ETV Bharat / state

ದೇಶಿ ಸಮ್ಮೇಳನದಲ್ಲಿ ಗಮನ ಸೆಳೆದ ಕೊಯ್ಲೋತ್ತರ ತಂತ್ರಜ್ಞಾನ ಬಳಕೆ ವಸ್ತುಪ್ರದರ್ಶನ

author img

By ETV Bharat Karnataka Team

Published : Oct 19, 2023, 9:22 AM IST

ಬೆಂಗಳೂರಿನ ಜಿಕೆವಿಕೆಯಲ್ಲಿ ದೇಶಿ ಕೃಷಿ ಸಮ್ಮೇಳನ ನಡೆಯಿತು. ಈ ವೇಳೆ ಕೋಯ್ಲೋತ್ತರ ತಂತ್ರಜ್ಞಾನ ಬಳಕೆ ಮತ್ತು ವಿವಿಧ ವಿಚಾರಗಳ ಕುರಿತು ಬೆಳಕು ಚೆಲ್ಲಲಾಯಿತು. ನೂರಾರು ಜನರು ಕಾರ್ಯಕ್ರಮದ ಪ್ರಯೋಜನ ಪಡೆದರು.

agriculture-summit-in-bengaluru
ದೇಸಿ ಸಮ್ಮೇಳನದಲ್ಲಿ ಗಮನ ಸೆಳೆದ ಕೊಯ್ಲೋತ್ತರ ತಂತ್ರಜ್ಞಾನ ಬಳಕೆ ವಸ್ತುಪ್ರದರ್ಶನ..!

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆಯ ಫಲವಾಗಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಆರಂಭಗೊಂಡಿದ್ದು, ಸಿರಿಧಾನ್ಯ ಉತ್ಪಾದನೆ, ಜೇನು ಕೃಷಿ, ಬೀಜೋಪಚಾರ, ಖುಷ್ಕಿ ಬೇಸಾಯ ಹಾಗು ಕೋಯ್ಲೋತ್ತರ ಚಟುವಟಿಕೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತು ದೇಸಿ ಸಮ್ಮೇಳನದಲ್ಲಿ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ರೈತಾಪಿ ಸಮುದಾಯವನ್ನು ಆಕರ್ಷಿಸಿತು. ಯುವ ಸಮೂಹವೇ ಇದ್ದ ದೇಸಿ ಸಮ್ಮೇಳನದಲ್ಲಿ ಕೃಷಿ ಪರಿಕರ ಪ್ರದರ್ಶನ ವಿಶೇಷವಾಗಿ ಗಮನ ಸೆಳೆಯಿತು.

ನಗರದ ಜಿಕೆವಿಕೆಯಲ್ಲಿ ಕೃಷಿ ವಿಸ್ತರಣಾ ಸೇವೆಯಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಡಿಪ್ಲೋಮಾ ಕೋರ್ಸ್ ಸಮ್ಮೇಳನ ನಡೆಯಿತು. ಇದು ದಕ್ಷಿಣ ಕರ್ನಾಟಕದ 16 ಜಿಲ್ಲೆಗಳ ಕೃಷಿ ಪರಿಕರ ಮಾರಾಟಗಾರರಿಗೆ ಒಂದು ವೇದಿಕೆಯನ್ನು ಕಲ್ಪಿಸಿತು. ಅಂದಾಜು 1,000ಕ್ಕೂ ಹೆಚ್ಚಿನ ಕೃಷಿ ಪರಿಕರ ಉದ್ದಿಮೆದಾರರು ಭಾಗವಹಿಸಿದ್ದರು. ಸಮ್ಮೇಳನದಲ್ಲಿ ವಸ್ತುಪ್ರದರ್ಶನ, ವಿಚಾರ ವಿನಿಮಯ, ವಿಸ್ತರಣಾ ಕಾರ್ಯಕರ್ತರ ಯಶೋಗಾಥೆಗಳು ನಡೆದವು.

