ಬೆಂಗಳೂರು : ನಗರದಲ್ಲಿ ಫೆ.3 ರಿಂದ 5ವರೆಗೆ ನಡೆಯಲಿರುವ ‘ಏರೋ ಇಂಡಿಯಾ 2021’ ಪ್ರದರ್ಶನದಲ್ಲಿ ತಂತ್ರಜ್ಞಾನಗಳು ಹಾಗೂ ಸೇವೆಗಳನ್ನು ಪ್ರದರ್ಶಿಸಲು ಏರ್‌ಬಸ್ ಸಂಸ್ಥೆ ಸಜ್ಜಾಗಿದೆ.
ಈ ಪ್ರದರ್ಶನದಲ್ಲಿ ಏರ್‌ಬಸ್‌ನ ವಿಶೇಷ ಆವಿಷ್ಕಾರಗಳ ಉತ್ಪನ್ನಗಳು, ಗ್ರಾಹಕರ ಸೇವೆಗಳು ಹಾಗೂ ತರಬೇತಿ ಸಾಮರ್ಥ್ಯಗಳನ್ನು ಒಳಗೊಂಡಿರುತ್ತದೆ. ದೇಶದಲ್ಲಿ ಸುಸ್ಥಿರ ವೈಮಾನಿಕ ಪರಿಸರವನ್ನು ಅಭಿವೃದ್ಧಿಪಡಿಸುವತ್ತ ಕೇಂದ್ರೀಕರಿಸಿದ ಕಂಪನಿಯ ತಂತ್ರಗಾರಿಕೆಯ ಸ್ಥಳೀಯ ಉದ್ಯಮ ಪಾಲುದಾರಿಕೆಯನ್ನು ಬಿಂಬಿಸಲು ಒಂದು ವಿಭಾಗವನ್ನು ಮೀಸಲಿರಿಸಲಾಗಿದೆ.
ಪ್ರದರ್ಶನದ ಹಾಲ್ ಬಿ ಯಲ್ಲಿ ಸ್ಟ್ಯಾಂಡ್ ಬಿ 2.6ನಲ್ಲಿ ಏರ್‌ಬಸ್ ಉತ್ಪನ್ನಗಳು ಪ್ರದರ್ಶನಗೊಳ್ಳಲಿದೆ. ಇದರಲ್ಲಿ ಸಿ 295- ಮಧ್ಯಮ ಸಾರಿಗೆ ವಿಮಾನದ ಸ್ಕೇಲ್ ಮಾದರಿ ಮತ್ತು ಎ330 ಎಂಆರ್ಟಿಟಿ - ಮಲ್ಟಿ-ರೋಲ್ ಟ್ಯಾಂಕರ್ ಟ್ರಾನ್ಸ್‌ಪೋರ್ಟ್ (ಎಂಆರ್‌ಟಿಟಿ) ವಿಮಾನದ ಡಿಜಿಟಲ್ ಪ್ರದರ್ಶನ ಇರುತ್ತದೆ. ಹೆಲಿಕಾಪ್ಟರ್‌ಗಳಿಂದ ಹಿಡಿದು H225Mನ ಸ್ಕೇಲ್ ಮಾದರಿಗಳು, ಯುದ್ಧವಿಶೇಷ ಬಹುಪಯೋಗಿ ಹೆಲಿಕಾಪ್ಟರ್ ಮತ್ತು ಎಲ್ಲಾ ಹವಾಮಾನಕ್ಕೆ ಸೂಕ್ತವಾಗುವ ಬಹುಪಾತ್ರ ಬಲದ ಗುಣಕ ಎಎಸ್565ಎಂಬಿಇ ಪ್ಯಾಂಥರ್ ಇರಲಿವೆ.
