ETV Bharat / state

ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಅಲ್ಪಾವಧಿ ಕೃಷಿ ಸಾಲ ನೀಡಲು ವಿಧಿಸಿರುವ ಷರತ್ತುಗಳೇನು!? - ಅಲ್ಪಾವಧಿ ಕೃಷಿ ಸಾಲ

ರೈತರಿಗೆ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ವರೆಗೂ ಅಲ್ಪಾವಧಿ ಕೃಷಿ ಸಾಲ ನೀಡುವಂತೆ ಸರ್ಕಾರ ಆದೇಶಿಸಿದೆ. ಆದರೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ.

Agriculture Short Term Loan Conditions
ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಅಲ್ಪಾವಧಿ ಕೃಷಿ ಸಾಲದ ಷರತ್ತುಗಳು
author img

By

Published : May 23, 2020, 1:04 PM IST

ಬೆಂಗಳೂರು: ರೈತರಿಗೆ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ವರೆಗೂ ಅಲ್ಪಾವಧಿ ಕೃಷಿ ಸಾಲ ನೀಡುವಂತೆ ಸರ್ಕಾರ ಆದೇಶಿಸಿದೆ.

2019-2020 ಸಾಲಿಗೆ ರಾಜ್ಯದ ರೈತರಿಗೆ ಸಹಕಾರಿ ಸಂಸ್ಥೆಗಳು ಶೂನ್ಯ ಬಡ್ಡಿ ದರ ಅನ್ವಯವಾಗುವಂತೆ 3 ಲಕ್ಷ ರೂ.ವರೆಗೆ ಅಲ್ಪಾವಧಿ ಕೃಷಿ ಸಾಲ ನೀಡುವ ಯೋಜನೆಯನ್ನು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಜಾರಿಗೊಳಿಸಲಾಗಿದೆ.

ಸಾಲ ವಿತರಣಾ ಅವಧಿ ಮುಕ್ತಾಯವಾಗಿರುವ ಕಾರಣ ಷರತ್ತು ವಿಧಿಸುವಂತೆ ಕೋರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಸಹಕಾರಿಗಳು ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಸಹಕಾರಿ ಸಂಘಗಳ ನಿಬಂಧಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ಷರತ್ತುಗಳೇನು? :