agriculture-summit-in-bengaluru
ಬೆಂಗಳೂರಿನ ಜಿಕೆವಿಕೆಯಲ್ಲಿ ದೇಶಿ ಕೃಷಿ ಸಮ್ಮೇಳನ

ಸಮ್ಮೇಳನದಲ್ಲಿ ಕೃಷಿ ವಸ್ತುಪ್ರದರ್ಶನ : ಜನರು ವಸ್ತು ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜಿತ ಬೀಜ( ಬೆಳೆಗಳು) ಕುರಿತು ಪ್ರದರ್ಶನದ ಮೂಲಕ ಮಾಹಿತಿ ನೀಡಲಾಯಿತು. ಜೈವಿಕ ಗೊಬ್ಬರ ಬೀಜೋಪಚಾರ ಯಾವ ರೀತಿ ನಡೆಸಬೇಕು, ಎಷ್ಟು ದ್ರಾವಣಕ್ಕೆ ಎಷ್ಟು ಗೊಬ್ಬರವನ್ನು ಹಾಕಿ ಮಿಶ್ರಣ ಮಾಡಬೇಕು, ಒಂದು ಎಕರೆಗೆ ಎಷ್ಟು ಮಿಶ್ರಣ ಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಲಾಯಿತು. ಕೃಷಿಕರಿಗೆ ಕೃಷಿಯಲ್ಲಿ ಇರಬೇಕಾದ ಅಗತ್ಯ ಮಾಹಿತಿಗಳ ಜಾಗೃತಿ ಮೂಡಿಸಲಾಯಿತು. ಇದರ ಜೊತೆಯಲ್ಲಿ ಬೀಜಕ್ಕೆ ಎಣ್ಣೆಯ ಲೇಪನ ಮಾಡುವ ವಿಧಾನದ ಬಗ್ಗೆಯೂ ಮಾಹಿತಿ ನೀಡಲಾಯಿತು. ದ್ವಿದಳ ಧಾನ್ಯದ ಬೀಜವನ್ನು ಸುರಕ್ಷಿತ ತೇವಾಂಶದಲ್ಲಿ ಯಾವ ರೀತಿ ಇರಿಸಬೇಕು ಎನ್ನುವ ವಿವರಣೆಯನ್ನು ವಸ್ತುಪ್ರದರ್ಶನದಲ್ಲಿ ನೀಡಲಾಯಿತು. ನಂತರ ಬೀಜವರ್ಣ ಲೇಖನದ ಉಪಯೋಗಗಳ ಬಗ್ಗೆ ಮಾಹಿತಿ ನೀಡಲಾಯಿತು.

agriculture-summit-in-bengaluru
ಸಮ್ಮೇಳನದಲ್ಲಿ ಕೃಷಿ ವಸ್ತುಪ್ರದರ್ಶನ

ದಿಢೀರ್ ತೇವಾಂಶ ಪರೀಕ್ಷೆ ವಿಧಾನಗಳನ್ನು ತಿಳಿಸುವ ಮಳಿಗೆಯಲ್ಲಿ ಯಾವ ಲವಣವನ್ನು ಉಪಯೋಗ ಮಾಡಬೇಕು, ಎಷ್ಟು ದ್ರಾವಣವನ್ನು ತಯಾರು ಮಾಡಬೇಕು, ಪರೀಕ್ಷೆ ಮಾಡುವ ಬೀಜಗಳನ್ನು ಎಷ್ಟು ಸಮಯ ನೀರಿನಲ್ಲಿ ನೆನೆಸಿ ಇಡಬೇಕು ಎನ್ನುವುದು ಸೇರಿದಂತೆ ಇಡೀ ವಿಧಾನದ ವಿವರಣೆ ನೀಡಲಾಗಿತ್ತು. ಹೀಗೆ ಬಂದ ಕೃಷಿ ಪರಿಕರ ಮಾರಾಟಗಾರರಿಗೆ ಇದರ ವಿವರ ನೀಡಲಾಯಿತು. ಸಾವಯವ ತರಕಾರಿಗಳು ಮತ್ತು ಹಣ್ಣುಗಳ ಪ್ರದರ್ಶಿಸಿ ಇವುಗಳ ಉಪಯೋಗದ ಬಗ್ಗೆಯೂ ಅಗತ್ಯ ಮಾಹಿತಿ ನೀಡಲಾಯಿತು. ಇವೆಲ್ಲವನ್ನೂ ರೈತರಿಗೆ ತಲುಪಿಸುವಂತೆ ಕೃಷಿ ಪರಿಕರ ಮಾರಾಟಗಾರರಿಗೆ ತಿಳುವಳಿಕೆ ಮೂಡಿಸಲಾಯಿತು.

ಇನ್ನು, ಮಾದರಿ ಕೃಷಿ ಪರಿಕರ ಮಾರಾಟ ಮಳಿಗೆಯನ್ನು ಇಲ್ಲಿ ತೆರೆಯಲಾಗಿತ್ತು. ಇಲ್ಲಿ ರಸಗೊಬ್ಬರದ ದರ ಪಟ್ಟಿಯನ್ನು ಪ್ರದರ್ಶನ ಮಾಡುವ ಜೊತೆಗೆ ಕೃಷಿ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಯಾವ ಪರಿಕರಗಳನ್ನು ಯಾವಾಗ ಬಳಸಬೇಕು ಯಾವ ಪರಿಕರದ ಅಗತ್ಯ ಎಷ್ಟಿರುತ್ತದೆ ಎನ್ನುವ ವಿವರಣೆ ನೀಡಲಾಯಿತು.

