ಬೆಂಗಳೂರು: ಪುಸ್ತುತ ಪೂರ್ವ ಮುಂಗಾರು, ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮುಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಸಮೀಕ್ಷೆ ಮಾಹಿತಿಯಲ್ಲಿನ ವ್ಯತ್ಯಾಸಗಳನ್ನು ರೈತರು ಬೆಳೆ ದರ್ಶಕ್ ಆಪ್ ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.
ನಗರದ ಕೃಷಿ ಆಯುಕ್ತರ ಕಚೇರಿಯಲ್ಲಿ ರೈತ ಸಹಾಯವಾಣಿ ಕೇಂದ್ರದ ಉದ್ಘಾಟನೆ ಹಾಗೂ ಬೆಳೆ ಸಮೀಕ್ಷೆ ಕುರಿತು ತರಬೇತುದಾರರಿಗೆ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಬಳಿಕ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ 2017ಕ್ಕೂ ಮುನ್ನ ಬೆಳೆ ವಿಸ್ತೀರ್ಣ ಅಂಕಿ - ಅಂಶಗಳ ಅಂದಾಜು ಕಾರ್ಯವನ್ನು ಅಧಿಕಾರಿಗಳು ಭೌತಿಕವಾಗಿ ಮಾಡುತ್ತಿದ್ದುದರಿಂದ, ಸಮಯಕ್ಕೆ, ಸರಿಯಾಗಿ ಸರ್ವ/ಹಿಸ್ಸಾವಾರು ಬೆಳೆ ಮಾಹಿತಿಯ ದಾಖಲೆಯು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ, ಪಹಣಿಯಲ್ಲಿ ಬೆಳ ಮಾಹಿತಿ ದಾಖಲಿಸುವ ಕಾರ್ಯ ಸಮಯಕ್ಕೆ ಸರಿಯಾಗಿ ಆಗಲೇ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಹಾಗೂ ರಾಜ್ಯದ ಬೆಳೆವಾರು ವಿಸ್ತೀರ್ಣ ಮತ್ತು ಉತ್ಪಾದನೆಯನ್ನು ಅಂದಾಜಿಸುವ ಕಾರ್ಯವು ವಿಳಂಬವಾಗುತ್ತಿತ್ತು ಎಂದರು.
ಹೀಗಾಗಿ, ಸಕಾಲದಲ್ಲಿ ಸರ್ವೆ ನಂಬರ್‌ವಾದು/ಹಿಸ್ಸಾವಾರು/ತಾಕುವಾರು ಬೆಳೆ ಮಾಹಿತಿ ಪಡೆಯಲು ಪರಿಣಾಮಕಾರಿಯಾದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವುದು ಅವಶ್ಯಕವಾಗಿತ್ತು. ಈ ಹಿನ್ನೆಲೆಯಲ್ಲಿ 2017 ನೇ ಸಾಲಿನಿಂದ ಡಿ.ಪಿ.ಎ.ಆರ್ (ಇ-ಆಡಳಿತ) ಇಲಾಖಾ ವತಿಯಿಂದ ಅಭಿವೃದ್ಧಿ ಪಡಿಸಲಾದ ಜಿಪಿಎಸ್ ಆಧಾರಿತ ಮೊಬೈಲ್ ತಂತ್ರಾಂಶವನ್ನು ಬಳಸಿ ಸರ್ವ ನಂಬರ್/ಹಿಸ್ಸಾವಾರು ಬೆಳೆ ಮಾಹಿತಿಯನ್ನು ದಾಖಲಿಸುವ ಕಾರ್ಯ ಚಾಲ್ತಿಯಲ್ಲಿದೆ.
