ಬೆಂಗಳೂರು : ಏರ್ ಇಂಡಿಯಾದ ಈ ಮಹತ್ವದ ಕಾರ್ಯದಲ್ಲಿ ಮಹಿಳಾ ಸಿಬ್ಬಂದಿ ತಾವೂ ಯಾರಿಗೂ ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಲು ಮುಂದಾಗಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊನಿಂದ ಬೆಂಗಳೂರಿಗೆ ವಿಮಾನ ಆಗಮಿಸುತ್ತಿದೆ. ವಿಶೇಷ ಅಂದರೆ ಇದಕ್ಕೆ ಸಂಪೂರ್ಣ ಮಹಿಳೆಯರ ಸಾರಥ್ಯವಿದೆ.
-
#FlyAI: AI 176 is now southbound at an altitude of 34000 feet leaving the polar region at a speed of 508 knots/ 940 kmph. Capt Papagari Thanmai is in Command now. pic.twitter.com/4Rp41M3Zim
— Air India (@airindiain) January 10, 2021 " class="align-text-top noRightClick twitterSection" data="
">#FlyAI: AI 176 is now southbound at an altitude of 34000 feet leaving the polar region at a speed of 508 knots/ 940 kmph. Capt Papagari Thanmai is in Command now. pic.twitter.com/4Rp41M3Zim
— Air India (@airindiain) January 10, 2021#FlyAI: AI 176 is now southbound at an altitude of 34000 feet leaving the polar region at a speed of 508 knots/ 940 kmph. Capt Papagari Thanmai is in Command now. pic.twitter.com/4Rp41M3Zim
— Air India (@airindiain) January 10, 2021
ಉತ್ತರ ಧ್ರುವದ ಮೇಲೆ ಹೋಗಿ ಅಟ್ಲಾಂಟಿಕ್ ಮಾರ್ಗದ ಮೂಲಕ ವಿಶ್ವದ ಇನ್ನೊಂದು ತುದಿಯಾದ ಕರ್ನಾಟಕ ರಾಜಧಾನಿಯನ್ನು ತಲುಪುವ ಮೂಲಕ ಮಹಿಳಾ ಧೀರ ಪಡೆ ದಾಖಲೆ ಬರೆಯಲು ಮುಂದಾಗಿದೆ. ಎಐ 176 ವಿಮಾನ ಶನಿವಾರ ರಾತ್ರಿ 8.30ಕ್ಕೆ (ಸ್ಥಳೀಯ ಸಮಯ) ಸ್ಯಾನ್ ಫ್ರಾನ್ಸಿಸ್ಕೊದಿಂದ ಹೊರಟಿದ್ದು, ಸೋಮವಾರ ಮುಂಜಾನೆ 3.45 ಕ್ಕೆ ಬೆಂಗಳೂರಿಗೆ ಆಗಮಿಸಲಿದೆ ಎಂದು ಏರ್ ಇಂಡಿಯಾ ಮೂಲಗಳು ಮಾಹಿತಿ ನೀಡಿವೆ.
-
#FlyAI : Air India's all-women Cockpit Crew of AI176 from @flySFO to @BLRAirport
— Air India (@airindiain) January 10, 2021 " class="align-text-top noRightClick twitterSection" data="
Capt Zoya Aggarwal (P1),
Capt Papagari Thanmai(P1),
Capt Akansha Sonaware(P2)&
Capt Shivani Manhas (P2)
With Capt Nivedita Bhasin
ED(Flight Safety) to power this round-the-world direct flight. pic.twitter.com/ToB2E5M4Tf
">#FlyAI : Air India's all-women Cockpit Crew of AI176 from @flySFO to @BLRAirport
— Air India (@airindiain) January 10, 2021
Capt Zoya Aggarwal (P1),
Capt Papagari Thanmai(P1),
Capt Akansha Sonaware(P2)&
Capt Shivani Manhas (P2)
With Capt Nivedita Bhasin
ED(Flight Safety) to power this round-the-world direct flight. pic.twitter.com/ToB2E5M4Tf#FlyAI : Air India's all-women Cockpit Crew of AI176 from @flySFO to @BLRAirport
— Air India (@airindiain) January 10, 2021
Capt Zoya Aggarwal (P1),
Capt Papagari Thanmai(P1),
Capt Akansha Sonaware(P2)&
Capt Shivani Manhas (P2)
With Capt Nivedita Bhasin
ED(Flight Safety) to power this round-the-world direct flight. pic.twitter.com/ToB2E5M4Tf
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಈ ಬಗ್ಗೆ ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ನಮ್ಮ ನಾರಿ ಶಕ್ತಿ ಸಾಧಿಸುತ್ತದೆ ಎಂದು ಹೆಮ್ಮೆ ಪಟ್ಟಿದ್ದಾರೆ.
ವಿಶ್ವದ ಅತಿ ಉದ್ದದ ವಾಣಿಜ್ಯ ವಿಮಾನ ಸಂಚಾರ ಇದಾಗಿದೆ ಎಂದು ಎಂದು ಏರ್ ಇಂಡಿಯಾ ಹೇಳಿದೆ. ನಿರ್ದಿಷ್ಟ ದಿನದ ಗಾಳಿಯ ವೇಗವನ್ನು ಅವಲಂಬಿಸಿ ಈ ಮಾರ್ಗದಲ್ಲಿ ಒಟ್ಟು ಹಾರಾಟದ ಸಮಯ 17 ಗಂಟೆಗಳಿಗಿಂತ ಹೆಚ್ಚು ಇರುತ್ತದೆ ಎಂದು ತಿಳಿಸಿದೆ.
-
#FlyAI : Initial captures before we embarked on the historic flight AI 176 @flySFO to @BLRAirport . pic.twitter.com/6WGCLtLt22
— Air India (@airindiain) January 10, 2021 " class="align-text-top noRightClick twitterSection" data="
">#FlyAI : Initial captures before we embarked on the historic flight AI 176 @flySFO to @BLRAirport . pic.twitter.com/6WGCLtLt22
— Air India (@airindiain) January 10, 2021#FlyAI : Initial captures before we embarked on the historic flight AI 176 @flySFO to @BLRAirport . pic.twitter.com/6WGCLtLt22
— Air India (@airindiain) January 10, 2021
ಇನ್ನು, ಏರ್ ಇಂಡಿಯಾ ಕೂಡ ಟ್ವೀಟ್ ಮಾಡಿದ್ದು, ಊಹಿಸಿಕೊಳ್ಳಿ, ಮಹಿಳಾ ಸಿಬ್ಬಂದಿ ಇರುವ ವಿಮಾನ ಉತ್ತರ ಧ್ರುವವನ್ನು ದಾಟಿದೆ. AI 176 ವಿಮಾನ 30,000 ಅಡಿ ಎತ್ತರದಲ್ಲಿ ಪ್ರಯಾಣಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದೆ.
ಸಿಬ್ಬಂದಿ ಯಾರ್ಯಾರು?: ಕ್ಯಾಪ್ಟನ್ ಜೋಯಾ ಅಗರ್ವಾಲ್, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಶಾ ಸೋನವೇರ್ ಮತ್ತು ಕ್ಯಾಪ್ಟನ್ ಶಿವಾನಿ ಮನ್ಹಾಸ್.