ETV Bharat / state

ಡಿಜೆ ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಲು ಅಖಂಡ ಶ್ರೀನಿವಾಸ್ ಮೂರ್ತಿ ನಿರ್ಧಾರ - KG Halli

ಶಾಸಕರ ಮನೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಇಂದು ಅಖಂಡ ಶ್ರೀನಿವಾಸ್ ಮೂರ್ತಿಯವರು ಡಿಜೆಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ.

ಅಖಂಡ ಶ್ರೀನಿವಾಸ್ ಮೂರ್ತಿ
ಅಖಂಡ ಶ್ರೀನಿವಾಸ್ ಮೂರ್ತಿ
author img

By

Published : Aug 14, 2020, 8:33 AM IST

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಕಿಡಿಗೇಡಿಗಳು ಬೆಂಕಿ‌‌ ಹಚ್ವಿ ದಾಂಧಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಾಸಕರು ಡಿ.ಜೆ ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ.

ಮನೆ ಮೇಲೆ ನಡೆದ ಹಾನಿ, ಕೊಲೆ ಮಾಡಲು ಪ್ರಯತ್ನ, ಮನೆಯಲ್ಲಿ ನಡೆದ ವಸ್ತುಗಳ ಕಳ್ಳತನ, ಮನೆಯ ವಸ್ತುಗಳು ಸುಟ್ಟು ಕರಕಲು, ವಾಹನಗಳು ಜಖಂ, ಪೆಟ್ರೋಲ್ ಸುರಿದು ಭಯ ಹುಟ್ಟಿಸುವ ವಾತಾವರಣದ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಲಿದ್ದಾರೆ.

ಪ್ರಾಣ ಭಯದಲ್ಲಿ ಘಟನೆ ನಡೆದಾಗ ಅಖಂಡ ಅವರ ಕುಟುಂಬಸ್ಥರು ಸ್ಥಳೀಯರ ಸಹಾಯದಿಂದ ಮನೆ ಬಿಟ್ಟು ತೆರಳಿದ್ದರು. ಆದರೆ ನಿನ್ನೆ ಘಟನೆ ನಡೆದ ಸ್ಥಳಕ್ಕೆ ಬಂದು ನಾನೇನು ತಪ್ಪು ಮಾಡಿದೆ. ನಮ್ಮ ಕುಟುಂಬಕ್ಕೆ ನನಗೆ ಯಾಕೆ ಈ ರೀತಿ ಶಿಕ್ಷೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಅಳಲು ತೋಡಿಕೊಂಡಿದ್ದರು. ಹಾಗೆ ಮನೆಯ ಬಳಿ ಸುಟ್ಟು ಕರಕಲಾದ ವಸ್ತುಗಳನ್ನ ನೋಡಿ ದೂರು ನೀಡಲು ಇಂದು ನಿರ್ಧಾರ ಮಾಡಿದ್ದಾರೆ. ಸುಮಾರು‌ 11ಗಂಟೆಗೆ ಡಿ.ಜೆ ಹಳ್ಳಿ ಠಾಣೆಗೆ ಬಂದು ದೂರು ನೀಡಲಿದ್ದಾರೆ.

ಜಾಲತಾಣದಲ್ಲಿ ಸೋದರಳಿಯ ನವೀನ್ ಹರಿಬಿಟ್ಟಿದ್ದ ಎನ್ನಲಾದ ಪೋಸ್ಟ್​ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ರಾತ್ರಿ ಡಿ.ಜೆ ಹಳ್ಳಿ ಬಳಿ ಅನೇಕರು ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿದ್ದರು. ಶಾಸಕರ ಮನೆ ಮೇಲೆ ಕೂಡ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಮನೆಯಲ್ಲಿನ ಪೀಠೋಪಕರಣ, ‌ಮನೆಯ ಅರ್ಧ ಭಾಗ, ಅಕ್ಕಪಕ್ಕದ ಸಾರ್ವಜನಿಕರ ಮನೆಗಳಿಗೂ ಹಾನಿಯಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.