ETV Bharat / state

ಫ್ಯಾನ್ಸಿ ನಂಬರ್ ಆಸೆಗೆ ಬಿದ್ದು 64,900 ರೂ. ಕಳೆದುಕೊಂಡ ಎಂಜಿನಿಯರ್ - ಸೈಬರ್ ಖದೀಮರು

ಫ್ಯಾನ್ಸಿ ನಂಬರ್​​ ಕೊಡಿಸುವುದಾಗಿ ಬಂದ ಮೆಸೇಜ್​ ನಂಬಿ ಎಂಜಿನಿಯರ್​ ಒಬ್ಬರು ಸಾವಿರಾರು ರೂ. ಹಣ ಕಳೆದುಕೊಂಡ ಘಟನೆ ಬೆಂಗಳೂರಲ್ಲಿ ನಡೆದಿದೆ. ಆನ್​ಲೈನ್​ನಲ್ಲಿ ಹಣ ಪಾವತಿಸಿ ಮೋಸಕ್ಕೊಳಗಾದ ಟೆಕ್ಕಿ ಸೈಬರ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫ್ಯಾನ್ಸಿ ನಂಬರ್
ಫ್ಯಾನ್ಸಿ ನಂಬರ್
author img

By

Published : Jun 10, 2020, 2:16 AM IST

ಬೆಂಗಳೂರು: ​ ಫ್ಯಾನ್ಸಿ ನಂಬರ್ ಆಸೆಗೆ ಬಿದ್ದು ಎಂಜಿನಿಯರ್ ಒಬ್ಬ‌ರು 64,900 ರೂ. ಹಣ ಕಳೆದುಕೊಂಡಿರುವ ಘಟನೆ‌ ಬೆಳಕಿಗೆ ಬಂದಿದೆ.

ನಗರದ ಚಿನ್ನಸ್ವಾಮಿ ಮೊದಲಿಯಾರ್ ರಸ್ತೆ ಬಳಿ ವಾಸವಾಗಿರುವ ಶಿವ್ ಎಂಬ 51 ವರ್ಷದ ಎಂಜಿನಿಯರ್​ ಮೋಸಕ್ಕೊಳಗಾದವರು. ಸೈಬರ್ ಖದೀಮರು 90999999999 ಎಂಬ ಫ್ಯಾನ್ಸಿ ನಂಬರ್​​ ಕೊಡಿಸುವುದಾಗಿ ಸಂದೇಶ​ ಕಳುಹಿಸಿದ್ದಾರೆ. ಇದನ್ನು ನಂಬಿ ಶಿವ್​​ ಖದೀಮರಿಗೆ ಫೋನ್ ಕರೆ ಮಾಡಿದ್ದಾರೆ. ಈ ವೇಳೆ ಸೈಬರ್ ಖದೀಮರು ಫ್ಯಾನ್ಸಿ ನಂಬರ್ ಪಡೆಯಬೇಕಾದರೆ 64,900 ರೂ. ಹಣ ಕಟ್ಟಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದನ್ನು ನಂಬಿದ ಶಿವ್​ ಆನ್​ಲೈನ್​ನಲ್ಲಿ ಹಣ ಪಾವತಿಸಿದ್ದಾರೆ.

ಬಳಿಕ ತನ್ನ ಹೊಸ ಸಂಖ್ಯೆಯ ಸಿಮ್ ಪಡೆಯಲು ಕರೆ ಮಾಡಿದಾಗ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿರಲಿಲ್ಲ. ಹೀಗಾಗಿ ತಕ್ಷಣ ಏರ್​ಟೆಲ್ ಸಹಾಯವಾಣಿಗೆ ಸಂಪರ್ಕಿಸಿದಾಗ ಫೇಕ್ ಮೇಸೆಜ್ ಎಂದು ತಿಳಿಸಿದ್ದಾರೆ. ಶಿವ್ ತಾನು ಮೋಸ ಹೋಗಿರುವ ವಿಚಾರ ತಿಳಿದು ನಗರ ಆಯುಕ್ತರ ಕಚೇರಿಯಲ್ಲಿನ ಸೈಬರ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.