ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೊದಲ ಸೌರ ಯೋಜನೆ ಆದಿತ್ಯ-L1 ಅನ್ನು ನಿನ್ನೆ (ಶನಿವಾರ) ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದಕ್ಕೂ ಮೊದಲು ಆಗಸ್ಟ್ 23ರಂದು ಚಂದ್ರಯಾನ-3 ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಬಾಹ್ಯಾಕಾಶ ಪ್ರಪಂಚದಲ್ಲಿ ಇತಿಹಾಸ ಸೃಷ್ಟಿಸಿತ್ತು. ಚಂದ್ರ ಮತ್ತು ಸೂರ್ಯನ ನಂತರ ಇಸ್ರೋ ಹೊಸ ಮಿಷನ್ ಸಿದ್ಧಪಡಿಸಿದೆ. ಈ ಮಿಷನ್ ಏನು? ಉದ್ದೇಶವೇನು? ನೋಡೋಣ.
ಇಸ್ರೋ ಸಂಸ್ಥೆಯು ಖಗೋಳಶಾಸ್ತ್ರದ ಬಗ್ಗೆ ವೈಜ್ಞಾನಿಕ ತಿಳುವಳಿಕೆ ಹೆಚ್ಚಿಸುವ ಉದ್ದೇಶದಿಂದ ಹೊಸ ಯೋಜನೆಯನ್ನು ವಿನ್ಯಾಸಗೊಳಿಸಿದೆ. XPoSat (ಎಕ್ಸ್-ರೇ ಪೋಲಾರಿಮೀಟರ್ ಸ್ಯಾಟಲೈಟ್) ಎಂಬ ಭಾರತದ ಮೊದಲ ಪೋಲಾರಿಮೆಟ್ರಿ ಯೋಜನೆ ಅನುಷ್ಠಾನಕ್ಕೆ ತಯಾರಿ ಭರದಿಂದ ಸಾಗಿದೆ. ಇದು ತೀವ್ರ ಪರಿಸ್ಥಿತಿಗಳಲ್ಲಿ ಪ್ರಕಾಶಮಾನವಾದ ಖಗೋಳ ಎಕ್ಸ್-ರೇ ಮೂಲಗಳ ವಿವಿಧ ಡೈನಾಮಿಕ್ಸ್ ಅನ್ನು ಅಧ್ಯಯನ ಮಾಡುತ್ತದೆ.
ಮಾಹಿತಿ ಪ್ರಕಾರ, ಬಾಹ್ಯಾಕಾಶ ನೌಕೆಯು ಎರಡು ಪೇಲೋಡ್‌ಗಳನ್ನು (ಉಪಕರಣಗಳು) ಹೊತ್ತೊಯ್ಯುತ್ತದೆ. ಮೊದಲ ಪೇಲೋಡ್ POLIX (ಎಕ್ಸ್-ಕಿರಣಗಳಲ್ಲಿನ ಪೋಲಾರಿಮೀಟರ್ ಉಪಕರಣ). ಇದು 8-30 ಕೆವಿ ಪ್ರೋಟಾನ್‌ಗಳ ಮಧ್ಯಮ ಎಕ್ಸ್-ರೇ ಶಕ್ತಿಯ ಶ್ರೇಣಿಯಲ್ಲಿ ಧ್ರುವೀಯತೆಯ ನಿಯತಾಂಕಗಳನ್ನು ಅಂದರೆ ಡಿಗ್ರಿ ಮತ್ತು ಧ್ರುವೀಕರಣದ ಕೋನವನ್ನು ಅಳೆಯುತ್ತದೆ.
