ಯಲಹಂಕ : ಲೋಹದ ಹಕ್ಕಿಗಳ ಕಲರವಕ್ಕೆ ಯಲಹಂಕ ವಾಯುನೆಲೆ ಸಿದ್ಧವಾಗಿದೆ. 2023 ನೇ ಏರ್ ಶೋಗೆ ಕೇಂದ್ರ ರಕ್ಷಣಾ ಸಚಿವಾಲಯ ದಿನಾಂಕ ಫಿಕ್ಸ್ ಮಾಡಿದ್ದು, ಫೆಬ್ರವರಿ 13 ರಿಂದ 17ರ ವರೆಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದೆ.
ಏಷ್ಯಾದ ಅತಿದೊಡ್ಡ ಏರ್ ಶೋ ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಜೇಷನ್ ವತಿಯಿಂದ ನಡೆಯಲಿರುವ ವೈಮಾನಿಕ ಪ್ರದರ್ಶನದಲ್ಲಿ ಏರೋಸ್ಪೇಸ್ ಉದ್ಯಮದ ವಿವಿಧ ದೇಶಗಳ ಕಂಪನಿಗಳು ಮತ್ತು ತಯಾರಕರು ಭಾಗವಹಿಸುತ್ತಾರೆ.
ಇದನ್ನೂ ಓದಿ: ಏರೋ ಶೋನಲ್ಲಿ ಎಲ್ಲರ ಗಮನ ಸೆಳೆದ ಸಾರಂಗ್-ಸೂರ್ಯಕಿರಣ ವಿಶೇಷತೆ: ವಾಕ್ ಥ್ರೂ
ಆಕಾಶದಲ್ಲಿ ದೃಶ್ಯ ವೈಭವ ಸೃಷ್ಟಿಸುವ ಲೋಹದ ಹಕ್ಕಿಗಳು, ಅವುಗಳ ವೇಗ ಮತ್ತು ನಿಖರತೆ ನೋಡುಗರಲ್ಲಿ ಚಮತ್ಕಾರವನ್ನುಂಟು ಮಾಡುತ್ತದೆ. ಈ ವರ್ಷ 14ನೇ ಅವೃತ್ತಿಯ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಬೆಂಗಳೂರಿನ ಜನ ಏರ್ ಶೋ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.