ETV Bharat / state

ಮಕ್ಕಳಾಗದ ಚಿಂತೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಶಿಕ್ಷಕಿ ಆತ್ಮಹತ್ಯೆ

author img

By

Published : Jul 15, 2023, 6:47 PM IST

ಮದುವೆಯಾಗಿ 13 ವರ್ಷವಾದರೂ ಮಕ್ಕಳಾಗದ ಚಿಂತೆಗೆ ಈಡಾಗಿದ್ದ ಶಿಕ್ಷಕಿ ಆತ್ಮಹತ್ಯೆ ಶರಣಾಗಿದ್ದಾರೆ.

teacher committed suicide
ಮದುವೆಯಾಗಿ 13 ವರ್ಷವಾದ್ರು ಮಕ್ಕಳಾಗದ ಚಿಂತೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಶಿಕ್ಷಕಿ ಆತ್ಮಹತ್ಯೆ

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಮದುವೆಯಾಗಿ 13 ವರ್ಷವಾಗಿದ್ದರೂ ಮಕ್ಕಳಗಾದ ಚಿಂತೆಯಿಂದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ಘಟನೆ ನಡೆದಿದೆ. ತಾಲೂಕಿನ ತುರುವನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಎನ್.ಟಿ.ಜ್ಯೋತಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಮಹಿಳೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನಲ್ಲಿಕಟ್ಟೆ ಗ್ರಾಮದವರು, 13 ವರ್ಷಗಳ ಹಿಂದೆ ಚಿತ್ರದುರ್ಗದ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಕೆ.ಯು. ವಿರೂಪಾಕ್ಷನನ್ನ ಮದುವೆಯಾಗಿದ್ರು.

ಕಳೆದ 12 ವರ್ಷಗಳಿಂದ ದೊಡ್ಡಬಳ್ಳಾಪುರ ತಾಲೂಕಿನ ಬನವತಿ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸಿತ್ತಿದ್ದ ಜ್ಯೋತಿ ಅವರು 9 ತಿಂಗಳ ಹಿಂದೆ ತುರುವನಹಳ್ಳಿ ಸರ್ಕಾರಿ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು. ಅಂದಿನಿಂದ ಸೋಮೇಶ್ವರ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಈ ನಡುವೆ ಪ್ರೌಢಶಾಲೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಇಡೀ ಜಿಲ್ಲೆಯಲ್ಲಿ ಎಲ್ಲಿಯೂ ಸ್ಥಳ ಸಿಗದ ಕಾರಣಕ್ಕೆ ವರ್ಗಾವಣೆ ಆಗಿರಲಿಲ್ಲ ಎಂಬ ವಿಚಾರಕ್ಕೆ ಬೇಜಾರಾಗಿದ್ದರು.

ಪತಿ ಕೆ.ಯು.ವಿರೂಪಾಕ್ಷ ಅವರು, ಜುಲೈ14ರಂದು ಬೆಳಗ್ಗೆ ಕೆಲಸದ ನಿಮಿತ್ತ ಯಲಹಂಕದ ದೊಡ್ಡಬೆಟ್ಟಹಳ್ಳಿಗೆ ಹೋಗಿದ್ದಾಗ, ಜ್ಯೋತಿ ಮನೆಯಲ್ಲಿ ಒಬ್ಬರೇ ಇದ್ದರು. ಶುಕ್ರವಾರ ರಾತ್ರಿ 8.30 ಗಂಟೆಯಲ್ಲಿ ಮನೆಗೆ ವಾಪಸ್ ಬಂದು ನೋಡಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಬೇಜಾರಿನಲ್ಲಿ ಮಲಗಿರಬಹುದು ಎಂದು ತಿಳಿದ ಗಂಡ ಮನೆಯ ಮೇಲಿನ ಕೊಠಡಿಯಲ್ಲಿ ಮಲಗಿದ್ದರು. ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಕೆಳಗಿಳಿದು ಬಂದು ಬಾಗಿಲು ತಟ್ಟಿದಾಗ ತೆಗೆಯಲಿಲ್ಲ. ಹೊರಗಿನಿಂದ ಬೆಡ್ ರೂಮಿನ ಕಿಟಕಿ ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಶಿಕ್ಷಕಿಯ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಜಯಕುಮಾರ್ ಜ್ಯೋತಿ ಅವರು, ''ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ಪಾಠ ಮಾಡುತ್ತಿದ್ದರು. ಕಳೆದ ಒಂಬತ್ತು ತಿಂಗಳ ಹಿಂದೆ ತುರುವನಹಳ್ಳಿಗೆ ಅವರೇ ವರ್ಗಾವಣೆ ಮಾಡಿಸಿಕೊಂಡಿದ್ದರು. ಮತ್ತೆ ಈಗ ಪ್ರೌಢಶಾಲೆಗೆ ವರ್ಗಾವಣೆ ಕೋರಿದ್ದರು. ಆದರೆ, ಎಲ್ಲಿಯೂ ಸ್ಥಳ ಖಾಲಿ ಇಲ್ಲದ ಕಾರಣ ವರ್ಗಾವಣೆ ಆಗಿರಲಿಲ್ಲ. ವರ್ಗಾವಣೆ ಆಗಲಿಲ್ಲ ಎಂಬುದು ಅವರ ಆತ್ಮಹತ್ಯೆಗೆ ಕಾರಣವಲ್ಲ. ಕಿನ್ನತೆಗೆ ಒಳಗಾಗಿದ್ದ ಅವರು ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿಸಿದ್ದಾರೆ. ಈ ಪ್ರಕರಣ ಕುರಿತು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Crime news: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ: ತಂದೆ - ಮಗಳು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.