ETV Bharat / state

100ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಚಿಂತನೆ: ಸಚಿವ ಚಲುವರಾಯಸ್ವಾಮಿ - ಈಟಿವಿ ಭಾರತ್​ ಕನ್ನಡ ನ್ಯೂಸ್

ರಾಜ್ಯದ ಹಲವಾರು ಕಡೆ ಮಳೆಯಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಅಂತಹ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ್ನಾಗಿ ಘೋಷನೆ ಮಾಡಲು ಚಿಂತನೆ ನಡೆಸುತ್ತೇವೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ
author img

By ETV Bharat Karnataka Team

Published : Aug 25, 2023, 6:34 PM IST

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿಕೆ

ಬೆಂಗಳೂರು : ರಾಜ್ಯದಲ್ಲಿ ಮಳೆಯ ಕೊರತೆ ಹೆಚ್ಚಾಗಿದ್ದು, ಶೇ.79ರಷ್ಟು ಮಾತ್ರ ಬೆಳೆಯಾಗಿದೆ. ಈ ಬಗ್ಗೆ ಬೆಳಗ್ಗೆಯಿಂದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ತೀವ್ರ ಬರಪೀಡಿತ ತಾಲೂಕುಗಳ ಆಯ್ದ ಗ್ರಾಮಗಳಲ್ಲಿ ಬೆಳೆ ಪರಿಸ್ಥಿತಿ ಸಮೀಕ್ಷೆ ಮಾಡಲಾಗುತ್ತಿದೆ. 100ಕ್ಕೂ ಹೆಚ್ಚು ತಾಲುಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುವ ಚಿಂತನೆ ಇದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ಹಾಗೂ ಹೊಸ ಘೋಷಣೆಗಳ ಅನುಷ್ಠಾನ ಕುರಿತು ಸಚಿವರು ಸಭೆ ನಡೆಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಾ, ಶೇ. 79 ರಷ್ಟು ಬೆಳೆಯಾದರೂ, ಗೊಬ್ಬರ, ಬೀಜದ ಸಮಸ್ಯೆ ಬರದಂತೆ ನೋಡಿಕೊಂಡಿದ್ದೇವೆ. ಬೆಳೆಯ ಫಲ ರೈತರಿಗೆ ಸಿಗುವ ಅವಕಾಶವಿಲ್ಲ. ಇದೊಂದು ನೋವಿನ ಸಂಗತಿ. ಕೆಲವು ಕಡೆ ಬೆಳೆ ಒಣಗುತ್ತಿದೆ. ಕೆಲವು ಕಡೆ ತೇವಾಂಶ ಕಡಿಮೆಯಾಗ್ತಿದೆ. ಕೃಷಿ ಹೊಂಡಗಳಿರುವ ಕಡೆ ಬೆಳೆ ರಕ್ಷಿಸಿಕೊಳ್ಳಬಹುದು. ವಾರದೊಳಗೆ ಮಳೆ ಬಂದರೆ ಅರ್ಧ ಫಸಲು ಬರಬಹುದು. ಆದರೆ ಅಂತಹ ವಾತಾವರಣ ಕಾಣಿಸುತ್ತಿಲ್ಲ. ಹಾಗಾಗಿ ಗಂಭೀರವಾಗಿ ನಾವು ತೆಗೆದುಕೊಂಡಿದ್ದೇವೆ ಎಂದರು.

ಬೆಳೆಗಳ ಕೊರತೆ ಎಷ್ಟು?: ರಾಜ್ಯದಲ್ಲಿ ಭತ್ತ 4 ಲಕ್ಷ ಹೆಕ್ಟೇರ್ ಕೊರತೆಯಿದೆ. 3.5 ಲಕ್ಷ ಹೆಕ್ಟೇರ್ ರಾಗಿ ಕೊರತೆ ಕಂಡುಬಂದಿದೆ. 1.8 ಲಕ್ಷ ಹೆಕ್ಟೇರ್ ತೊಗರಿ ಕೊರತೆ ಇದೆ. ಇನ್ನು ಹತ್ತಿ 1.43 ಲಕ್ಷ ಹೆಕ್ಟೇರ್ ಕೊರತೆ ಇದೆ. ಭತ್ತ ಮತ್ತು ರಾಗಿ ಹಾಕಲು ನಮಗೆ ಇನ್ನೂ ಕಾಲಾವಕಾಶವಿದೆ. ಆದರೆ, ತೊಗರಿ ಹಾಗೂ ಬೇರೆ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ.