  • ಈ ಯೋಜನೆಯು ಗೊತ್ತುಪಡಿಸಿದ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು ಅಂದರೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​​ಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು, ಟಿಬೇಟಿಯನ್ ಸಹಕಾರ ಸಂಸ್ಥೆಗಳು, ಕೃಷಿ ಮತ್ತು ಕೃಷಿ ಸಂಬಂಧಿತ ಅಲ್ಪಾವಧಿ ಸಾಲಗಳನ್ನು ನೀಡುತ್ತಿರುವ ಲ್ಯಾಂಪ್ಸ್ ಸಹಕಾರ ಸಂಘಗಳು, ಪಿಕಾರ್ಡ್ ಬ್ಯಾಂಕ್​ಗಳು ಮತ್ತು ಸಹಕಾರ ಸಂಘಗಳ ನಿಬಂಧಕರು ಈ ಯೋಜನೆಯಡಿ ಅರ್ಹ ಎಂದು ಗುರುತಿಸುವ ಇತರೆ ಸಹಕಾರಿ ಸಂಸ್ಥೆಗಳು. (ಪಟ್ಟಣ ಸಹಕಾರ ಬ್ಯಾಂಕ್​​ಗಳು ನೀಡುವ ಸಾಲಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ).
  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸ್ಥಗಿತ/ಸಮಾಪನೆಗೊಂಡಿದ್ದಲ್ಲಿ ಅಂತಹ ಕಾರ್ಯ ವ್ಯಾಪ್ತಿಯಲ್ಲಿ ಮಾತ್ರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​​ಗಳು ಅಲ್ಪಾವಧಿ ಕೃಷಿ ಸಾಲಗಳನ್ನು ವಿತರಿಸತಕ್ಕದ್ದು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​​ಗಳು ನೇರವಾಗಿ ವಿತರಿಸಿದ ಸಾಲಗಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅನ್ವಯವಾಗುವ ಬಡ್ಡಿ ಸಹಾಯಧನದ ದರಕ್ಕಿಂತ ಶೇ. 2ರಷ್ಟು ಕಡಿಮೆ ಬಡ್ಡಿ ಸಹಾಯಧನ ಅನ್ವಯವಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
  • ಒಂದು ನಿರ್ದಿಷ್ಟ ಬ್ಯಾಂಕಿನ ವ್ಯಾಪ್ತಿಯ ಒಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತನ್ನ ವ್ಯಾಪ್ತಿಯ ರೈತರಿಗೆ ಸಾಲ ವಿತರಿಸಲು ವಿಫಲವಾದಲ್ಲಿ ಅಂತಹ ಪ್ರಕರಣಗಳಲ್ಲಿ ಪಕ್ಕದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಥವಾ ಅಪೆಕ್ಸ್ ಬ್ಯಾಂಕಿನ ಮೂಲಕ ಸಾಲ ವಿತರಿಸುವ ವ್ಯವಸ್ಥೆಯನ್ನು ಸಹಕಾರ ಸಂಘಗಳ ನಿಬಂಧಕರು ಮಾಡಲು ಕ್ರಮ ವಹಿಸಬೇಕೆಂದು ಸೂಚಿಸಲಾಗಿದೆ.
  • ಸ್ಕೇಲ್ ಆಫ್ ಫೈನಾನ್ಸ್ ಮತ್ತು ಬೆಳೆ ವಿಮೆ ಆಧಾರದ ಮೇಲೆ ಮಂಜೂರಾದ ಸಾಲದ ಮಿತಿಗೆ ಮಾತ್ರ ಬಡ್ಡಿ ರಿಯಾಯಿತಿ ಅನ್ವಯವಾಗುವುದು. ಇತರೆ ಉದ್ದೇಶಗಳಿಗೆ ಹೆಚ್ಚುವರಿ ಸಾಲಗಳಿಗೆ ಬಡ್ಡಿ ರಿಯಾಯಿತಿ ಇರುವುದಿಲ್ಲ. ಬೆಳೆ ವಿಮೆ ಯೋಜನೆಯಡಿಯಲ್ಲಿ ಘೋಷಣೆ ಮಾಡಿದ ಬೆಳೆಗೆ ಸಾಲ ಪಡೆದ ರೈತರಿಗೆ ಯಾವುದೇ ಹಂಗಾಮಿನಲ್ಲಿ ಸಾಲ ವಿತರಿಸಿದ್ದರೂ ಸಹ ಬೆಳೆ ವಿಮೆ ಹಂಗಾಮಿನಲ್ಲಿ ಕಡ್ಡಾಯವಾಗಿ ಬೆಳೆ ವಿಮೆ ಪ್ರೀಮಿಯಂನ್ನು ಪಾವತಿಸಿರಬೇಕು. ಕೇಂದ್ರ ಸರ್ಕಾರದಿಂದ ಸಂಘಗಳಿಗೆ ನೀಡಲಾಗಿರುವ ಸಬವೆಷನ್ಸ್ ಮತ್ತು ರೈತರಿಗೆ ನೀಡಲಾಗಿರುವ ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರದ ಯೋಜನೆಗೆ ಅಳವಡಿಸಿಕೊಂಡು ಪ್ರತ್ಯೇಕವಾಗಿ ಬಡ್ಡಿ ಸಹಾಯಧನದ ದರವನ್ನು ನಿಗದಿಪಡಿಸಲಾಗುವುದು.
