ETV Bharat / state

‘ಐಶ್ವರ್ಯ’ಗೆ ಸಮನ್ಸ್.​.. ತನಿಖೆ ಎದುರಿಸಿಲು ಸಜ್ಜಾಗ್ತಿದಾರೆ ಟ್ರಬಲ್​ ಶೂಟರ್​ ಪುತ್ರಿ - ಜಾರಿ ನಿರ್ದೇಶನಾಲಯ

ಜಾರಿ ನಿರ್ದೇಶನಾಲಯದ ವಶದಲ್ಲಿರುವ ಡಿ.ಕೆ. ಶಿವಕುಮಾರ್​ ಪುತ್ರಿಗೆ ಮಂಗಳವಾರ ಇಡಿ ಸಮನ್ಸ್ ಜಾರಿ ಮಾಡಿ, ಸೆ.12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಹೀಗಾಗಿ ಡಿ ಕೆ ಪುತ್ರಿ ಐಶ್ವರ್ಯ ಇಡಿ ಅಧಿಕಾರಿಗಳ ಪ್ರಶ್ನೆಗೆ ಯಾವ ರೀತಿ ಉತ್ತರ ನೀಡಬೇಕು ಎಂಬುದನ್ನು ತಿಳಿಯಲು ಖ್ಯಾತ ವಕೀಲರನ್ನು ಭೇಟಿ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್​ ಪುತ್ರಿ
author img

By

Published : Sep 11, 2019, 12:00 PM IST

ಬೆಂಗಳೂರು: ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಪುತ್ರಿಗೆ ಇಡಿ ಸಮನ್ಸ್ ಜಾರಿ ಮಾಡಿದ್ದು, ನಾಳೆ ಹಾಜರಾಗುವಂತೆ ಸೂಚಿಸಿದ್ದಾರೆ. ಹೀಗಾಗಿ ಡಿಕೆ ಪುತ್ರಿ ಐಶ್ವರ್ಯ ಇಡಿ ಅಧಿಕಾರಿಗಳ ಪ್ರಶ್ನೆಗೆ ಯಾವ ರೀತಿ ಉತ್ತರ ನೀಡಬೇಕು ಎಂಬುದನ್ನು ತಿಳಿಯಲು ಪ್ರತಿಷ್ಠಿತ ವಕೀಲರನ್ನು ಭೇಟಿ ಮಾಡಿದ್ದಾರೆ.

ಹಾಗೆ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಡಿ.ಕೆ. ಶಿವಕುಮಾರ್​ ಪತ್ನಿ ಉಷಾ ಹಾಗೂ ಮಗಳು ಐಶ್ವರ್ಯ ದೆಹಲಿಗೆ ತೆರಳಲಿದ್ದಾರೆ. ನಾಳೆ ವಿಚಾರಣೆಗೆ ಹಾಜರಾಗಲೇಬೇಕಾದ ಅನಿವಾರ್ಯವಿದೆ. ಡಿ.ಕೆ. ಶಿವಕುಮಾರ್​ ಅವರ ಕಸ್ಟಡಿ ಸೆ.13 ಕ್ಕೆ ಮುಗಿಯಲಿದೆ.

ಯಾಕೆ ಸಮನ್ಸ್?

ಡಿಕೆಶಿ ಅವರ ತಾಯಿ, ಪತ್ನಿ, ಮಗಳು ಸಂಬಂಧಿಕರು ಹಾಗೂ ಆಪ್ತರು ಸೇರಿ ಹಲವರ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವ ಆರೋಪದ ಬಗ್ಗೆ ಈಗಾಗಲೇ ಐಟಿ ತನಿಖೆ ನಡೆಸಿ ಇಡಿಗೆ ಮಾಹಿತಿ ರವಾನಿಸಿದೆ. ಆದರೆ ಡಿಕೆಶಿ ತಮ್ಮ ಕುಟುಂಬಸ್ಥರ ಹೆಸರಿನಲ್ಲಿರುವ ಆಸ್ತಿಗೆ ದಾಖಲೆ ಒದಗಿಸಲು ವಿಫಲರಾಗಿದ್ದಾರೆ. ಹೀಗಾಗಿ ಪ್ರಮುಖವಾಗಿ ಐಶ್ವರ್ಯಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಿ ಆಸ್ತಿ ಕುರಿತು ವಿವರ ನೀಡುವಂತೆ ಸೂಚಿಸಿದ್ದಾರೆ.