ಈ ವರ್ಷ 16 ಲಕ್ಷ ರೈತರು ವಿಮೆಗೆ ನೋಂದಣಿ ಮಾಡಿದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ 35 ಕೋಟಿ ರೂ. ಪರಿಹಾರ ಕೊಡಿಸಿದ್ದು, ಬೆಳೆ ಹಾಕಿದ್ದಾರೆ. ಅದು ನಾಶವಾಗಿದೆ. ತುಮಕೂರು, ಗದಗ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ನಷ್ಟವಾಗಿದೆ. ಮಳೆ ಬಂದರೂ ಬೆಳೆ ಬರುವುದಿಲ್ಲವೆಂದು 194 ಪಂಚಾಯಿತಿಗಳಲ್ಲಿ ವಿಮೆ ಕೊಟ್ಟಿದ್ದೇವೆ. ಈ ಬಾರಿ ವಿಮೆ ನೋಂದಣಿ ಪ್ರಾರಂಭ ತಡವಾದ ಕಾರಣ ಹಾಗೂ ಮಳೆ ಇಲ್ಲದೆ ಬಿತ್ತನೆ ವಿಳಂಬವಾದ ಕಾರಣ ವಿಮೆ ನೋಂದಣಿ ಕಡಿಮೆಯಾಗಿದೆ. ಅದರೆ ಎಲ್ಲಾ ನೋಂದಾಯಿತ ರೈತರಿಗೆ ವಿಮೆ ಕ್ಲೈಮ್ ಸಿಗುವಂತೆ ನೋಡಿಕೊಳ್ಳಿ‌ ಎಂದು ಅಧಿಕಾರಿಗಳಿಗೆ ತಿಳಿಸಿದರು.

139 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಕಂಡುಬಂದಿದೆ. ಕೇಂದ್ರದ ಮಾನದಂಡದ ಪ್ರಕಾರ ಡ್ರಾಟ್ ಡಿಕ್ಲೇರ್ ಮಾಡಿಲ್ಲ. ಮತ್ತೆ ಅವರು ಪರಿಶೀಲನೆ ಮಾಡಬೇಕೆಂಬ ನಿಯಮವಿದೆ. ಒಂದು ತಾಲೂಕಿನಲ್ಲಿ ಹತ್ತು ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಬೇಕು. ಆಗಸ್ಟ್ ಅಂತ್ಯದ ವೇಳೆಗೆ ಅವರು ವರದಿ ನೀಡಬೇಕು. ಅದನ್ನು ಸಬ್ ಕಮಿಟಿಯಲ್ಲಿ ಚರ್ಚೆ ಮಾಡುತ್ತೇವೆ. ನಂತರ ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ. ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅವರು ಪ್ರತಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ವಾಸ್ತವ ಮಾಹಿತಿ ನೀಡ್ತಾರೆ. ನಾನು ಜಿಲ್ಲಾವಾರು ಭೇಟಿಗೆ ನಿರ್ಧರಿಸಿದ್ದು, ಮೊದಲು ಚಿತ್ರದುರ್ಗಕ್ಕೆ ಭೇಟಿ ನೀಡುತ್ತೇನೆ ಎಂದು ಮಾಹಿತಿ ನೀಡಿದರು.

ಮೋಡ ಬಿತ್ತನೆ ಚಿಂತನೆ ಇಲ್ಲ: ಈಗ ಮೋಡ ಬಿತ್ತೆ ಬಗ್ಗೆ ಚಿಂತನೆ ಮಾಡಿಲ್ಲ. ಈ ಹಿಂದೆ ಮೋಡ ಬಿತ್ತನೆ ಮಾಡಿದಾಗ ಯಾವುದೇ ಪ್ರಯೊಜನವಾಗಿರಲಿಲ್ಲ. ಬರಗಾಲ ಎಂದು ಘೋಷಿಸಲು ಮಾರ್ಗಸೂಚಿ ಪಾಲಿಸಬೇಕು. ಆದರೆ, ಕೆಲವು ಮಾರ್ಗಸೂಚಿ ಅಡ್ಡ ಬರುತ್ತಿರುವುದರಿಂದ ಘೋಷಿಸಲಾಗುತ್ತಿಲ್ಲ. ರಾಜ್ಯದಲ್ಲಿ ಬರದ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದೆ. ಈಗಾಗಲೇ ಬಿಪಿಎಲ್ ಕಾರ್ಡ್‌ದಾರರಿಗೆ ತಲಾ 5 ಕೆಜಿ ಅಕ್ಕಿ, ಐದು ಕೆಜಿ ಅಕ್ಕಿಯ ಬದಲು ಹಣ ಕೊಡುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ಹಣ ನೀಡುತ್ತಿದ್ದೇವೆ. ಇದೆಲ್ಲವೂ ರೈತರಿಗೆ ಅನುಕೂಲವಾಗುತ್ತಿದೆ ಎಂದು ಸಚಿವರು ಹೇಳಿದರು.