ಎರಡನೇ ಪೇಲೋಡ್, XSPECT (ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್). ಇದು 0.8–1.5 ಕೆವಿ ಶಕ್ತಿಯ ವ್ಯಾಪ್ತಿಯಲ್ಲಿ ರೋಹಿತ ದರ್ಶಕದ ಮಾಹಿತಿ ಒದಗಿಸುತ್ತದೆ. ಇದು ವಿವಿಧ ಮೂಲಗಳನ್ನು ಪರಿಶೀಲಿಸುತ್ತದೆ. ಉದಾಹರಣೆಗೆ, ಎಕ್ಸ್-ರೇ ಪಲ್ಸರ್‌ಗಳು, ಕಪ್ಪು ಕುಳಿಗಳು, ಬೈನರಿಗಳು, LMXB ಗಳು, AGN ಗಳು ಮತ್ತು ಮ್ಯಾಗ್ನೆಟಾರ್‌ಗಳಲ್ಲಿ ಕಡಿಮೆ ಕಾಂತೀಯ ಕ್ಷೇತ್ರಗಳು, ನ್ಯೂಟ್ರಾನ್ ನಕ್ಷತ್ರಗಳು.
ಇದನ್ನೂ ಓದಿ : ಭಾರತದ ಮೊದಲ ಸೌರ ಮಿಷನ್ ಆದಿತ್ಯ L1 ಗೆ ಯಂತ್ರೋಪಕರಣ ಪೂರೈಸಿದ ECIL, ಮಿಧಾನಿ ಸಂಸ್ಥೆಗಳು
XPoSat ಉಡಾವಣೆ ಯಾವಾಗ?: XPoSat ಉಡಾವಣೆಗೆ ಸಿದ್ಧವಾಗಿದೆ ಎಂದು ಬೆಂಗಳೂರಿನ ಇಸ್ರೋ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಕಪ್ಪು ಕುಳಿಗಳು, ನ್ಯೂಟ್ರಾನ್ ನಕ್ಷತ್ರಗಳು, ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯರ್ಗಳು, ಪಲ್ಸರ್ ವಿಂಡ್ ನಿಹಾರಿಕೆಗಳಂತಹ ವಿವಿಧ ಖಗೋಳ ಮೂಲಗಳಿಂದ ಹೊರಸೂಸುವ ಕಾರ್ಯವಿಧಾನವು ಸಂಕೀರ್ಣ ಭೌತಿಕ ಪ್ರಕ್ರಿಯೆಗಳಿಂದ ಹುಟ್ಟಿಕೊಂಡಿದೆ. ಇದನ್ನು ಅರ್ಥಮಾಡಿಕೊಳ್ಳುವುದು ಸವಾಲಾಗಿದೆ ಎಂದು ಅವರು ಹೇಳಿದ್ದಾರೆ.
POLIX ಎಂಬುದು 8-30 keVಯ ಖಗೋಳ ವೀಕ್ಷಣೆಗಾಗಿ ಮಾಡಿದ ಎಕ್ಸ್-ರೇ ಪೋಲಾರಿಮೀಟರ್ ಆಗಿದೆ. ಈ ಉಪಕರಣವು ಕೊಲಿಮೇಟರ್, ಸ್ಕ್ಯಾಟರರ್ ಮತ್ತು ನಾಲ್ಕು ಎಕ್ಸ್-ರೇ ಅನುಪಾತದ ಕೌಂಟರ್ ಡಿಟೆಕ್ಟರ್‌ಗಳಿಂದ ಹಾಗೂ ಕಡಿಮೆ ಪರಮಾಣು ದ್ರವ್ಯರಾಶಿಯಿಂದ ಮಾಡಲ್ಪಟ್ಟಿದೆ. ಸುಮಾರು ಐದು ವರ್ಷಗಳ XPoSat ಮಿಷನ್‌ನ ಯೋಜಿತ ಜೀವಿತಾವಧಿಯಲ್ಲಿ POLIX ವಿವಿಧ ವರ್ಗಗಳ ಸುಮಾರು 40 ಪ್ರಕಾಶಮಾನವಾದ ಖಗೋಳ ಮೂಲಗಳನ್ನು ವೀಕ್ಷಿಸುವ ನಿರೀಕ್ಷೆ ಇದೆ. (ಎಎನ್ಐ)
ಇದನ್ನೂ ಓದಿ : Chandrayaan 3: ಲ್ಯಾಂಡರ್ನಿಂದ 100 ಮೀಟರ್ ದೂರ ಚಲಿಸಿದ ರೋವರ್: ಶೀಘ್ರವೇ ಇಬ್ಬರೂ ನಿದ್ರೆಗೆ!