2019-20ನೇ ಸಾಲಿನಿಂದ ಕೃಷಿ ಇಲಾಖೆಯನ್ನು ನೋಡಲ್ ಇಲಾಖೆಯಾಗಿ ನೇಮಿಸಿದ್ದು, ಕಂದಾಯ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಂಡು ಖಾಸಗಿ ನಿವಾಸಿಗಳ (ಪಿ.ಆರ್-ಪ್ರೈವೇಟ್ ರೆಸಿಡೆಂಟ್ಸ್(ಪಿ.ಆರ್. ಮೊಬೈಲ್ ಆಪ್) ಮೂಲಕ ಜಿಲ್ಲಾಧಿಕಾರಿಗಳ ನೇರ ಉಸ್ತುವಾರಿಯಲ್ಲಿ ಕೈಗೊಳ್ಳಲಾಗುತ್ತಿದೆ. 2020ನೇ ಸಾಲಿನಿಂದ ರೈತರೇ ನೇರವಾಗಿ ತಮ್ಮ ಜಮೀನಿನ ಬೆಳೆ ವಿವರಗಳನ್ನು ರೈತರ ಮೊಬೈಲ್ ಆಪ್ ಮೂಲಕ ದಾಖಲಿಸಲು ಪ್ರೋತ್ಸಾಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಳೆ ಸಮೀಕ್ಷೆಯ ದತ್ತಾಂಶವನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ ಯೋಜನೆ, NDRF/SDRE ಪರಿಹಾರ ವಿತರಣೆ, ಬ್ಯಾಂಕ್ ಮೂಲಕ ಸಾಲ ವಿತರಣೆಗೆ, ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು, ಬೆಳೆ ಅಂಕಿ- ಅಂಶಗಳನ್ನು ಕ್ರೋಡೀಕರಿಸಲು, ವಿವಿಧ ಇಲಾಖೆಗಳ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ವಿತರಿಸಲು, ವಿವಿಧ ಬೆಳೆಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆ ನಿರ್ಧರಿಸಲು ಮತ್ತು ಸರ್ಕಾರದ ಇನ್ನಿತರ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಲಭ್ಯವಾಗಿಸಲಾಗುತ್ತಿದೆ. ಹಾಗೆಯೇ ಬೆಳೆ ಸಮೀಕ್ಷೆ ದತ್ತಾಂಶವು ಹಂಗಾಮುವಾರು ಅವಶ್ಯವಿರುವ ರಸಗೊಬ್ಬರಗಳ ಪುಮಾಣವನ್ನು ಅಂದಾಜಿಸಲು ಹಾಗೂ ಕಾವು ದಾಸ್ತಾನು ನಿರ್ವಹಿಸುವಲ್ಲಿ ಸಹಾಯವಾಗುತ್ತದೆ ಎಂದು ತಿಳಿಸಿದರು.
ಬೆಳೆ ಸಮೀಕ್ಷೆ ಕುರಿತು ರೈತರು ಹೆಚ್ಚಿನ ಮಾಹಿತಿ ಪಡೆಯಲು ಬೆಳೆ ಸಮೀಕ್ಷೆಯ ಸಹಾಯವಾಣಿ/ರೈತರ ಕರೆ ಕೇಂದ್ರ (ದೂರವಾಣಿ ಸಂಖ್ಯೆ: 18004253553) ಗೆ ಕರೆ ಮಾಡಬಹುದಾಗಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಬೆಳೆ ಸಮೀಕ್ಷೆ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಯ ಜಿಲ್ಲಾ/ತಾಲೂಕು ಮಟ್ಟದ ಮಾಸ್ಟರ್ ತರಬೇತುದಾರರಿಗೆ ಹಾಗೂ ಅಧಿಕಾರಿಗಳಿಗೆ SATCOM ಮೂಲಕ ಹಾಗೂ Online ತರಬೇತಿಗಳನ್ನು ಆಯೋಜಿಸಲಾಗಿರುತ್ತದೆ.
ಆದರೆ, ಬೆಳ ಸಮೀಕ್ಷೆ ಕಾರ್ಯವನ್ನು ಸಕಾಲದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೊಬೈಲ್ ಆಪ್ ಹಾಗೂ ಸಮೀಕ್ಷೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಮಾಸ್ಟರ್ ತರಬೇತುದಾರರಿಗೆ ಹೆಚ್ಚಿನ ಮಾಹಿತಿ ನೀಡಿ, ಸಾಮರ್ಥ್ಯ ವೃದ್ಧಿಸುವ ಸಲುವಾಗಿ ತರಬೇತಿ ನೀಡುವ ಅವಶ್ಯಕತೆ ಇದೆ ಎಂದರು.
ಈ ನಿಟ್ಟಿನಲ್ಲಿ ಸಕಾಲಿಕ ಹಾಗೂ ಸರ್ವೆ/ಹಿಸ್ಸಾವಾರು ನಿಖರ ಬೆಳೆ ಮಾಹಿತಿಯ ದಾಖಲೆಗೆ ಅನುವಾಗುವಂತೆ 2023-24 ನೇ ಸಾಲಿನ ಬೆಳ ಸಮೀಕ್ಷೆ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಾಸ್ಟ ತರಬೇತುದಾರರಿಗೆ ದಿನಾಂಕ: 17.08.2023 ಹಾಗೂ 18.08.2023ಗಳಂದು ವಿಭಾಗಾವಾರು ಎರಡು ದಿನದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ಸಿದ್ಧತೆ: ನದಿಯಲ್ಲಿ ನೀರಿಲ್ಲದಿರುವುದರಿಂದ ಪುಣ್ಯಸ್ನಾನಕ್ಕೆ ಅಡ್ಡಿ ಸಾಧ್ಯತೆ