ಹೆಚ್ಚುವರಿ 5 ಜಲಾನಯನ ಯೋಜನೆ: ಕೇಂದ್ರ ಭೂ ಸಂಪನ್ಮೂಲ ಇಲಾಖೆಯು pmksy-wdc ಯೋಜನೆಯಡಿ ರಾಜ್ಯಕ್ಕೆ 57 ಜಲಾನಯನ ಯೋಜನೆಗಳನ್ನು 2.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನ ಮಾಡಲು 642.26 ಕೋಟಿ ರೂ.ಗಳ ಯೋಜನಾ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದ್ದು, ಮೊದಲ ಸ್ಥಾನ ಪಡೆದಿದೆ.

ಈ ಕಾರಣದಿಂದಾಗಿ ರಾಜ್ಯಕ್ಕೆ ಕೇಂದ್ರ ಸರ್ಕಾರವು ಐದು ಜಲಾನಯನ ಯೋಜನೆಗಳನ್ನು ಹೆಚ್ಚುವರಿಯಾಗಿ ಯೋಜನೆಯಡಿ ರಾಜ್ಯದ 5 ಜಿಲ್ಲೆಗಳ 5 ತಾಲೂಕುಗಳಲ್ಲಿ 15000 ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನ ಮಾಡಲು 38.12 ಕೋಟಿ ರೂ. ಯೋಜನಾ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಒಟ್ಟು 16 ಗ್ರಾಮಗಳ 3450.19 ಹೆಕ್ಟೇರ್ ಪ್ರದೇಶದಲ್ಲಿ 7.59 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ನೆರವಿನೊಂದಿಗೆ ಅನುಷ್ಠಾನ ಮಾಡಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು, ಹೆಚ್ಚುವರಿ ಈ ಯೋಜನೆಗೆ ಮಂಡ್ಯದಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಿರಿಧಾನ್ಯ ಮೇಳ, ಬೆಲ್ಲದ ಪರಿಷೆ: ಸಿರಿಧಾನ್ಯಗಳನ್ನು ಪ್ರೋತ್ಸಾಹಿಸಲು ಆಗಸ್ಟ್ 28 ರಂದು ಮಂಡ್ಯದಲ್ಲಿ ಸಿರಿಧಾನ್ಯ ಮೇಳ, ವಸ್ತು ಪ್ರದರ್ಶನ, ಬೆಲ್ಲದ ಪರಿಷೆ ಹಾಗೂ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಅಲ್ಲದೆ ಕಳಪೆ ಬಿತ್ತನೆ ಬೀಜ ಪೂರೈಕೆ ತಡೆಯುವ ಸಂಬಂಧ ಎರಡು ಮೂರು ಕಡೆ ಮಾತ್ರ ದೂರುಗಳು ಬಂದಿವೆ. ಈ ಕುರಿತು ಪ್ರಕರಣ ದಾಖಲು ಮಾಡಿದ್ದೇವೆ. ಇದರ ಜೊತೆಗೆ ತನಿಖೆ ಸಹ ನಡೆಯುತ್ತಿದೆ ಎಂದರು.

ಕಾವೇರಿ ನೀರು ವಿವಾದ: ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲರೂ ಈ ಬಗ್ಗೆ ಗಮನ ಕೊಡುತ್ತಿದ್ದಾರೆ. ಎಲ್ಲ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳುವುದಕ್ಕೆ ಆಗುವುದಿಲ್ಲ. ಅದಕ್ಕೆ ಸುಮ್ಮನೆ ಇದ್ದೇವೆ. ಕರ್ನಾಟಕ ಈಗಾಗಲೇ ಕಾವೇರಿ ವಿಚಾರದಲ್ಲಿ ಹೆಜ್ಜೆ ಇಟ್ಟಿದೆ. ರೈತರ ರಕ್ಷಣೆ ಮಾಡುವ ಕೆಲಸ ಆಯ್ತು. ಸುಪ್ರೀಂ ಕೋರ್ಟ್ ಅಷ್ಟು ಸುಲಭವಾಗಿ ತೀರ್ಮಾನ ಮಾಡುವುದಕ್ಕೆ ಬರಲ್ಲ ಎಂದರು.

ಇದನ್ನೂ ಓದಿ : ಮೇಕೆದಾಟು ಯೋಜನೆಯೊಂದೇ ಕಾವೇರಿ ನದಿ ನೀರು ಸಮಸ್ಯೆಗೆ ಪರಿಹಾರ: ಡಿಸಿಎಂ ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.