ಇದರ ವಿಶೇಷ ಆಕರ್ಷಣೆಯೆಂದ್ರೆ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿರುವ ಎಸ್ 850 ರಾಡಾರ್, ವ್ಯಾಪಕವಾದ ಎಸ್‌ಎಆರ್ ಸಾಮರ್ಥ್ಯಗಳನ್ನು ನೀಡುವ ಈ ಉನ್ನತ ಶಕ್ತಿಯ ಉಪಗ್ರಹದಲ್ಲಿ ಹೆಚ್ಚಿನ ಸಂಖ್ಯೆಯ ಗುರಿಗಳ ಮೇಲ್ವಿಚಾರಣೆ ಮತ್ತು ಆಗಾಗ್ಗೆ ಪುನರಾವರ್ತನೆಗಳು ಮತ್ತು ಒಂದೇ ಪಾಸ್‌ನಲ್ಲಿ ವರ್ಧಿತ ಕಾರ್ಯಕ್ಷಮತೆ ಇರುತ್ತದೆ.
ಏರ್‌ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೆಮಿ ಮೈಲ್ಲಾರ್ಡ್, ಏರೋ ಇಂಡಿಯಾದಲ್ಲಿ "ಏರ್‌ಬಸ್" ಭಾಗವಹಿಸುವಿಕೆಯು ಭಾರತೀಯ ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದ ತ್ವರಿತ ಆಧುನೀಕರಣ ಮತ್ತು ದೇಶೀಕರಣಕ್ಕೆ ನಮ್ಮ ಬದ್ಧತೆಯ ಪ್ರದರ್ಶನವಾಗಿದೆ. ಈ ವಲಯದಲ್ಲಿ ಸಾಧಿಸಿದ ನಾವೀನ್ಯತೆಗಳು ಮತ್ತು ತಾಂತ್ರಿಕ ಪ್ರಗತಿಯನ್ನು ಉದ್ಯಮಿಗಳು, ಜನರ ಮುಂದಿಡಲು ಇದು ಒಂದು ಪ್ರಮುಖ ವೇದಿಕೆಯಾಗಿದೆ. ಮತ್ತು ಪ್ರದರ್ಶನಕ್ಕೆ ನಮ್ಮ ಅತ್ಯುತ್ತಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ನಮಗೆ ಹೆಮ್ಮೆ ಇದೆ" ಎಂದಿದ್ದಾರೆ.
ಏರ್‌ಬಸ್ ಪ್ರದರ್ಶನಕ್ಕೆ ಭೇಟಿ ನೀಡುವವರು ಕಂಪನಿಯ ಅಳವಡಿಸಿಕೊಂಡಿರುವ ‘ಮೇಕ್ ಇನ್ ಇಂಡಿಯಾ’, ‘ಸ್ಕಿಲ್ ಇಂಡಿಯಾ’ ಮತ್ತು ‘ಸ್ಟಾರ್ಟ್ಅಪ್ ಇಂಡಿಯಾ’ ಉಪಕ್ರಮಗಳ ಬಗ್ಗೆ ತಿಳಿದುಕೊಳ್ಳಬಹುದು. ಏರ್‌ಬಸ್ ‘ಮೇಕ್ ಇನ್ ಇಂಡಿಯಾ’ ಅಭಿಯಾನದಲ್ಲಿ ಮುಂಚೂಣಿಯಲ್ಲಿದೆ ಮತ್ತು ಏರ್‌ಬಸ್ ಭಾಗವಹಿಸುತ್ತಿರುವ ಹಲವಾರು ರಕ್ಷಣಾ ಯೋಜನೆಗಳು ಸಾವಿರಾರು ಹೊಸ ಉದ್ಯೋಗಗಳು, ಜನರ ಕೌಶಲ್ಯ, ತಂತ್ರಜ್ಞಾನ ಮತ್ತು ಪೂರೈಕೆದಾರ ಪರಿಸರ ವ್ಯವಸ್ಥೆಯ ಅಭಿವೃದ್ಧಿಯ ಭರವಸೆಯನ್ನು ಕಾಪಾಡಿಕೊಂಡು ಬಂದಿದೆ.