ETV Bharat / state

ಬೆಂಗಳೂರಿನಲ್ಲಿ ಮತ್ತೆ ಕಾಣಿಸಿದ ಬೈಕ್​ಗಳು.. ಸರ ಎಗರಿಸೋವಾಗ ವೃದ್ಧೆಯನ್ನ ಬಿರುಸಾಗಿ ಎಳೆದ ಖದೀಮರು.. - chain theft

ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಖದೀಮರ ಬೈಕ್​ಗಳು ಸೌಂಡ್​ ಮಾಡುತ್ತಿವೆ. ಇಷ್ಟು ದಿನ ಪಲ್ಸರ್​ ಬೈಕ್​​ನಲ್ಲಿ ಓಡಾಡುತ್ತಿದ್ದ ಖದೀಮರು, ಇದೀಗ ಬೇರೆ ಬೈಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದಾರೆ.

ಸಿಸಿ ಟಿವಿಯಲ್ಲಿ ಸೆರೆಯಾದ ಸರಗಳ್ಳತನ
author img

By

Published : Jul 3, 2019, 1:35 PM IST

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಸರಗಳ್ಳರ ಹಾವಳಿ‌ ಹೆಚ್ಚಾಗಿದೆ. ನಿನ್ನೆ ನಗರದ ಹಲವೆಡೆ ಸರಗಳ್ಳತನ‌ ಮಾಡಿ ಖದೀಮರು ಪರಾರಿಯಾಗಿದ್ದಾರೆ.

ಜಯನಗರದ 10ನೇ ಬ್ಲಾಕ್​​ನಲ್ಲಿ ವೃದ್ಧೆ ಸಂಧ್ಯಾ ಎಂಬುವರು ದೇವಸ್ಥಾನಕ್ಕೆ ಹೋಗಿ ವಾಪಸ್​ ಬರುತ್ತಿದ್ದರು. ಈ ವೇಳೆ ಕೆಟಿಎಂ ಡ್ಯೂಕ್​​ ಬೈಕ್‌ನಲ್ಲಿ ಬಂದ ಇಬ್ಬರು ಸರಗಳ್ಳರು ವೃದ್ಧೆ ಅನ್ನೋದನ್ನೂ ನೋಡದೇ ಕುತ್ತಿಗೆಯಲ್ಲಿದ್ದ ಸರ ಎಗರಿಸಿ ಪರಾರಿಯಾಗಿದ್ದಾರೆ. ಕುತ್ತಿಗೆಯಲ್ಲಿನ ಸರ ಬರದಿದ್ದಾಗ ವೃದ್ಧೆಯನ್ನು ರಭಸವಾಗಿ ಎಳೆದು ಅಲ್ಲಿಂದ ಬೈಕ್​ ಓಡಿಸಿದ್ದಾರೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿ ಟಿವಿಯಲ್ಲಿ ಸೆರೆಯಾದ ಸರಗಳ್ಳತನ..

ಇಷ್ಟು ದಿನ ಪಲ್ಸರ್​ ಬೈಕ್​​ನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಖದೀಮರು, ಇದೀಗ ಡ್ಯೂಕ್​​ ಬೈಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಗಲು ಹೊತ್ತಿನಲ್ಲೇ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಈ ಕೃತ್ಯಕ್ಕೆ ಇಳಿಯುತ್ತಿದ್ದಾರೆ ಎನ್ನುತ್ತಿದ್ದಾರೆ ಸ್ಥಳೀಯರು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ನಿನ್ನೆ ಜೆಪಿ ನಗರ, ‌ಜಯನಗರ, ಮಾಗಡಿ ರಸ್ತೆ, ವೈಯಾಲಿಕಾವಲ್ ಸೇರಿದಂತೆ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ನಡೆದಿದ್ದು, ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್​ ತಮ್ಮ ಸಿಬ್ಬಂದಿಗೆ ಬೀಟ್​ನಲ್ಲಿ ತಿರುಗಲು ಖಡಕ್ ಸೂಚನೆ ನೀಡಿದ್ದಾರೆ.

Intro:KN_BNG_02_3_CHAIN THEFT_720
4498

ಸರ ಕದಿಯೋ ರಭಸದಲ್ಲಿ ವೃದ್ದ ಮಹಿಳೆಯನ್ನ ಎಳೆದು ಬೀಳಿಸಿದ ಖದೀಮರು

ಭವ್ಯ

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಸರಗಳ್ಳರ ಹಾವಳಿ‌ ಜಾಸ್ತಿಯಾಗಿದೆ. ನಿನ್ನೆ ನಗರದ ಹಲವೆಡೆ ಸರಗಳ್ಳತನ‌ ಮಾಡಿ ಎಸ್ಕೇಪ್ ಆಗಿದ್ದಾರೆ ಕಳ್ಳರು. ಇದೀಗ ದಕ್ಷಿಣಾ ವಿಭಾಗ ವ್ಯಾಪ್ತಿಯಲ್ಲಿ ಸರ ಕದಿಯೋ ರಭಸದಲ್ಲಿ ವೃದ್ದ ಮಹಿಳೆಯನ್ನ ಎಳೆದು ಬೀಳಿಸಿದ ಘಟನೆಬೆಂಗಳೂರಿನ ಜಯನಗರದ ೧೦ನೇ ಬ್ಲಾಕ್ ರಂಗೋಲಿ ಶೋರೂಂ ಬಳಿ‌ ನಡೆದಿದೆ .೬೩ ವರ್ಷದ ವೃದ್ದೆ ಸಂಧ್ಯಾ ಎಂಬುವರು ದೇವಸ್ಥಾನಕ್ಕೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಕೆಟಿಎಂ ಡ್ಯೂಕ್ ಬೈಕ್ ನಲ್ಲಿ ಬಂದ ಇಬ್ಬರು ಸರಗಳ್ಳರು ವೃದ್ದೆ ಎಂದು ನೋಡದೆ ಮಾನವೀಯತೆ ಮರೆತು ಕುತ್ತಿಗೆಯಲ್ಲಿದ್ದ ಸರ ಎಗರಿಸಿದ್ದಾರೆ.. ಇಷ್ಟು ದಿನ ಪಲ್ಸರ್ ಬೈಕ್‌ನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಕಳ್ಳರು. ಇದೀಗ ಡ್ಯೂಕ್ ಬೈಕ್ ನಲ್ಲಿ ಬಂದು ಹಗಲು ಹೊತ್ತಿನಲ್ಲೆ ಒಂಟಿ ಮಹಿಳೆಯರನ್ನೆ ಟಾರ್ಗೆಟ್ ಮಾಡಿ ಈ ಕೃತ್ಯ ಮಾಡಿದ್ದಾರೆ. ಇನ್ನು ಈ ಸಂಬಂಧ ಜಯನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ. ನೆನ್ನೆ ಜೆಪಿ ನಗರ, ‌ಜಯನಗರ . ಮಾಗಡಿ ರೋಡ್ .ವೈಯಾಲಿಕಾವಲ್ ಸೇರಿ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿದ್ದು ಇದೀಗ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಪೊಲೀಸರಿಗೆ ಬೀಟ್ ನಲ್ಲಿ ತಿರುಗಲು ಖಡಕ್ ಸೂಚನೆ ನಿಡಿBody:KN_BNG_02_3_CHAIN THEFT_7204498Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.