ಬೆಂಗಳೂರು: ಲಾಕ್ಡೌನ್ನಿಂದ ವಾಹನ ಸಂಚಾರ, ರಸ್ತೆ, ಕಟ್ಟಡ ಕಾಮಗಾರಿಗಳು ಮತ್ತು ಕಾರ್ಖಾನೆಗಳು ಸ್ಥಗಿತಗೊಂಡಿದ್ದು, ಪರಿಣಾಮ ರಾಜಧಾನಿಯಲ್ಲಿ ವಾಯು ಮಾಲಿನ್ಯ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿದೆ.
ಕರ್ಫ್ಯೂ, ಲಾಕ್ಡೌನ್ನಿಂದಾಗಿ ನಗರದ ಪ್ರಮುಖ ಜನದಟ್ಟಣೆ ಪ್ರದೇಶಗಳಾದ ಸಿಲ್ಕ್ ಬೋರ್ಡ್, ಮೆಜೆಸ್ಟಿಕ್, ಕೆ.ಆರ್ ಮಾರುಕಟ್ಟೆಗಳಲ್ಲಿ ಧೂಳು, ಹೊಗೆ ಕಡಿಮೆಯಾಗಿದೆ. ವಾಯು ಗುಣಮಟ್ಟದ ಸೂಚ್ಯಂಕ ಏ. 15ರಂದು ಮೈಸೂರು ರಸ್ತೆಯಲ್ಲಿ ಗರಿಷ್ಠ 142, ಪೀಣ್ಯದಲ್ಲಿ ಕನಿಷ್ಠ 44 ಇತ್ತು. ಮೇ. 18ರಂದು ಬಿಟಿಎಂ ಬಡಾವಣೆಯಲ್ಲಿ ಗರಿಷ್ಠ 59, ಕನಿಷ್ಠ 24 ದಾಖಲಾಗಿದೆ. ಅಂದಾಜು ಶೇ. 65ಕ್ಕಿಂತ ಹೆಚ್ಚಿನ ಮಾಲಿನ್ಯ ಪ್ರಮಾಣ ತಗ್ಗಿದೆ.
ಮಾಲಿನ್ಯ ಮಟ್ಟ ( ಮಾಲಿನ್ಯಕಾರಕಗಳ ಪ್ರಮಾಣ)
ಕ್ರ.ಸಂ | ಸ್ಥಳ | ಏ. 15 | ಮೇ. 18 |
1 | ಹೆಬ್ಬಾಳ | 111 | 28 |
2 | ಜಯನಗರ | 105 | 37 |
3 | ಮೈಸೂರು ರಸ್ತೆ | 142 | 37 |
4 | ನಿಮ್ಹಾನ್ಸ್ | 106 | 43 |
5 | ಸಿಲ್ಕ್ ಬೋರ್ಡ್ | 105 | 37 |
6 | ಸಿಟಿ ರೈಲು ನಿಲ್ದಾಣ | 106 | 49 |
7 | ಬಸವೇಶ್ವರ ನಗರ | 67 | 36 |
8 | ಪೀಣ್ಯ | 44 | 24 |
9 | ಬಿಟಿಎಂ | 75. | 59 |