ETV Bharat / state

ಮದ್ಯ ಪ್ರಿಯರಿಗೆ ಶಾಕ್ ನೀಡಿದ ಸರ್ಕಾರ: ನಾಳೆಯಿಂದ ಹೊಸ ದರ ಜಾರಿ - ಸರ್ಕಾರ

ಕೊರೊನಾ ಎಫೆಕ್ಟ್​ನಿಂದ ಖಾಲಿಯಾಗಿರುವ ಬೊಕ್ಕಸವನ್ನು ತುಂಬಿಸಲು ಸರ್ಕಾರ ಮದ್ಯ ಮಾರಾಟ ದರವನ್ನು ಶೇ. 17ರಷ್ಟು ಹೆಚ್ಚಳ ಮಾಡಿ ಇಂದು ಸಂಜೆ ಆದೇಶ ಹೊರಡಿಸಿದ್ದು, ಇದು ನಾಳೆಯಿಂದ ಜಾರಿಯಾಗಲಿದೆ.

ಮದ್ಯ
Alchol
author img

By

Published : May 6, 2020, 7:25 PM IST

ಬೆಂಗಳೂರು: ಲಾಕ್​ಡೌನ್​ನಿಂದಾಗಿ ನಿಷೇಧವಾಗಿದ್ದ ಮದ್ಯ ಮಾರಾಟಕ್ಕೆ ನಲವತ್ತು ದಿನಗಳ ಬಳಿಕ ಗ್ರೀನ್ ಸಿಗ್ನಲ್ ನೀಡಿದ್ದ ರಾಜ್ಯ ಸರ್ಕಾರ, ಇದೀಗ ಮದ್ಯ ಪ್ರಿಯರಿಗೆ ದರ ಹೆಚ್ಚಳ ಮಾಡುವ ಮೂಲಕ ಶಾಕ್ ನೀಡಿದೆ.

ಕೊರೊನಾ ಎಫೆಕ್ಟ್​ನಿಂದ ಖಾಲಿಯಾಗಿರುವ ಸರ್ಕಾರದ ಬೊಕ್ಕಸವನ್ನು ಭರ್ತಿ ಮಾಡಲು ಆದಾಯ ಮೂಲ ಹೆಚ್ಚಿಸುವ ನಿಟ್ಟಿನಲ್ಲಿ ಮದ್ಯದ ಮೇಲಿನ ಮಾರಾಟ ದರವನ್ನು ಶೇ. 17ರಷ್ಟು ಹೆಚ್ಚಳ ಮಾಡಿ ಇಂದು ಸಂಜೆ ಆದೇಶ ಹೊರಡಿಸಿದೆ. ನಾಳೆಯಿಂದ ಪರಿಷ್ಕೃತ ದರ ಅನ್ವಯವಾಗಲಿದೆ.

ಬಜೆಟ್​ನಲ್ಲಿ ಶೇ. 6ರಷ್ಟು ಹಾಗೂ ಕೊರೊನಾ ತೆರಿಗೆಯಾಗಿ ಶೇ. 11ರಷ್ಟು ಹೆಚ್ಚಳವಾಗಿದ್ದು, ಒಟ್ಟು ಶೇ. 17ರಷ್ಟು ಹೆಚ್ಚಳವಾದಂತಾಗಿದೆ. ದೆಹಲಿ ಹಾಗೂ ತೆಲಂಗಾಣ ಮಾದರಿಯಲ್ಲಿ ಕೊರೊನಾ ಟ್ಯಾಕ್ಸ್ ಅನುಸರಿಸಿದ ರಾಜ್ಯ ಸರ್ಕಾರ, ಮದ್ಯದ ಮೇಲೆ ಶೇ. 17ರಷ್ಟು ತೆರಿಗೆಯಿಂದ 2,535 ಕೋಟಿ ರೂ. ತೆರಿಗೆ ಸಂಗ್ರಹಿಸುವ ನಿರೀಕ್ಷೆ ಇದೆ.

ದರದ ಪಟ್ಟಿ ಹೀಗಿದೆ: 1ರಿಂದ 4 ನೇ ಸ್ಲ್ಯಾಬ್​ಗೆ ಶೇ. 17ರಷ್ಟು ತೆರಿಗೆ. 5-10ನೇ ಸ್ಲ್ಯಾಬ್​ಗೆ ಶೇ. 21ರಷ್ಟು ತೆರಿಗೆ, 11ರಿಂದ 18ನೇ ಸ್ಲ್ಯಾಬ್​ಗೆ ಶೇ. 25ರಷ್ಟು ತೆರಿಗೆ ವಿಧಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಬ್ರಾಂದಿ, ವಿಸ್ಕಿ, ರಮ್‌, ಜಿನ್ ಇತರೆ ಮದ್ಯಕ್ಕೆ ತೆರಿಗೆ ವಿಧಿಸಿದ್ದು, ಬಿಯರ್, ವೈನ್ ಹಾಗೂ ನೀರಾ (ಸೇಂದಿ) ಮತ್ತು ಪೆನ್ನಿಗಳನ್ನು‌ ಹೊರತುಪಡಿಸಿ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಮದ್ಯದ ಬೆಲೆ ಹೆಚ್ಚಾಗಲಿದ್ದು, ಬೊಕ್ಕಸಕ್ಕೆ ಹೆಚ್ಚಿನ ಅದಾಯ ಹರಿದುಬರಲಿದೆ ಎನ್ನಲಾಗಿದೆ.

ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚು ವರಮಾನ ನೀಡುವ ಇಲಾಖೆಗಳಲ್ಲಿ ಅಬಕಾರಿ ಇಲಾಖೆ ಪ್ರಮುಖವಾಗಿದೆ. ವಾರ್ಷಿಕವಾಗಿ 22ರಿಂದ 25 ಸಾವಿರ ಕೋಟಿ ವಹಿವಾಟು ನಡೆಸುವ ಈ ಇಲಾಖೆ ಶೇ. 10ರಷ್ಟು ಬಜೆಟ್ ಗಾತ್ರವನ್ನು ಹೊಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.