ಐಶ್ವರ್ಯ ಹೆಸರಿನಲ್ಲಿರುವ ಆಸ್ತಿ ಎಷ್ಟು?

2018ರ ಚುನಾವಣೆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್​ ಸಲ್ಲಿಸಿದ ಆಸ್ತಿಯ ವಿವರದಲ್ಲಿ ಐಶ್ವರ್ಯ ಹೆಸರಿನಲ್ಲಿ 102 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು 5.17 ಕೋಟಿ ಮೌಲ್ಯದ ಚರಾಸ್ತಿ ಇದ ಎನ್ನಲಾಗ್ತಿದೆ. ಸದ್ಯ ಐಶ್ವರ್ಯ ಹಲವಾರು ಕಂಪನಿಗಳ ಒಡತಿಯಾಗಿದ್ದಾರೆ. ಸೋಲ್ ಆ್ಯಂಡ್ ಸೇಲ್ಸ್ ನಲ್ಲಿ ಐಶ್ವರ್ಯ ಹೂಡಿಕೆ 78 ಕೋಟಿ ರೂ. ಇದ್ದು, ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಟ್ರಸ್ಟಿಯಾಗಿದ್ದಾರೆ. ಮುಂಬೈನಲ್ಲಿ 1.2 ಕೋಟಿ ರೂ. ಮೌಲ್ಯದ ಫ್ಯ್ಲಾಟ್​, ಬೆಂಗಳೂರಿನಲ್ಲಿ 24 ಕೋಟಿ ರೂ. ಮೌಲ್ಯದ ಜಾಗ, ಕಾಫಿ ಡೇಯಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಹೊಂದಿದ್ದಾರೆ ಎಂದು ಹೇಳಲಾಗ್ತಿದೆ.

Intro:KN_BNG_01_DK_7204498

ಡಿಕೆ ಬಂಧನವಾಗಿ ಈಗಾಗಲೇ ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾರೆ .ಆದರೆ ಡಿಕೆ ಪುತ್ರಿಗೆ ನಿನ್ನೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ನಾಳೆ ಹಾಜರಾಗುವಂತೆ ಸೂಚಿಸಿದ್ದಾರೆ. ಹೀಗಾಗಿ ಡಿಕೆ ಪುತ್ರಿ ಐಶ್ವರ್ಯ ನಾಳೆ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗ ಬೇಕಾದ ಅನಿವಾರ್ಯಿರುವ ಹಿನ್ನೆಲೆ ಜಾರಿ ನಿರ್ದೇಶನದ ಪ್ರಶ್ನೆಗೆ ಯಾವ ರೀತಿಉತ್ತರ ನೀಡಬೇಕು ಅನ್ನೋದಕ್ಕೆ ಪ್ರತಿಷ್ಠಿತ ವಕೀಲರ ಭೇಟಿ ಮಾಡಿ ಡಿಕೆ ಕುಟುಂಬದ ವರು ನಿನ್ನೆ ಚರ್ಚೆ ನಡೆಸಿದ್ದಾರೆ. ಹಾಗೆ ಇಂದು ಕೂಡ ಚೃಚೆ ನಡೆಸುವ ಸಾಧ್ಯತೆ ಇದೆ

ಹಾಗೆ ಇಂದು ಸಂಜೆ ಅಥವಾ ನಾಳೆ ಬೆಳ್ಳಗ್ಗೆ ಡಿಕೆ ಪತ್ನಿ ಉಷಾ ಹಾಗೂ ಡಿಕೆ ಮಗಳು ಐಶ್ವರ್ಯ ದೆಹಲಿಗೆ ತೆರಳಲಿದ್ದಾರೆ. ನಾಳೆ ವಿಚಾರಣೆಗೆ ಹಾಜರಾಗಲೇಬೇಕಾದ ಅನಿವಾರ್ಯವಿದೆ ಯಾಕೆಂದರೆ ಡಿಕೆ ಕಷ್ಟಡಿ ಹದಿಮೂರಕ್ಕೆ ಮುಕ್ತಾಯವಾಗಿ ಮತ್ತೆ ಇಡಿ ಡಿಕೆಯನ್ನ ನ್ಯಾಯಾಲಯಕ್ಜೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ಡಿಕೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಯಾಕೆ ಸಮನ್ಸ್