ಕೊಯ್ಲೋತ್ತರ ತಂತ್ರಜ್ಞಾನದ ಬಳಕೆ : ಇನ್ನು ಈ ಪ್ರದರ್ಶನದ ಪ್ರಮುಖ ಭಾಗ ಕೊಯ್ಲೋತ್ತರ ತಂತ್ರಜ್ಞಾನದ ಬಳಕೆಯಾಗಿದೆ. ಧಾನ್ಯದ ಹೊಟ್ಟು ತೆಗೆಯುವ ಯಂತ್ರ, ಕಡಲೆಕಾಯಿ ಬೀಜ ಬಿಡಿಸುವ ಯಂತ್ರ, ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರ, ಅಡಿಕೆ ಸಿಪ್ಪೆ ಸುಲಿಯುವ ಯಂತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ತೆಂಗಿನಕಾಯಿ ಸಿಪ್ಪೆ ಸುಲಿಯುವ ಯಂತ್ರವನ್ನು ಪ್ರದರ್ಶನ ಮಾಡಿ ಕೃಷಿ ವಿವಿ ಸಹಕಾರದಿಂದ ಮಾಡಿರುವ ತಂತ್ರಜ್ಞಾನದ ಆವಿಷ್ಕಾರಗಳ ಮಾಹಿತಿಯನ್ನು ಮಾರಾಟಗಾರರ ಮೂಲಕ ರೈತರಿಗೆ ತಲುಪಿಸುವ ಕೆಲಸ ಮಾಡಲಾಯಿತು.

ಸಿರಿಧಾನ್ಯಗಳನ್ನು ಪ್ರದರ್ಶನ ಮಾಡಿ ಅವುಗಳ ಉಪಯುಕ್ತತೆ ಬೆಳೆಯುವ ವಿಧಾನದ ವಿವರಣೆ ನೀಡಲಾಯಿತು. ಇತ್ತೀಚಿನ ದಿನಗಳಲ್ಲಿ ಮಳೆ ಕಡಿಮೆಯಾಗುತ್ತಿದ್ದು ಖುಷ್ಕಿ ಬೇಸಾಯ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು. ಹವಾಮಾನ ವೈಪರೀತ್ಯದಿಂದಾಗಿ ಮಳೆ ಅವಲಂಬಿತ ಬೆಳೆ ಯೋಜನೆಯ ಕಾರ್ಯ ತಂತ್ರಗಳ ಕುರಿತು ವಿವರ ನೀಡಲಾಯಿತು. ಬೆಳೆ ಪದ್ಧತಿಯಲ್ಲಿನ ಬದಲಾವಣೆ ಬೇಸಾಯ ಕ್ರಮದ ಅಳವಡಿಕೆ ಸೇರಿದಂತೆ ಖುಷ್ಕಿ ವಿವರಣೆ ನೀಡಲಾಯಿತು. ರಾಗಿ ಮತ್ತು ತೊಗರಿ, ಮುಸುಕಿನ ಜೋಳ ಮತ್ತು ತೊಗರಿ, ಮುಸುಕಿನ ಜೋಳ ಮತ್ತು ಹುರುಳಿಕಾಯಿ, ನೆಲಗಡಲೆ ಮತ್ತು ತೊಗರಿ ಯಾವಾಗ ಬೆಳೆಯಬೇಕು ಎಷ್ಟು ಮಳೆ ಬಿದ್ದಾಗ ಬೆಳೆಯಬೇಕು ಎನ್ನುವ ಕುರಿತು ವಿವರಣೆ ನೀಡಲಾಯಿತು.

ಒಟ್ಟಿನಲ್ಲಿ ಜಿಕೆವಿಕೆ ದೇಸಿ ಸಮ್ಮೇಳನ ನಡೆದ ಸಭಾಂಗಣದಲ್ಲಿ ಕೃಷಿ ಪರಿಕರ ವಿಸ್ತಾರಕರ ಚಿಂತನ ಮಂಥನ, ವಿಚಾರ ವಿನಿಮಯ ನಡೆಯುವ ಜತೆಯಲ್ಲಿ ಸಭಾಂಗಣದ ಹೊರಭಾಗದಲ್ಲಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಮತ್ತು ಅದರಿಂದಾಗುವ ಉಪಯೋಗ ಹಾಗು ಲಾಭದ ಕುರಿತು ಪ್ರದರ್ಶನದ ಮೂಲಕ ಉಪಯುಕ್ತ ಮಾಹಿತಿ ಒದಗಿಸಿಕೊಡಲಾಯಿತು.

ಇದನ್ನೂ ಓದಿ : ನೃತ್ಯ, ಸಾಹಿತ್ಯ ಕೃಷಿಯಲ್ಲಿ ಪರಿಣಿತರು: 88ರ ಹರೆಯದಲ್ಲೂ ಯುವಜನತೆಯನ್ನು ನಾಚಿಸುವಂತ ಜೀವನೋತ್ಸಾಹ.. ಆರೋಗ್ಯದ ಗುಟ್ಟು ಹೇಳ್ತಾರೆ ಹಾವೇರಿಯ ಅಜ್ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.