ಬೆಂಗಳೂರು: 2021ರ ಫೆ.3 ರಿಂದ 7 ರ ವರೆಗೆ 4 ದಿನಗಳ ಕಾಲ ಏರೋ ಇಂಡಿಯಾ ಪ್ರದರ್ಶನ ಬೆಂಗಳೂರಿನ ಯಲಹಂಕ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆಯಲಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಹೇಳಿದೆ.
ಬೆಂಗಳೂರಿನಿಂದ ಏರೋ ಇಂಡಿಯಾ ಪ್ರದರ್ಶನ ಸ್ಥಳಾಂತರದ ಮಾತು ಕೇಳಿ ಬಂದಿತ್ತು. ಕಳೆದ ಬಾರಿ ಯಲಹಂಕ ವಾಯು ನೆಲೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಅಂದಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಥಳಾಂತರದ ಮುನ್ಸೂಚನೆ ಕೊಟ್ಟಿದ್ರು. ಕಳೆದ ಪ್ರದರ್ಶನದ ವೇಳೆ ಮುಂದಿನ ಪ್ರದರ್ಶನದ ದಿನಾಂಕ ಕೂಡ ಪ್ರಕಟ ಮಾಡಿರಲಿಲ್ಲ. ಇದೀಗ 3ನೇ ಆವೃತ್ತಿಯ ಏರೋ ಇಂಡಿಯಾದ ದಿನಾಂಕ ನಿಗದಿಪಡಿಸಿದೆ
ಬೆಂಗಳೂರು ಆಯ್ಕೆಯಾಗಲು ಕಾರಣಗಳು:
- ಟೇಕ್‌ಆಫ್, ಲ್ಯಾಂಡಿಂಗ್‌ಗೆ ವಿಶಾಲ ಜಾಗ.
- ತುರ್ತು ಲ್ಯಾಂಡಿಂಗ್‌ಗೆ 30 ಕಿಮೀ ಅಂತರದಲ್ಲಿಯೇ ಮೂರು ಏರ್‌ಪೋರ್ಟ್.
- ವಿವಿಧ ದೇಶದಿಂದ ಆಗಮಿಸುವ ಪೈಲಟ್, ಕಂಪನಿ ಮುಖ್ಯಸ್ಥರಿಗೆ ಅಗತ್ಯವಿರುವಷ್ಟು ಹೋಟೆಲ್ ಸೌಲಭ್ಯ.
- ಹಲವು ಏರೋಸ್ಪೇಸ್ ಕಂಪನಿಗಳ ಕಚೇರಿ ಬೆಂಗಳೂರಿನಲ್ಲಿರುವುದರಿಂದ ಬೆಸ್ಟ್ ಪ್ಲೇಸ್.