ಡಿಕೆಶಿ ಅವರು ತಾಯಿ, ಪತ್ನಿ ,ಮಗಳು ಸಂಬಂಧಿಕರು ಹಾಗೂ ಆಪ್ತರು ಸೇರಿ ಹಲವರ ಹೆಸರಿನಲ್ಲಿ ಕೋಟ್ಯಾಂತರ ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವ ಆರೋಪದ ಬಗ್ಗೆ ಈಗಾಗ್ಲೇ ಐಟಿ ತನಿಖೆ ನಡೆಸಿ ಇಡಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಆದರೆ ಡಿಕೆಶಿ ಕುಟುಂಬಸ್ಥರ ಹೆಸರಿನಲ್ಲಿರುವ ಆಸ್ತಿಗೆ ದಾಖಲೆ ಒದಗಿಸಲು ಡಿಕೆಶಿ ವಿಫಲರಾಗಿದ್ದಾರೆ .ಹೀಗಾಗಿ ಪ್ರಮುಖವಾಗಿ ನಾಳೆ ಐಶ್ವರ್ಯಗೆ ಸಮನ್ಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗಿ ಆಸ್ತಿ ಕುರಿತು ವಿವರ ನೀಡುವಂತೆ ತಿಳಿಸಿದ್ದಾರೆ..

ಐಶ್ವರ್ಯ ಹೆಸರನಲ್ಲಿರುವ ಆಸ್ತಿ

2018ರ ಚುನಾವಣೆ ಸಂದರ್ಭದಲ್ಲಿ ಡಿಕೆ ಸಲ್ಲಿಸಿದ ಆಸ್ತಿಯ ವಿವರದಲ್ಲಿ ಐಶ್ವರ್ಯ ಹೆಸರಿನಲ್ಲಿ 102 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು 5.17 ಕೋಟಿ ಮೌಲ್ಯದ ಚರಾಸ್ತಿ ಇದೆ ಎಂದು ಡಿಕೆ ಘೋಷಣೆ ಮಾಡಿದರು ಸದ್ಯ ಈಕೆಗೆ 23 ವರ್ಷವಾದರೂ ಹಲವಾರು ಕಂಪನಿಗಳ ಒಡತಿಯಾಗಿದ್ದಾರೆ .

ಸೋಲ್ ಆ್ಯಂಡ್ ಸೇಲ್ಸ್ ನಲ್ಲಿ ಐಶ್ವರ್ಯ ಹೂಡಿಕೆ 78 ಕೋಟಿ ರೂ ,ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಟ್ರಸ್ಟಿ ಹೊಂದಿದ್ದಾರೆ, ಮುಂಬೈನಲ್ಲಿ 1.2 ಕೋಟಿ ರು ಮೌಲ್ಯದ ಫ್ಲಾಟ್ , ಬೆಂಗಳೂರಿನಲ್ಲಿ 24ಕೋಟಿ ರೂ ಮೌಲ್ಯದ ಜಾಗ,
ಹಲವಾರು ಕಾಫಿ ಡೇಯಲ್ಲಿ ಕೋಟ್ಯಾಂತರ ಹೂಡಿಕೆ ಹೊಂದಿದ್ದಾರೆ. ಸದ್ಯ ಇಡಿ ಸಮನ್ಸ್ ಜಾರಿ ಮಾಡಿದ್ದು ಇಡಿ ಕೇಳುವ ಪ್ರಶ್ನೆಗೆ ಐಶ್ವರ್ಯ ಉತ್ತರ ನೀಡಬೇಕಾದ ಅನಿವಾರ್ಯವಿದೆ.

Body:KN_BNG_01_DK_7204498

Conclusion:KN_BNG_01_DK_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.