಂದೂವರೆ ವರ್ಷದ ಹಿಂದೆ ಕೆಲಸ ಬಿಟ್ಟು ಹೋಗಿದ್ದ ವಸೀಂ ಡಿಸೆಂಬರ್ 28ರಂದು ನಮ್ಮ ಶಾಪ್​ ಬಳಿ ಬಂದಿದ್ದ. 'ಅಣ್ಣಾ ಕೆಲಸಕ್ಕೆ ಸೇರಿಸಿಕೊಳ್ಳಿ' ಎಂದು ಕೇಳಿದ್ದ. ಪರಿಚಯವಿರುವ ಹುಡುಗ ತಾನೆ ಎಂದು ನಾನು ಕೆಲಸಕ್ಕೆ ಸೇರಿಸಿಕೊಂಡಿದ್ದೆ. ಆದರೆ ಅದೇ ದಿನ ವಾಸೀಂ ನನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಸಂತ್ರಸ್ತ ತಂದೆ ಶಫಿವುಲ್ಲಾ ಆರೋಪಿಸಿ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಇನ್ನು ಶಫಿ ಬನಶಂಕರಿ ಠಾಣೆಗೆ ದೂರು ನೀಡಿದ್ದು, ಮಗಳನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಈ ಪ್ರಕರಣ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಲಾಕರ್​ನಲ್ಲಿಟ್ಟಿದ್ದ ಚಿನ್ನಾಭರಣ ನಾಪತ್ತೆ ಆರೋಪ: ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.