ಬೆಂಗಳೂರು : ಏರ್ ಇಂಡಿಯಾದ ಈ ಮಹತ್ವದ ಕಾರ್ಯದಲ್ಲಿ ಮಹಿಳಾ ಸಿಬ್ಬಂದಿ ತಾವೂ ಯಾರಿಗೂ ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಆಗಮಿಸುತ್ತಿದೆ. ವಿಶೇಷ ಅಂದರೆ ಇದಕ್ಕೆ ಸಂಪೂರ್ಣ ಮಹಿಳೆಯರ ಸಾರಥ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೊನಿಂದ ಬೆಂಗಳೂರಿಗೆ ವಿಮಾನ ಬಂದಿಳಿದಿದೆ.
ಉತ್ತರ ಧ್ರುವದ ಮೇಲೆ ಹೋಗಿ ಅಟ್ಲಾಂಟಿಕ್ ಮಾರ್ಗದ ಮೂಲಕ ವಿಶ್ವದ ಇನ್ನೊಂದು ತುದಿಯಾದ ಕರ್ನಾಟಕ ರಾಜಧಾನಿಯನ್ನು ತಲುಪುವ ಮೂಲಕ ಮಹಿಳಾ ಧೀರೆ ಪಡೆ ದಾಖಲೆ ಬರೆದಿದೆ. ಎಐ 176 ವಿಮಾನ ಶನಿವಾರ ರಾತ್ರಿ 8.30ಕ್ಕೆ (ಸ್ಥಳೀಯ ಸಮಯ) ಸ್ಯಾನ್ ಫ್ರಾನ್ಸಿಸ್ಕೊದಿಂದ ಹೊರಟಿದ್ದು, ಸೋಮವಾರ ಮುಂಜಾನೆ ಸರಿಸುಮಾರು 4ಕ್ಕೆ ಬೆಂಗಳೂರಿಗೆ ತಲುಪಿದೆ. ಬೆಂಗಳೂರಿಗೆ ವಿಮಾನ ಬಂದಿಳಿದಿರುವುದರ ಬಗ್ಗೆ 4.12 ಗಂಟೆಗೆ ಏರ್ ಇಂಡಿಯಾ ಟ್ವೀಟ್ ಮಾಡಿದೆ.
ವಿಶ್ವದ ಅತಿ ಉದ್ದದ ವಾಣಿಜ್ಯ ವಿಮಾನ ಸಂಚಾರ ಇದಾಗಿದೆ ಎಂದು ಏರ್ ಇಂಡಿಯಾ ಹೇಳಿದೆ. ನಿರ್ದಿಷ್ಟ ದಿನದ ಗಾಳಿಯ ವೇಗವನ್ನು ಅವಲಂಬಿಸಿ ಈ ಮಾರ್ಗದಲ್ಲಿ ಒಟ್ಟು ಹಾರಾಟದ ಸಮಯ 17 ಗಂಟೆಗಳಿಗಿಂತ ಹೆಚ್ಚಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಕ್ಯಾಪ್ಟನ್ ಜೋಯಾ ಅಗರ್ವಾಲ್, ಕ್ಯಾಪ್ಟನ್ ಪಾಪಗಿರಿ ತನ್ಮೈ, ಕ್ಯಾಪ್ಟನ್ ಆಕಾಂಶ ಮತ್ತು ಕ್ಯಾಪ್ಟನ್ ಶಿವಾನಿ ತಂಡ ಸತತ 17 ಗಂಟೆಗಳ ಪ್ರಯಾಣ ಬಳಿಕ ಬೆಂಗಳೂರು ಕೇಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ ಎಂದು ಏರ್ ಇಂಡಿಯಾ ಟ್ವೀಟ್ ಮಾಡಿದೆ. AI 176 ವಿಮಾನ 30,000 ಅಡಿ ಎತ್ತರದಲ್ಲಿ ಪ್ರಯಾಣಿಸಿ ಸುಗಮ ಲ್ಯಾಂಡಿಂಗ್ ಬಗ್ಗೆ ಏರ್ ಇಂಡಿಯಾ ಹರ್ಷ ವ್ಯಕ್ತಪಡಿಸಿದೆ.