  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ಗಳಿಂದ ಮಂಜೂರಾದ ಶೇ. 50ರಷ್ಟು ಹೆಚ್ಚುವರಿ ಸಾಲದ ಮೊತ್ತವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ಇದುವರೆಗೂ ಸಾಲ ಪಡೆಯದೆ ಇರುವ ಹೊಸ ಸದಸ್ಯರಿಗೆ ನೀಡಲಾಗುತ್ತದೆ. ಸಾಲ ನೀಡುವ ಸಂಸ್ಥೆಗಳು ಪ್ರಾಥಮಿಕ ಸಹಕಾರಿ ಸಂಸ್ಥೆಗಳಿಂದ ಮತ್ತು ಪ್ರಾಥಮಿಕ ಸಹಕಾರಿ ಸಂಸ್ಥೆಗಳು ರೈತ ಸದಸ್ಯರಿಂದ ಯಾವುದೇ ಪ್ರಕ್ರಿಯಾ ಶುಲ್ಕ ಅಥವಾ ಸೇವಾ ಶುಲ್ಕ ಹೆಸರಿನಲ್ಲಿ ಯಾವುದೇ ಹಣವನ್ನು ಸಂಗ್ರಹಿಸಬಾದೆಂದು ಆದೇಶದಲ್ಲಿ ತಿಳಿಸಲಾಗಿದೆ.
  • ಶೂನ್ಯ ಬಡ್ಡಿ ದರವು 3 ಲಕ್ಷ ರೂ.ವರೆಗೆ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ. 3 ಲಕ್ಷ ರೂ.ಗಿಂತ ಹೆಚ್ಚಿನ ಸಾಲಗಳ ಸಂಪೂರ್ಣ ಮೊತ್ತಕ್ಕೆ ಸಾಮಾನ್ಯ ಬಡ್ಡಿ ದರ ಅನ್ವಯವಾಗುತ್ತದೆ. ಈ ಬಡ್ಡಿ ದರವು ಏ. 1, 2019 ರಿಂದ ಮಾ. 31, 2020 ರವರೆಗೆ ನೀಡಲಾದ ಕೃಷಿ ಅಲ್ಪಾವಧಿ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ.
  • ರೈತರು ಸಹಕಾರಿ ಸಂಸ್ಥೆಗಳಿಗೆ ಮರುಪಾವತಿ ಗಡುವಿನೊಳಗಾಗಿ ಮರುಪಾವತಿಸಿದರೆ ಮಾತ್ರ ಈ ಸೌಲಭ್ಯವು ದೊರೆಯುತ್ತದೆ. ನಿಗದಿತ ಗಡುವಿನ ನಂತರ ಮರುಪಾವತಿಸಿದ ಸಾಲಗಳಿಗೆ ಸಾಲ ಪಡೆದ ದಿನಾಂಕದಿಂದ ಸಾಮಾನ್ಯ ಬಡ್ಡಿ ದರದಲ್ಲಿ ರೈತರು ಸಾಲ ಮರುಪಾವತಿಸಲು ಜವಾಬ್ದಾರರಾಗುತ್ತಾರೆ. ಬಡ್ಡಿ ರಿಯಾಯಿತಿಯನ್ನು ಗಡುವು ದಿನಾಂಕ ಅಥವಾ ಸಾಲ ಮರುಪಾವತಿಸಲಾದ ದಿನಾಂಕ ಇವುಗಳಲ್ಲಿ ಯಾವುದು ಮೊದಲೋ ಆ ದಿನಾಂಕದವರೆಗೆ ಪಾವತಿಸಲಾಗುವುದು. ಈ ಯೋಜನೆಯು ಸಹಕಾರಿ ಸಂಸ್ಥೆಗಳು ನೀಡುವ ಕೃಷಿಯೇತರ ಸಾಲಗಳಿಗೆ ಅನ್ವಯವಾಗುವುದಿಲ್ಲ. ಈ ಸಾಲಿನಲ್ಲಿ ಸಾಲ ವಿತರಿಸುವ ರೈತರ ಪೈಕಿ ಶೇ. 25ರಷ್ಟು ಸಾಲವನ್ನು ಹೊಸದಾಗಿ ಸಾಲ ಪಡೆಯುವ ರೈತರಿಗೆ ಕಡ್ಡಾಯವಾಗಿ ನೀಡಬೇಕು.

ಒಟ್ಟಾರೆಯಾಗಿ ವಿತರಿಸಿದ ಸಾಲದ ಪೈಕಿ ಶೇ. 24.10ರಷ್ಟು ಸಾಲವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಸಾಲ ನೀಡುವುದು ಕಡ್ಡಾಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.